ಗದಗ : ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿ ನರಳುತ್ತಿದ್ದ ಬೆಕ್ಕಿನ ಪ್ರಾಣ ರೈತರೊಬ್ಬರು ಉಳಿಸಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಬಾವಿಯ ಪೊದೆಯಲ್ಲಿ ಬೆಕ್ಕು ಸಿಲುಕಿಕೊಂಡಿತ್ತು. ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿ ನರಳುತ್ತಿದ್ದ ಬೆಕ್ಕಿನ ಧ್ವನಿ ಕೇಳಿ ರೈತ ಮಹಾಂತೇಶ ಬೆಕ್ಕನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ಮೂರು ದಿನಗಳಿಂದ ಬಾವಿಯಲ್ಲಿ ಬಿದ್ದಿರುವ ಬೆಕ್ಕು ಸಾವು ಬದಕಿನ ಮಧ್ಯೆ ಹೊರಾಟ ನಡೆಸುತ್ತಿತ್ತು. ಬಾವಿಯ ಒಳಗಿರುವ ಪೊದೆಗೆ ಬಂದು ತನ್ನ ಪ್ರಾಣ ಉಳಿಸಿಕೊಂಡಿತ್ತು. ಬಾವಿಯಿಂದ ಮೇಲೆ ಬರಲಾರದೇ ಬೆಕ್ಕು ನರಳಾಡುತ್ತಿತ್ತು.ರೈತ ಮಹಾಂತೇಶ್ ಪ್ರಾಣದ ಹಂಗು ತೊರೆದು ಬಾವಿ ಒಳಗೆ ಇಳಿದು ಬೆಕ್ಕಿನ ಪ್ರಾಣ ಉಳಿಸಿದ್ದಾರೆ. ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಾಣಿ ರಕ್ಷಣೆ ಮಾಡಿ ಮಾನವೀಯತೆ ಮೆರೆದಿರುವ ರೈತ ಮಾಹಂತೇಶ್ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Laxmi News 24×7