Breaking News

ವಿರಾಟ ಹಿಂದೂ ಸಮ್ಮೇಳನ ಹಿನ್ನೆಲೆ: ಶ್ರೀ ಸಾಯಿ ಮಂದಿರದಲ್ಲಿ ಆಕರ್ಷಕ ರಂಗೋಲಿ ಸ್ಪರ್ಧೆ; 120ಕ್ಕೂ ಹೆಚ್ಚು ಮಹಿಳೆಯರು ಭಾಗಿ

Spread the love

ಬೆಳಗಾವಿ ನಗರದಲ್ಲಿ ಆಯೋಜನೆಯಾಗಿರುವ ‘ವಿರಾಟ ಹಿಂದೂ ಸಮ್ಮೇಳನ’ದ ಅಂಗವಾಗಿ ಇಂದು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಇದರ ಭಾಗವಾಗಿ ಶ್ರೀ ನಗರದ ಸಾಯಿ ಮಂದಿರದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯು ಸಾರ್ವಜನಿಕರ ಗಮನ ಸೆಳೆಯಿತು.
ವಿರಾಟ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ರಂಗೋಲಿ ಸ್ಪರ್ಧೆಯಲ್ಲಿ ಮಾಳಮಾರುತಿ ಬಡಾವಣೆಯ ನೂರಾರು ಮಹಿಳೆಯರು ಹಾಗೂ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಶ್ರೀ ನಗರದ ಶ್ರೀ ಸಾಯಿ ಮಂದಿರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಸ್ಪರ್ಧಾಳುಗಳು ತಮ್ಮ ಕಲಾತ್ಮಕತೆಯ ಮೂಲಕ ವಿವಿಧ ವಿನ್ಯಾಸದ ರಂಗೋಲಿಗಳನ್ನು ಬಿಡಿಸಿದರು. ಈ ಸ್ಪರ್ಧೆಗೆ ನಿರ್ಣಾಯಕರಾಗಿ ಮೋಹನ ಮತ್ತು ರೂಪಾ ಬಡಿಗೇರ ಆಗಮಿಸಿ, ರಂಗೋಲಿಗಳ ಸೊಬಗನ್ನು ಪರೀಕ್ಷಿಸಿ ವಿಜೇತರನ್ನು ಆಯ್ಕೆ ಮಾಡಿದರು.
ಸಮ್ಮೇಳನದ ಅಂಗವಾಗಿ ಕೇವಲ ರಂಗೋಲಿ ಸ್ಪರ್ಧೆಯಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಸಾಲು ಸಾಲು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರಿದ ಭಾಗವಾಗಿ ಜನವರಿ 31 ರಂದು ಮಾಳಮಾರುತಿ ದೇವಸ್ಥಾನದಲ್ಲಿ ಭವ್ಯ ‘ಮಹಾ ಆರತಿ’ ಮತ್ತು ‘ಹನುಮಾನ್ ಚಾಲೀಸಾ’ ಪಠಣ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಮಹಿಳೆಯರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಸಂಘಟಕರಾದ ಜ್ಯೋತಿ ಭಾವಿಕಟ್ಟಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೂರಾರು ಸ್ಪರ್ಧಿಗಳು ಹಾಗೂ ಅಯೋಜಕರು ಇನ್ನುಳಿದವರು ಭಾಗಿಯಾಗಿದ್ಧರು.

Spread the love

About Laxminews 24x7

Check Also

BBK12 ಮುಕ್ತಾಯ ಬೆನ್ನಲ್ಲೇ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ: ಕಮಿಷನರ್‌ಗೆ ದೂರು.

Spread the love BBK12 ಮುಕ್ತಾಯ ಬೆನ್ನಲ್ಲೇ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ: ಕಮಿಷನರ್‌ಗೆ ದೂರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ