Breaking News

ಸಾರ್ವಜನಿಕ ಅಸ್ತಿ ನಾಶ ಮಾಡಿದ ಪಿಎಫ್‌ಐ ಸದಸ್ಯರ ಸ್ವತ್ತು ಮುಟ್ಟುಗೋಲಿಗೆ ಯುಪಿ ಸರ್ಕಾರ ಕ್ರಮ

Spread the love

ಮುಜಪ್ಫರ್‌ನಗರ: ಸಿಎಎ ವಿರೋಧಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ಸಾರ್ವಜಕ ಅಸ್ತಿ ನಾಶ ಮಾಡಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ನಾಲ್ವರು ಸದಸ್ಯರಿಂದ ನಷ್ಟ ಭರ್ತಿ ಮಾಡಲು ಉತ್ತರಪ್ರದೇಶ ಸರಕಾರ ಕ್ರಮ ಕೈಗೊಂಡಿದೆ.

ಡಿಸೆಂಬರ್‌ ತಿಂಗಳಲ್ಲಿ ಉತ್ತರಪ್ರದೇಶದ ಕೈರಾನದಲ್ಲಿ ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಇದರಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟಗೊಂಡಿತ್ತು. ಇದರ ಸಂಪೂರ್ಣ ಮಾಹಿತಿ ಕಲೆಹಾಕಿದ ಪೊಲೀಸರು, ಈಗ ದೊಂಬಿ ಪ್ರಚೋದಕರಿಂದ ನಷ್ಟ ಭರ್ತಿಗೆ ಕ್ರಮ ಕೈಗೊಂಡಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಪಿಎಫ್‌ಐನ ಡಾ.ಗುಫ್ರಾನ್‌, ಡಾ.ಮುನಾವರ್‌, ಅಹ್ಮದ್‌ ಮತ್ತು ಕರಿ ಅಬ್ದುಲ್‌ ವಾಜಿದ್‌ ಈಗ ತಲೆಮರೆಸಿಕೊಂಡಿದ್ದಾರೆ.

ಇವರ ವಿರುದ್ಧ ಸ್ಥಳೀಯ ನ್ಯಾಯಾಲಯವು ಐಪಿಸಿ ಸೆಕ್ಷನ್‌ 82ರ ಅಡಿಯಲ್ಲಿನೋಟಿಸ್‌ ಹೊರಡಿಸಿದೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ