ನವದೆಹಲಿ, ಜ.5- ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ವರೆಗೆ 3 ಕಿ.ಮೀ. ವಿಸ್ತಾರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆಗೆ ಇದ್ದ ತಡೆಯನ್ನು ಸರ್ವೋಚ್ಛ ನ್ಯಾಯಾಲಯ ತೆರವುಗೊಳಿಸಿದೆ. ಪರಿಸರ ಅನುಮತಿ ಮತ್ತು ಭೂ ಬಳಕೆಯಲ್ಲಿನ ಅಧಿಸೂಚನೆಯನ್ನು ಸುಪ್ರೀಂ ಕೋರ್ಟು ಬಹುಮತದ ತೀರ್ಪಿನ ಮೂಲಕ ವಿಸ್ತಾ ಯೋಜನೆ ಚಾಲನೆಗೊಳ್ಳಲು ದಾರಿ ಮಾಡಿಕೊಟ್ಟಿದೆ.
2019ರ ಸೆಪ್ಟೆಂಬರ್‍ನಲ್ಲಿ ಘೋಷಿಸಲಾದ ಸೆಂಟ್ರಲ್ ವಿಸ್ತಾ ಪುನರುಜ್ಜೀವನ ಯೋಜನೆ 900 ರಿಂದ 1,200 ಸಂಸದರಿಗೆ ಆಸನ ಕಲ್ಪಿಸುವ ಸಾಮಥ್ರ್ಯವನ್ನು ಹೊಂದಿದೆ. ನೂತನ ತ್ರಿಕೋನ ಸಂಸತ್ತಿನ ಕಟ್ಟಡ ನಿರ್ಮಾಣ ಯೋಜನೆ 2022ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸುವ ಗುರಿಯಿದ್ದು, ಆಗ ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. ಈ ಯೋಜನೆಯಡಿ ಸಾಮಾನ್ಯ ಕೇಂದ್ರ ಸಚಿವಾಲಯವನ್ನು 2024ರ ವೇಳೆಗೆ ನಿರ್ಮಿಸುವ ಸಾಧ್ಯತೆಯೂ ಇದೆ.
Laxmi News 24×7