ವೀರನಾರಿಯ ಧೈರ್ಯ, ತ್ಯಾಗ ಮತ್ತು ನಾಡಪ್ರೀತಿಯ ಸಂಕೇತವಾದ ರಾಣಿ ಕಿತ್ತೂರ ಚನ್ನಮ್ಮನ ಸ್ಮರಣಾರ್ಥವಾಗಿ, ಅವರ ಹುಟ್ಟೂರಾದ ನಮ್ಮ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿಯಲ್ಲಿ ಇಂದು ಕಿತ್ತೂರು ಉತ್ಸವ–2025 ಹಾಗೂ 201ನೇ ವಿಜಯೋತ್ಸವದ ಸಂಭ್ರಮಾಚರಣೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಕಾಕತಿಯು ರಾಣಿ ಚೆನ್ನಮ್ಮನ ಇತಿಹಾಸದ ಪಾವನ ನೆಲವಾಗಿರುವ ಹಿನ್ನಲೆಯಲ್ಲಿ, ಪ್ರತಿವರ್ಷದಂತೆ ಕಿತ್ತೂರು ಉತ್ಸವದ ಸಾಂಕೇತಿಕ ಆರಂಭ ಇಲ್ಲಿ ನಡೆಯುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಬಾರಿ ಉತ್ಸವವನ್ನು ರಾಣಿ ಚನ್ನಮ್ಮಳ ಶೌರ್ಯ, ದೇಶಭಕ್ತಿ ಮತ್ತು ಮಹಿಳಾ ಸಬಲಿಕರಣದ ಸಂದೇಶವನ್ನು ನಾಡಿನ ಮೂಲೆಮೂಲೆಗಳಿಗೆ ತಲುಪಿಸುವ ಉದ್ದೇಶದಿಂದ ವೈಭವದಿಂದ ಆಯೋಜಿಸಲಾಗಿದೆ. ಉತ್ಸವದ ಭಾಗವಾಗಿ ಸಾಂಸ್ಕೃತಿಕ ಪ್ರದರ್ಶನಗಳು, ಹೋರಾಟಗಾರರ ಸ್ಮರಣಾ ಕಾರ್ಯಕ್ರಮಗಳು ಮತ್ತು ಕನ್ನಡ ಸಂಸ್ಕೃತಿಯ ವೈಭವ ತೋರುವ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕರಾದ ಶ್ರೀ ಆಸೀಫ್ ಸೇಠ್, ಜಿಲ್ಲಾಧಿಕಾರಿಗಳು, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಬೊರಸೆ ಭೂಷಣರಾವ್ ಗುಲಾಬರಾವ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವರ್ಷಾ ಮುಚ್ಚಂಡಿಕರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಶ್ರೀ ವಿನಯ ನಾವಲಗಟ್ಟಿ, ಜಿ.ಪಂ. ಸಿಇಓ ಶ್ರೀ ರಾಹುಲ ಶಿಂಧೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಕಾಕತಿ ಉತ್ಸವ ಸಮಿತಿ ಸದಸ್ಯರು, ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಉಪಸ್ಥಿತರಿದ್ದರು.