ಬೆಳಗಾವಿ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿನ್ನೆ ಕೊರೊನಾದಿಂದ ನಿಧನರಾಗಿದ್ದು, ಮೃತರ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಸುರೇಶ್ ಸಂಗಡಿ ತಾಯಿ ಸೋಮವ್ವ ಅವರ ಆಕ್ರಂದನ ಮುಗಿಲು ಮುಟ್ಟಿದ್ದು ಕೊನೆಯ ಬಾರಿ ಮಗನ ಮುಖ ನೋಡಲು ಅವಕಾಶ ಸಿಗದೆ ತೀವ್ರ ದುಃಖ ಅನುಭವಿಸುತ್ತಿದ್ದಾರೆ.
ಸೋಮವ್ವ ಮಗನ ಸಾವಿನ ಸುದ್ದಿ ಕೇಳಿ ನಿನ್ನೆಯೇ ಕೆ.ಕೆ ಕೊಪ್ಪದಿಂದ ಬೆಳಗಾವಿ ನಿವಾಸಕ್ಕೆ ಆಗಮಿಸಿದ್ದಾರೆ. ಆದ್ರೆ ಏಮ್ಸ್ ಆಸ್ಪತ್ರೆಯಲ್ಲಿರುವ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರುವುದು ಅನುಮಾನವಾಗಿದೆ. ಕೊರೊನಾ ಗೈಡ್ಲೈನ್ಸ್ನಂತೆ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಕುಟುಂಬಸ್ಥರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಸೋಮವ್ವ ಅವರಿಗೆ ವಯಸ್ಸಾಗಿರುವುದರಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿಲ್ಲ.
ಮಗನ ಅಕಾಲಿಕ ನಿಧನದ ನೋವು ಒಂದೆಡೆಯಾದ್ರೆ,ಕೊನೆಯದಾಗಿ ಮಗನ ಮುಖ ನೋಡುವ ಅವಕಾಶ ಸಿಗದ್ದಕ್ಕೆ ಸೋಮವ್ವ ಅತೀವವಾಗಿ ದುಃಖಿಸುತ್ತಿದ್ದಾರೆ.
Laxmi News 24×7