ನೋಯ್ಡಾ,- ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿದೆ. ನೋಯ್ಡಾ, ಘಾಜಿಯಾಬಾದ್, ಕಾನ್ಪುರ್ ಮತ್ತು ಅಲಹಬಾದ್‍ನಲ್ಲಿ ದುಷ್ಕರ್ಮಿಗಳು ಹುಸಿ ಬೆದರಿಕೆ ಕರೆ ಮಾಡಿ ಗಣರಾಜ್ಯೋತ್ಸವದಂದು ಬಾಂಬ್ ಸ್ಪೋಟಿಸುವುದಾಗಿ ಹೆದರಿಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿರುವ ಪ್ರಮುಖ ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳು, ಶಾಪಿಂಗ್ ಮಾಲ್‍ಗಳನ್ನು ಸ್ಪೋಟಿಸುವ ಕರೆ ಮಾಡುತ್ತಿದ್ದು ಈ ಕುರಿತಂತೆ ಸಂಬಂಧಪಟ್ಟ ಠಾಣೆಗಳಲ್ಲಿ ದೂರು ದಾಖಲಿಸಲಾಗುತ್ತಿದೆ.
ನಿನ್ನೆ ನೋಯ್ಡಾದ ಜನವಸತಿ ಸೆಕ್ಟರ್ 63 ರಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಬಂದ ಹಿನ್ನಲೆಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಬಾಂಬ್ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಬಾಂಬ್ ಮಾದರಿ ವಸ್ತುವನ್ನು ಪರಿಶೀಲಿಸಿದಾದ ಅದಕ್ಕೆ ಯಾವುದೇ ಸ್ಫೋಟಕಗಳನ್ನು ಅಳವಡಿಸದಿರುವುದು ಕಂಡು ಬಂದಿದೆ.
ಅದೆ ರೀತಿ ಪ್ರಮುಖ ಆಸ್ಪತ್ರೆಯೊಂದನ್ನು ಸ್ಫೋಟಿಸುವ ಕರೆ ಕೂಡ ಬಂದಿರುವುದರಿಂದ ಉತ್ತರ ಪ್ರದೇಶದ ಪೊಲೀಸರು ಗಣರಾಜ್ಯೋತ್ಸವದಂದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ರಣವಿಜಯ್‍ಸಿಂಗ್ ತಿಳಿಸಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					