ಬೆಳಗಾವಿ : ಪ್ರೇಮಕವಿ ಕೆ.ಕಲ್ಯಾಣ ಅವರ ಪತ್ನಿ ಅಶ್ವಿನಿ ವಿಚ್ಛೇದನ ಅರ್ಜಿಯನ್ನು ಪಾಪಾಸ್ ಪಡೆದಿದ್ದು, ಸಾಹಿತಿ ಕುಟುಂಬದಲ್ಲಿ ಎದಿದ್ದ ಕೌಟುಂಬಿಕ ಕಲಹದ ಬಿರುಗಾಳಿ ಅಂತ್ಯಕಂಡಿದೆ.
ಅ. 3 ರಂದು ಕೆ.ಕಲ್ಯಾಣ್ ಪತ್ನಿ, ತಮ್ಮ ಪತಿ ವಿರುದ್ಧ ಆರೋಪಿ ಮಾಳಮಾರುತಿ ಪೊಲೀಸ್ಠಾಣೆ ಮೆಟ್ಟಿಲೇರಿದ್ದರು. ಬಳಿಕ ಅವರಿಗೆ ವಿಚ್ಫೇದನ ನೀಡುವ ಸಲುವಾಗಿ ಬೆಳಗಾವಿಯ ಕೌಟುಂಬಿಕ ನ್ಯಾಯಾಲಕ್ಕೆ ಅರ್ಜಿ ಸಹ ಸಲ್ಲಿಸಿದ್ದರು.
ಆದರೆ ಕಲ್ಯಾಣ್ ಇದರಲ್ಲಿ ತಮ್ಮ ಪತ್ನಿಯದ್ದು, ಯಾವುದೇ ತಪ್ಪಿಲ್ಲ. ಬೇರೆಯವರು ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲದೇ ಅವರ ಮನೆ ಕೆಲಸದಾಕೆ ಗಂಗಾ ಎಂಬುವವರ ವಿರುದ್ಧ ಕಂಪ್ಲೇಂಟ್ ದಾಖಲಿಸಿದ್ದರು. ಪೊಲೀಸರು ಆ ಬಗ್ಗೆ ತನಿಖೆ ಕೈಗೊಂಡಾಗ ಅಸಲಿ ಸತ್ಯ ಬಹಿರಂಗವಾಗಿತ್ತು.
ಮನೆ ಕೆಲಸದ ಗಂಗಾ ಮತ್ತು ಶಿವಾನಂದ ವಾಲಿ ಎಂಬುವವರು ಮಾಟದಿಂದ ಅವರ ತಲೆ ಕೆಡಿಸಿ, ವಂಚಿಸಿದ್ದರು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ್ವಾಲಿಯನ್ನು ಬಂಧಿಸಲಾಯಿತು.ಆದರೆ ಮತ್ತೊಬ್ಬ ಆರೋಪಿ ಗಂಗಾ ತಲೆ ಮರೆಸಿಕೊಂಡಿದ್ದಾರೆ.
ಇದರ ನಡುವೆ ಅಕ್ಟೋಬರ್ 17 ರಂದು ಕಲ್ಯಾಣ್ ದಂಪತಿಗಳ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಅವರ ಪತ್ನಿ ಅಶ್ವಿನಿ ತಾವು ನೀಡಿದ್ದ ಅರ್ಜಿ ವಾಪಸ್ ಪಡೆದಿದ್ದಾರೆ.
Laxmi News 24×7