Breaking News

ಅಥಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ 18 ಕೆಜಿ ಗಾಂಜಾ ವಶ ಆರೋಪಿ ಬಂಧನ.

Spread the love

 

ಅಥಣಿ : ಪರ್ಮಿಷನ್  ಇಲ್ಲದೇ ಅಕ್ರಮವಾಗಿ ಗಾಂಜಾ  ಮಾದಕ ಪದಾರ್ಥವನ್ನು ತನ್ನ ಜಮೀನದಲ್ಲಿ ಬೆಳೆಸಿ ಅವುಗಳನ್ನು ಕಿತ್ತು ಮಾರಾಟ ಮಾಡುವ ಸಲುವಾಗಿ ತನ್ನ ಮನೆಯ ಮುಂದೆ ಇಟ್ಟು ಕೊಂಡಾಗ ದಾಳಿ ಮಾಡಿ ಅಥಣಿ  ಪೊಲೀಸರು  ಕಾರ್ಯಾಚರಣೆ ನಡೆಸಿ 18 ಕೆಜಿ ಗಾಂಜಾ ವಶಪಡಿಸಿಕೊಂಡು  ಆರೋಪಿಯನ್ನು  ಬಂಧಿಸಿದ್ಧಾರೆ.

ಅಥಣಿ ತಾಲ್ಲೂಕಿನ ಆರೋಪಿ ಕರೆಪ್ಪ ಶ್ರೀಪಣ್ಣ ಐನಾಪೂರೆ @ ದೇವಕತೆ ಸಾ || ಹಣಮಾಪೂರ ಹಾಲಿ ಮದಬಾವಿ ಕುಂಬಾರ ಗುತ್ತಿ ಸದರಿ ಆರೋಪಿತನು ತನ್ನ ಸ್ವಂತ ಪಾಯ್ದೆಗೊಸ್ಕರ ಯಾವುದೇ ಪಾಸ್ ವ ಪರ್ಮಿಟ ಇಲ್ಲದೇ ಅಕ್ರಮವಾಗಿ ಗಾಂಜಾ  ಮಾದಕ ಪದಾರ್ಥವನ್ನು ತನ್ನ ಜಮೀನದಲ್ಲಿ ಬೆಳೆಸಿ ಅವುಗಳನ್ನು ಕಿತ್ತು ಮಾರಾಟ ಮಾಡುವ ಸಲುವಾಗಿ ತನ್ನ ಮನೆಯ ಮುಂದೆ ಇಟ್ಟು ಕೊಂಡಾಗ ದಾಳಿ ಮಾಡಿ ಹಿಡಿದು ಸದರಿಯವರಿಂದಾ ಸುಮಾರು 2,70,000 / -ರೂ ಕಿಮ್ಮತ್ತಿನ 18 ಕೆಜಿ ತೂಕದ ಗಾಂಜಾ  ಮಾದಕ ವಸ್ತುವನ್ನು ಜಪ್ತ ಮಾಡಿ ವಶಕ್ಕೆ ಪಡೆದು ದಸ್ತಗೀರ ಮಾಡಿದ್ಧಾರೆ.

 


ಪೊಲೀಸ ಅಧೀಕ್ಷಕ ಲಕ್ಷ್ಮಣ ನಿಂಬರಗಿ  , ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ  , ಬೆಳಗಾವಿರವರ ಮಾರ್ಗದರ್ಶನದಲ್ಲಿ  ಎಸ್ ವಿ ಗಿರೀಶ ಡಿಎಸ್‌ಪಿ ಅಥಣಿ ಹಾಗೂ  ಶಂಕರಗೌಡಾ ಬಸನಗೌಡರ ಸಿಪಿಐ ಅಥಣಿ ರವರ ಉಸ್ತುವಾರಿಯಲ್ಲಿ  ಕುಮಾರ ಹಾಡಕಾರ ಪಿಎಸ್‌ಐ  ರವರ ನೇತೃತ್ವದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ,ಎಮ್ ಚ ದೊಡಮನಿ , ಎ ಎ ಈರಕರ , ಕೆ ಬಿ ಶಿರಗೂರ, ಎಸ್ ಜಿ ಮನ್ನಾಪೂರ ಇವರನ್ನೊಳಗೊಂಡ ತಂಡವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ

ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 308/2020  ಅಡಿ ಪ್ರಕರಣ ದಾಖಲ ಮಾಡಿ ತನಿಖೆ ಕೈಗೊಂಡಿರುತ್ತಾರೆ . ಪ್ರಕರಣಗಳನ್ನು ಪತ್ತೆ ಮಾಡಿದ  ಕುಮಾರ ಹಾಡಕಾರ ಪಿಎಸ್‌ಐ  ಅಥಣಿ ಪೊಲೀಸ್ ಠಾಣೆ  ಮತ್ತು ಸಿಬ್ಬಂದಿಗಳನೊಳಗೊಂಡ  ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ ಆರಕ್ಷಕ ಅಧೀಕ್ಷಕರು ಬೆಳಗಾವಿರವರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿದ್ಧಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ