Breaking News
Home / ನವದೆಹಲಿ / ವಿರೋಧ ಪಕ್ಷದ  ಭಾರೀ ಪ್ರತಿಭಟನೆಯ ನಡುವೆ ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾಗಿವೆ.

ವಿರೋಧ ಪಕ್ಷದ  ಭಾರೀ ಪ್ರತಿಭಟನೆಯ ನಡುವೆ ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾಗಿವೆ.

Spread the love

ಹೊಸದಿಲ್ಲಿ: ವಿರೋಧ ಪಕ್ಷದ  ಭಾರೀ ಪ್ರತಿಭಟನೆಯ ನಡುವೆ ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾಗಿವೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ ಪ್ರೋತ್ಸಾಹ ಮತ್ತು ನೆರವು ಮಸೂದೆ-2020 ಹಾಗೂ  ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020 ರ ಒಪ್ಪಂದ ಮಸೂದೆ ಯನ್ನು ಮಂಡಿಸಲಾಗಿದೆ. 
ಮಸೂದೆ ಚರ್ಚೆ ವೇಳೆ, ಟಿಎಂಸಿ ಸಂಸದರಾದ ಡೆರೆಕ್ ಓ ಬ್ರಯನ್ ಹಾಗೂ ಇತರೆ ಕೆಲ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. 
ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಕೂಡ ಮಸೂದೆಯನ್ನ ವಿರೋಧಿಸಿ ಮಾತನಾಡಿ,  ಕೊರೊನಾ ಸಾಂಕ್ರಾಮಿಕದ ನಡುವೆ ಈ ಮಸೂದೆಗಳನ್ನು ಅಂಗೀಕರಿಸಲು ಅವಸರವೇಕೆ? ಈ ಮಸೂದೆಗಳಿಂದ ರೈತ ಸಮುದಾಯಕ್ಕೆ ಏನು ಉಪಯೋಗ? ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಉದ್ದೇಶವನ್ನ ಈಡೇರಿಸಿಕೊಳ್ಳಲು ಇದು ಹೇಗೆ ನೆರವಾಗುತ್ತದೆ ಎಂಬುದನ್ನು  ಪ್ರಧಾನಿ ನರೇಂದ್ರ ಮೋದಿ ವಿವರಿಸಬೇಕು ಎಂದು ಹೆಚ್​ಡಿಡಿ ಒತ್ತಾಯಿಸಿದರು.
ಭಾರೀ ಗದ್ದಲ, ಪ್ರತಿಭಟನೆ ನಡುವೆಯೂ ಎರಡು‌ ಮಸೂದೆ ಅಂಗೀಕಾರಗೊಳಿಸಲಾಗಿದೆ. 

Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ