ಮೂಡಲಗಿ : ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಿಂಗಪ್ಪ ಹಣಮಂತ ದಡ್ಡಗೋಳ ಎನ್ನುವ ಮಾಲೀಕ ಹಾಗೂ ನಿಂಗಪ್ಪ ಯಲ್ಲಪ್ಪ ಸಂಕನ್ನವರ ಎಂಬ ವ್ಯಕ್ತಿಗಳು, ರೈತರಿಂದ ಸಂಗ್ರಹಿಸಿದ ಹಾಲಿಗೆ ಕಲಬೆರಕೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಹಾಗೂ ಸಿಬ್ಬಂಧಿ ಮತ್ತು ಗೋಕಾಕ ಆಹಾರ ಇಲಾಖೆಯ ಅಧಿಕಾರಿ ಲೋಕಶ್ ಗಾನೂರ್ ಮನೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆಯಲ್ಲಿ 6 ಕೆಜಿ ಯೂರಿಯಾ, 30 ಪಾಕಿಟ್ ಕಲಬೆರಿಕೆ ಹಾಲಿನ ಪೌಡರ ಹಾಗೂ 25 ಕೆಜಿ ಗಾಣದ ಎಣ್ಣೆಯನ್ನು ಸೇರಿಸಿ ಮಿಕ್ಸಿಯಲ್ಲಿ ಗ್ರಯಾಡಿಂಗ್ ಮಾಡಿ ನಂತರ ರೈತರು ನೀಡಿದ ಹಾಲಿಗೆ ಹಾಕುತ್ತಿದ್ದು ಎಂದು ತಿಳಿದು ಬಂದಿದೆ.
ಇದರಿಂದ ಹಾಲಿನಲ್ಲಿ ಪ್ಯಾಟ್ ಹೆಚ್ಚಾಗಿ ಆದಾಯ ಹೆಚ್ಚು ಬರುತ್ತದೆ ಎಂದು ತಿಳಿದು, ಕಲಬೆರಕೆ ಕೆಲಸಕ್ಕೆ ತೊಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣ ಮೂಡಲಗಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
Laxmi News 24×7