Breaking News

ಅರ್ಧ ದೇಶವೇ ಹಸಿವಿನಿಂದಿರುವಾಗ ಹೊಸ ಸಂಸತ್ ಭವನ ಬೇಕಿತ್ತಾ?: ಪ್ರಧಾನಿಗೆ ನಟ ಕಮಲ್ ಹಾಸನ್ ಪ್ರಶ್ನೆ

Spread the love

ಚೆನ್ನೈ: ಪ್ರಧಾನಿ ಮೋದಿ ನೂತನ ಸಂಸತ್​ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ಬೆನ್ನಲ್ಲೇ ಪರ ವಿರೋಧಗಳು ಹೆಚ್ಚಾಗಿತ್ತಿವೆ. ದೇಶದ ಅರ್ಧದಷ್ಟು ಜನತೆ ಹಸಿವಿನಿಂದಿರುವಾಗ ಹೊಸ ಪಾರ್ಲಿಮೆಂಟ್ ಅವಶ್ಯಕತೆ ಇತ್ತಾ? ಅಂತಾ ನಟ, ರಾಜಕೀಯ ಮುಖಂಡ ಕಮಲ ಹಾಸನ್ ಪ್ರಶ್ನಿಸಿದ್ದಾರೆ.

ಚೀನಾದ ಮಹಾಗೋಡೆಯನ್ನು ನಿರ್ಮಿಸುವಾಗ ಸಾವಿರಾರು ಜನರು ಸಾವನ್ನಪ್ಪಿದರು. ಆದರೆ ಆ ರಾಷ್ಟ್ರ ಆ ಗೋಡೆಯನ್ನು ದೇಶದ ಜನರ ಕಾವಲು ಎಂದು ಕರೆಯಿತು.

ಈಗ ಭಾರತದಲ್ಲಿ ಕರೊನಾ ಕಾರಣದಿಂದಾಗಿ ಸಾವಿರಾರು ಜನರು ಕೊನೆಯುಸಿರೆಳೆಯುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಅರ್ಧ ಜನಸಂಖ್ಯೆಯೇ ಹಸಿದುಕೊಂಡಿದೆ. ಹೀಗಿರುವಾಗ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಸಂಸತ್​ ಭವನ ನಿರ್ಮಿಸುವುದು ಯಾರಿಗಾಗಿ ಎಂದು ಕಮಲ ಹಾಸನ್​ ಅವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ