Breaking News

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ

Spread the love

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ
ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ
ಕಾವ್ಯ, ಕಥೆ, ವೈಚಾರಿಕ ಬರಹ ಮತ್ತು
ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ
ವಿವಿಧ ಗಣ್ಯರ ಉಪಸ್ಥಿತಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್’ನ ವತಿಯಿಂದ ಡಾ. ಬೆಟಗೇರಿ ಕೃಷ್ಣಶರ್ಮ
ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಇಂದು ಬೆಳಗಾವಿಯ ಕುಮಾರಗಂಧರ್ವ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್’ನ ವತಿಯಿಂದ ಕಾವ್ಯ, ಕಥೆ, ವೈಚಾರಿಕ ಬರಹ ಮತ್ತು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದವರಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭಕ್ಕೆ ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್, ಡಾ. ವೈ. ಬಿ. ಹಿಮ್ಮಡಿ, ಕೆ.ಎಚ್. ಚನ್ನೂರ, ಹನುಮಂತ ಪಾಟೀಲ್. ಡಾ. ವೆಂಕಟಗಿರಿ ದಳವಾಯಿ, ಡಾ. ಅನುಸೂಯಾ ಕಾಂಬಳೆ ಅವರು ಚಾಲನೆಯನ್ನು ನೀಡಿದರು.
ಎಚ್.ಎಸ್. ಶಿವಪ್ರಕಾಶ, ಡಾ.ಜಿ ರಾಮಕೃಷ್ಣ, ಬಿ.ಟಿ. ಜಾನ್ಹವಿ, ಕೆ. ಅಕ್ಷತಾ, ವಿಲ್ಸನ್ ಕಟೀಲ್ ಮತ್ತು ಆರೀಫ್ ರಾಜಾ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ವೇಳೆ ಹಿರಿಯ ಸಾಹಿತಿ ವೆಂಕಟಗಿರಿ ದಳವಾಯಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಪ್ರಾಧ್ಯಾಪಕರಾದ ಡಾ. ಅನುಸೂಯ ಕಾಂಬಳೆ ಅವರು ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಎಲ್ಲ ಜ್ಞಾನಗಳನ್ನು ಪಡೆದುಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಅಧ್ಯಕ್ಷರಾದ ಡಾ. ವಿನಯಾ ಒಕ್ಕುಂದ, ಎಚ್ ಬಿ ಕೋಲಕಾರ, ರವೀಂದ್ರ ಕುಲಕರ್ಣಿ, ಮಹಾಲಿಂಗ ಮಂಗಿ, ಡಾ. ಜಗನ್ನಾಥ ಗೇನಣ್ಣನವರ, ಹಾವೇರಿ ಡಾ. ಗೀತಾಂಜಲಿ ಕುರುಡಗಿ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಲೈಫ್

Spread the loveಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲಲ್ಲ (Parappana Agrahara Jail) ಐಷಾರಾಮಿ ರೆಸಾರ್ಟ್! ಐಸಿಸ್ ಉಗ್ರ ಜುಹಾದ್, ವಿಕೃತ ಕಾಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ