ಗರ್ಲಗುಂಜಿಯಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನಿಂದ ವೃಕ್ಷಾರೋಪಣ…
ಪರಿಸರ ಜಾಗೃತಿಯ ಸಂದೇಶ
ಖಾನಾಪೂರ ತಾಲೂಕಿನ ಗರ್ಲಗುಂಜಿ ಗ್ರಾಮದಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನ ವತಿಯಿಂದ ವೃಕ್ಷಾರೋಪಣ ಮಾಡಿ ಪರಿಸರ ಸಂರಕ್ಷಣೆಯ ಸಂದೇಶವನ್ನು ನೀಡಲಾಯಿತು.
ಇಂದು ಭಾನುವಾರ ಖಾನಾಪೂರ ತಾಲೂಕಿನ ಗರ್ಲಗುಂಜಿ ಗ್ರಾಮದ ಶ್ರೀ ಕಲಮೇಶ್ವರ ದೇವಸ್ಥಾನದ ಆವರಣದಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನ ವತಿಯಿಂದ ಅಧ್ಯಕ್ಷ ವಿರೇಶ್ ಬಸಯ್ಯಾ ಹಿರೇಮಠ ಅವರ ನೇತೃತ್ವದಲ್ಲಿ ಬಿಲ್ವಪತ್ರೆ ಮತ್ತು ಇನ್ನಿತರ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಭರತ್ ಗೋರೆ, ಪರಶುರಾಮ್ ಗೋರೆ, ಲಿಂಗಯ್ಯಾ ಹಿರೇಮಠ, ಮಹೇಶ್ ಪಾಟೀಲ್, ಡಾ. ಈರಯ್ಯಾ ಹಿರೇಮಠ, ಡಾ. ಇಂದ್ರಾಯಿಣಿ ಪಾಟೀಲ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7