Breaking News

ವಿಚಿತ್ರ ವದಂತಿ, ಅಲ್ಲಗಳೆದ ಶ್ರೀಶೈಲ ಜಗದ್ಗುರು……….

Spread the love

ಶ್ರೀಶೈಲದಲ್ಲಿ ದೀಪ ಆರಿದೆಯಂತೆ, ಪ್ರತಿಯೊಬ್ಬರೂ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ತಮ್ಮ ಮನೆಯ ಮಗನ ಮೇಲೆ ಸುರುವಬೇಕಂತೆ -ಇದು ಇಂದು ಸಂಜೆಯಿಂದ ಅಥಣಿಯಲ್ಲಿ ಹಬ್ಬಿರುವ ವಿಚಿತ್ರ ವದಂತಿ.

ಅಥಣಿಯ ಗಲ್ಲಿ ಗಲ್ಲಿಯಲ್ಲಿ ಜನ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ಮನೆಯ ಮಕ್ಕಳ ಮೇಲೆ ಸುರುವುತ್ತಿದ್ದಾರಂತೆ.

ಕೊರೋನೋ ಇರುವ ಈ ಸಂದರ್ಭದಲ್ಲಿ ಇಂತಹ ವದಂತಿ ಮತ್ತು ಇದರಿಂದ ಜನರು ಮಾಡುತ್ತಿರುವ ಮೂಢನಂಬಿಕೆಗೆ ಅವರು ತೀವ್ರ ಆಂತಕಕ್ಕೊಳಗಾಗಿದ್ದರು.

ಶ್ರೀಶೈಲದಲ್ಲಿ ಅಂತಾದ್ದೇನು ಆಗಿಲ್ಲ. ಇಲ್ಲಿ  ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಶ್ರೀಶೈಲ ಜಗದ್ಗುರುಗಳು  ತಿಳಿಸಿದ್ದಾರೆ.

ನನಗೂ ಸಾಕಷ್ಟು ಪೋನ್ ಗಳು ಬಂದಿವೆ. ಆದರೆ ಅವೆಲ್ಲ ಕೇವಲ ವದಂತಿ. ಜನರು ಇಂತದ್ದನ್ನೆಲ್ಲ ನಂಬಬಾರದು ಎಂದು ಅವರು ವಿನಂತಿಸಿದ್ದಾರೆ.

ಅಧಿಕಾರಿಗಳು ತಕ್ಷಣ ಈ ಬಗ್ಗೆ ಮಾಹಿತಿ ಪಡೆದು ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕಿದೆ. ಅಥಣಿಯ ವಿಕ್ರಮಪುರ ಭಾಗದಲ್ಲಿ ಮೊದಲು ಈ ವದಂತಿ ಆರಂಭವಾಗಿದ್ದು, ಅದು ಇತರ ಭಾಗಗಳಿಗೂ ಹಬ್ಬಿದೆ ಎಂದು ಬಸವರಾಜೇಶ್ವರಿ ತಿಳಿಸಿದ್ದಾರೆ.

credits to  pragati vahini ..


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ