ಫ್ರಿಡ್ಜ್ ಶಾರ್ಟ್ ಸರ್ಕ್ಯೂಟ್: ಬೆಳಗಾವಿಯಲ್ಲಿ ಅಗ್ನಿ ಅನಾಹುತ;
ಹೆಚ್.ಇ.ಆರ್.ಎಫ್ ತಂಡದಿಂದ ಸಿಲಿಂಡರ್ ರಕ್ಷಿಸಿ ಭಾರಿ ಅನಾಹುತ ತಪ್ಪಿದ ಅನಾಹುತ!
ಫ್ರಿಡ್ಜ್ ಶಾರ್ಟ್ ಸರ್ಕ್ಯೂಟ್: ಮನೆಗೆ ಭಾರೀ ಬೆಂಕಿ!
ಸಿಲಿಂಡರ್ ರಕ್ಷಿಸಿ, ಭಾರಿ ಅನಾಹುತ ತಪ್ಪಿಸಿದ ಹೆಚ್.ಇ.ಆರ್.ಎಫ್ ತಂಡ
ವಿಕಲಚೇತನರ ಕುಟುಂಬಕ್ಕೆ 2 ಲಕ್ಷ ರೂ ನಷ್ಟ!
ಎಚ್.ಇ.ಆರ್.ಎಫ್ ತಂಡದ ಧೈರ್ಯಕ್ಕೆ ಸ್ಥಳೀಯರ ಮೆಚ್ಚುಗೆ
ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್’ನಿಂದ ಭಾರಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾದ ಘಟನೆಬೆಳಗಾವಿಯ ಸುಳಗಾ ಉಚಗಾಂವ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯ ಸುಳಗಾ ಉಚಗಾಂವ ಗ್ರಾಮದ ದೇಶಪಾಂಡೆ ಗಲ್ಲಿಯಲ್ಲಿ ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಭಾರಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮನೆಯೊಳಗೆ ಗ್ಯಾಸ್ ಸಿಲಿಂಡರ್ ಇದ್ದ ಕಾರಣ ಸ್ಫೋಟದ ಭೀತಿ ಎದುರಾಗಿದ್ದರೂ, ಎಚ್.ಇ.ಆರ್.ಎಫ್ ರೆಸ್ಕ್ಯೂ ತಂಡದ ತುರ್ತು ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ.
ಮನೋಹರ ಪಾಟೀಲ ಅವರ ಒಡೆತನದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ವಿಕಲಚೇತನರಾದ ಸಂಜಯ್ ಬಬನ್ ಜಾಧವ್ ಅವರ ಮನೆಯಲ್ಲಿ ಘಟನೆ ನಡೆದಿದೆ. ಆರಂಭಿಕ ಮಾಹಿತಿಯ ಪ್ರಕಾರ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಫ್ರಿಜ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವೇಗವಾಗಿ ವ್ಯಾಪಿಸುತ್ತಿದ್ದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಎಚ್.ಇ.ಆರ್.ಎಫ್. ತಂಡಕ್ಕೆ ಮಾಹಿತಿ ನೀಡಿದರು.
ಸಂದೇಶ ದೊರಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಎಚ್.ಇ.ಆರ್.ಎಫ್. ತಂಡವು ಲಭ್ಯವಿದ್ದ ಪೈಪ್ ಮತ್ತು ಮೋಟಾರ್’ಗಳ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿತು. ಈ ಕಾರ್ಯಕ್ಕೆ ಸ್ಥಳೀಯ ನಾಗರಿಕರು ಸಹ ಸಕ್ರಿಯವಾಗಿ ಸಹಕರಿಸಿದರು.
ಬೆಂಕಿ ಸುಮಾರು 60% ರಷ್ಟು ವ್ಯಾಪಿಸಿದ್ದರೂ, ಮನೆಯೊಳಗೆ ದಟ್ಟ ಹೊಗೆ ತುಂಬಿಕೊಂಡು ಸಿಲಿಂಡರ್ ಇದ್ದ ಕಾರಣ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿತ್ತು. ಈ ಗಂಭೀರ ಸಂದರ್ಭದಲ್ಲಿ ತಂಡದ ಮುಖ್ಯಸ್ಥ ಬಸವರಾಜ ಹಿರೇಮಠ ಅವರು ತಮ್ಮ ಜೀವದ ಹಂಗು ತೊರೆದು ದಟ್ಟ ಹೊಗೆಯ ಮಧ್ಯೆಯೇ ಮನೆಯೊಳಗೆ ಪ್ರವೇಶಿಸಿ, ಗ್ಯಾಸ್ ಸಿಲಿಂಡರ್ ಅನ್ನು ಸುರಕ್ಷಿತವಾಗಿ ಹೊರತೆಗೆದರು. ಅವರ ಈ ಧೈರ್ಯಶಾಲಿ ಮತ್ತು ಮಾನವೀಯ ಕಾರ್ಯದಿಂದ ಭಾರಿ ಸ್ಫೋಟ ಸಂಭವಿಸುವುದನ್ನು ತಪ್ಪಿಸಲಾಯಿತು.
ಸ್ವಲ್ಪ ವೇಳೆಯ ನಂತರ ಬೆಳಗಾವಿ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಉಳಿದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಈ ಬೆಂಕಿಯಿಂದ ಮನೆಯಲ್ಲಿದ್ದ ವಸ್ತುಗಳು ಮತ್ತು ಸಾಮಗ್ರಿಗಳಿಗೆ ಸುಮಾರು ಎರಡು ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವಿಕಲಚೇತನರಾದ ಸಂಜಯ್ ಜಾಧವ್ ಅವರ ಕುಟುಂಬವು ಹೋಟೆಲ್’ಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಈ ಅಗ್ನಿ ಅನಾಹುತದಿಂದ ಅವರ ಮನೆ ಬಳಕೆಯ ಎಲ್ಲಾ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವುದು ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.
Laxmi News 24×7