ಬೆಳಗಾವಿ: ದಿನನಿತ್ಯ ಜನಜಂಗುಳಿಯಿಂದ ಬಣಗುಡುತ್ತಿದ್ದ ಕುಂದಾನಗರಿ ಜನತಾ ಕರ್ಫ್ಯೂ ಜಾರಿ ಹಿನ್ನೆಲೆ ಭಾನುವಾರ ಸಂಪೂರ್ಣ ಸ್ಥಬ್ದವಾದ ದೃಶ್ಯ ಕಂಡು ಬಂದಿತು.
.
ನಗರದ ಪ್ರಮುಖ ಬೀದಿಗಳು ಜನರಿಲ್ಲದೆ ಶಾಂತವಾಗಿತ್ತು. ಬಸ್ ಸಂಚಾರ, ಅಟೋ, ಖಾಸಗಿ ವಾಹನ ಸಂಚಾರ ಸಂಪೂರ್ಣ ಸ್ಥಬ್ದವಾಗಿತ್ತು. ಪ್ರಯಾಣಿಕರಿಲ್ಲದೇ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಇನ್ನು ದಿನನಿತ್ಯದ ಅಂಗಡಿ ಮುಗಟ್ಟು, ಹೊಟೇಲ್, ಬೀದಿ ಬದಿ ವ್ಯಾಪಾರಸ್ಥರು ಜನತಾ ಕರ್ಫ್ಯೂಗೆ ಬೆಂಬಲಿಸಿ ಅಂಗಡಿಗಳ ಬಾಗಿಲು ಹಾಕಿದ ದೃಶ್ಯ ಕಂಡು ಬಂದವು.
ಟಾಫ್ರಿಕ್ ಕಿರಕಿರಿ ಇರುತ್ತಿದ್ದ ಚನ್ನಮ್ಮ ವೃತ್ತ, ಬೊರಾಗವೇಸ್, ಆರ್ ಟಿ ಓ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳೆಲ್ಲ ಖಾಲಿ ಖಾಲಿಯಾಗಿ ವಾಹನ ಸಂಚಾರ ವಿರಳವಾಗಿತ್ತು. ಕೆಲವು ಕಡೆ ಮೆಡಿಕಲ್ ಶಾಪ್ ಹಾಗೂ ಖಾಸಗಿ ಆಸ್ಪತ್ರೆಗಳ ಹೊರತು ಪಡಿಸಿ ಉಳಿದೆಲ್ಲವೂ ಬಂದ್ ಆಗಿವೆ