ಮೈಸೂರು: ಹುಲಿ ದಾಳಿಯಿಂದಾಗುತ್ತಿರುವ ಪ್ರಾಣ ಹಾನಿ ಹಾಗೂ ಇತರ ಹಾನಿಗಳನ್ನು ತಡೆಯುವ ನಿಟ್ಟಿನಲ್ಲಿ ಬಂಡೀಪುರ ಹಾಗೂ ನಾಗರಹೊಳೆಯ ವ್ಯಾಪ್ತಿಯ ವನ್ಯಜೀವಿ ಸಫಾರಿಯನ್ನು ರಾಜ್ಯ ಸರ್ಕಾರ ಬಂದ್ ಮಾಡಿದೆ. ಈ ಬಗ್ಗೆ ವನ್ಯಜೀವಿ ಛಾಯಾಗ್ರಾಹಕರು ಹಾಗೂ ರೈತ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವನ್ಯಜೀವಿ ಛಾಯಾಗ್ರಾಹಕ ಮಧುಸೂದನ್ ಮಾತನಾಡಿ, “ಹುಲಿ ದಾಳಿಗೆ ತುಂಬಾ ಕಾರಣಗಳಿರುತ್ತವೆ. ಒಂದು ಹುಲಿಗಳ ಸಂಖ್ಯೆ ಅಧಿಕವಾಗಿದೆ. ಹಾಗೆಯೇ ಕಾಡಿನೊಳಗೆ ಅವುಗಳ ಹೊಡೆದಾಟ ಮತ್ತು ಕೆಲ ಗಾಯಗೊಂಡ ಹುಲಿಗಳು ಕಾಡಂಚಿನ ಗ್ರಾಮಗಳಲ್ಲಿ ರಕ್ಷಣೆ ಇರುತ್ತದೆ ಎಂದು ಇಲ್ಲಿ ಬಂದು ವಾಸಿಸಲು ಶುರು ಮಾಡುತ್ತವೆ. ಈ ವೇಳೆ ರೈತರು ಕೃಷಿ ಚಟುವಟಿಕೆಗಳಿಗೆಂದು ಹೊರಗಡೆ ಬಂದಾಗ ಹುಲಿ ಹಾಗೂ ರೈತರು ಎದುರುಬದುರಾಗುತ್ತಾರೆ. ಇದರಿಂದ ಹೆದರುವ ಹುಲಿಗಳು ತಮ್ಮ ರಕ್ಷಣೆಗೆಂದು ರೈತರ ಮೇಲೆ ದಾಳಿ ಮಾಡುತ್ತವೆಯೇ ಹೊರತು ಅವುಗಳಿಗೆ ತಿನ್ನುವ ಉದ್ದೇಶ ಇರುವುದಿಲ್ಲ. ಕಾಡಿನಲ್ಲೂ ಕೂಡ ಬೇರೆ ಹುಲಿಗಳೊಂದಿಗೆ ಹೊಡೆದಾಡಿ, ಇಲ್ಲಿ ಬಂದು ಜನರನ್ನು ಕಂಡಾಗ ಅದೂ ಕೂಡ ಭಯದ ವಾತಾವರಣದಲ್ಲಿ ಇರುತ್ತದೆ. ಇದಲ್ಲದೆ ಅರಣ್ಯಧಿಕಾರಿಗಳು ಹುಲಿಗಳನ್ನು ಹಿಡಿದು ಮತ್ತೆ ಕಾಡಿಗೆ ಬಿಟ್ಟಿರುತ್ತಾರೆ. ಇದರಿಂದ ಹುಲಿಗಳ ದೃಷ್ಟಿಯಲ್ಲಿ ಮಾನವ ಶತ್ರುವೇ” ಎಂದರು.
Laxmi News 24×7