Breaking News

ಅಪಾಯದ‌ ಅಂಚಿನಲ್ಲಿದೆ ಪಣಜಿ – ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಕಿರು‌ಸೇತುವೆ

Spread the love

ಮಂಗಳೂರು : ಪಣಜಿ- ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು ಹೊರವಲಯದ ಕೆ.ಸಿ.ರೋಡ್ ಎಂಬಲ್ಲಿರುವ ಸೇತುವೆಯೊಂದು ಅಪಾಯಕ್ಕೆ ಮುನ್ಸೂಚನೆ ನೀಡುತ್ತಿದೆ. ಇತ್ತೀಚೆಗೆ ಈ ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ತಡೆಗೋಡೆಯು ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದಾಗಿ ತಡೆಗೋಡೆ ಇಲ್ಲದ ಪರಿಣಾಮ ಹಾಗೂ ಅತ್ಯಂತ ಇಕ್ಕಟ್ಟಾಗಿರುವ ಸೇತುವೆಯಿಂದಾಗಿ ಇದರ ಮೇಲೆ ಸಂಚರಿಸುವ ವಾಹನಗಳಿಗೆ ಅಪಾಯ ಎದುರಾಗಿದೆ.

ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಸೇತುವೆಯ ಮೂಲಕವೇ ಹಾದು ಹೋಗುತ್ತಿದ್ದು, ಸೇತುವೆಯನ್ನು ಕೂಡಲೇ ದುರಸ್ತಿ ಮಾಡದೇ ಹೋದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗುಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಜನರೂ ಈ ತಮ್ಮ ದಿನನಿತ್ಯದ ಉಪಯೋಗಕ್ಕಾಗಿ ಈ ಸೇತುವೆಯನ್ನೇ ಬಳಸುತ್ತಿದ್ದು, ತಡೆಗೋಡೆ ಮುರಿದ ಸೇತುವೆಯ ಮೇಲೆ ಪ್ರಾಣಭಯದಿಂದ ಸಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಸೇತುವೆಯ ದುಸ್ಥಿತಿಯ ಕಾರಣದಿಂದಾಗಿ ಇದೀಗ ಸೇತುವೆಯ ಮೇಲೆ ಅಡ್ಡಲಾಗಿ ಬ್ಯಾರಿಕೇಡ್ ಅನ್ನೂ ಅಳವಡಿಸಲಾಗಿದೆ. ಆದರೆ ಈ ಬ್ಯಾರಿಕೇಡ್ ಗಳು ರಾತ್ರಿ ಸಂದರ್ಭದಲ್ಲಿ ವಾಹನ ಚಾಲಕರ ಗಮನಕ್ಕೆ ಬರದೇ ಇರುವುದರಿಂದ ಈ ಬ್ಯಾರಿಕೇಡ್ ಗಳೂ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ. ಅಲ್ಲದೆ ಈ ಸೇತುವೆಯಲ್ಲಿ ಏಕಮುಖ ಚಾಲನೆಗೆ ಅವಕಾಶವಿದ್ದರೂ, ಕೆಲವು ವಾಹನಗಳು ಈ ಸೇತುವೆಯ ಮೂಲಕ ವಿರುದ್ಧ ದಿಕ್ಕಿನಲ್ಲೂ ಬರುತ್ತಿರುವುದು ಅವಘಡಕ್ಕೆ ಕಾರಣವಾಗುತ್ತಿದೆ.

ಜಿಡಿಪಿ ಮಹಾ ಕುಸಿತಕ್ಕೆ ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಕಾರಣ ; ಸಿದ್ದರಾಮಯ್ಯ

ಸೇತುವೆಯ ದುಸ್ತಿತಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಕೂಡಲೇ ದುರಸ್ತಿ ಮಾಡುವಂತೆ ಸಾರ್ವಜನಿಕರು ಮನವಿಯನ್ನೂ ಮಾಡಿದ್ದಾರೆ. ದುರಸ್ತಿ ಕಾಮಗಾರಿಯು ವಿಳಂಬವಾದಷ್ಟು ಈ ಸೇತುವೆಯೂ ಹೆಚ್ಚು ಅಪಾಯಕಾರಿಯಾಗಲಿದೆ ಎನ್ನುವ ಎಚ್ಚರಿಕೆಯನ್ನೂ ಸ್ಥಳೀಯ ಗ್ರಾಮಸ್ಥರು ನೀಡಿದ್ದಾರೆ.

ರಾಜ್ಯದ ಅತ್ಯಂತ ಬ್ಯುಸಿ ಹೆದ್ದಾರಿಗಳಲ್ಲಿ ಒಂದಾಗಿರುವ ಈ ಹೆದ್ದಾರಿಯ ಚುತುಷ್ಪಥ ಕಾಮಗಾರಿಯು ಈ ಭಾಗದಲ್ಲಿ ಇತ್ತೀಚೆಗಷ್ಟೇ ಮುಗಿದಿದ್ದು, ಸರ್ವೀಸ್ ರಸ್ತೆಯ‌ ನಿರ್ಮಾಣವೂ ಆಗಬೇಕಿದೆ. ಅಲ್ಲದೆ ಇದೀಗ ಅಪಾಯದ ಅಂಚಿನಲ್ಲಿರುವ ಸೇತುವೆಯು ಹಳೆಯ ಸೇತುವೆಯಾಗಿದ್ದು, ಮಂಗಳೂರಿನಿಂದ ಕೇರಳಕ್ಕೆ ಸಂಪರ್ಕಿಸುವ ರಸ್ತೆಯಲ್ಲಿದೆ. ಅದೇ ಪ್ರಕಾರ ಇದೇ ಸ್ಥಳದಲ್ಲಿ ಹೊಸ ಸೇತುವೆಯ ನಿರ್ಮಾಣವೂ ಆಗಿದ್ದು ಆ ಸೇತುವೆಯನ್ನು ಮೂಲಕ ಕೇರಳದಿಂದ ಮಂಗಳೂರು ಸಂಪರ್ಕ ರಸ್ತೆಗೆ ಜೋಡಿಸಲಾಗಿದೆ.


Spread the love

About Laxminews 24x7

Check Also

ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ ಕಾಮಗಾರಿಗೆ ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿದರು.

Spread the love ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ