Breaking News

ಕಪಿಲೇಶ್ವರ ದೇವಸ್ಥಾನ ಅರ್ಚಕ ಪುತ್ರ ಆತ್ಮಹ* ಮೊಬೈಲ್ ಡೆತ್ ನೋಟ್ ನಲ್ಲಿ ಆರೋಪ |

Spread the love

ಕಪಿಲೇಶ್ವರ ದೇವಸ್ಥಾನ ಅರ್ಚಕ ಪುತ್ರ ಆತ್ಮಹ* ಮೊಬೈಲ್ ಡೆತ್ ನೋಟ್ ನಲ್ಲಿ ಆರೋಪ |
ಕಪಿಲೇಶ್ವರ ‌ದೇವಸ್ಥಾನದವರು ನನ್ನ ಮೇಲೆ ಸುಳ್ಳ ಆರೋಪ ಮಾಡಿದ್ದಾರೆ ಎಂದು ಮೊಬೈಲ್ ನಲ್ಲಿ ಡೆತ್ ನೋಟ್ ಬರೆದು ಅರ್ಚಕರ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಕಪಿಲೇಶ್ವರ ರೋಡ್ ನಲ್ಲಿರುವ ಮನೆಯಲ್ಲಿ ನಡೆದಿದೆ.
ಸಿದ್ದಾಂತ ಪೂಜಾರಿ(27) ಆತ್ಮಹತ್ಯೆ ಮಾಡಿಕೊಂಡ ಯುವಕ. ಸತ್ತು ನಾನು ಮೇಲೆ ಹೋದಾಗ ದೇವರು ಸಿಕ್ಕರೆ ತನಗೆ ಕಿರುಕುಳ ಕೊಟ್ಟವರನ್ನ ಹೊಡೆಯಲು ಹಚ್ಚುತ್ತೇನೆ. ದೇವರ ಕಡೆಯಿಂದ ಅವರಿಗೆ ಹೊಡೆಸುತ್ತೇನೆ. ಅಜ್ಜಿ ಸತ್ತಾಗ ಮಟನ್ ಮಾಡಿದ್ದಿರಿ ಈಗ ನನ್ನ ತಿಥಿ ವೇಳೆ ಮಟನ್ ಮಾಡಬೇಡಿ. ಅದನ್ನ ಬಿಟ್ಟು ಎನೂ ಬೇಕಾದರೂ ತಿನ್ನಲು ಮಾಡಿ. ಯಾರು ಅಳುವುದು ಬೇಡ ನೀವು ಅತ್ತರೆ ನನ್ನ ಆತ್ಮಹತ್ಯೆ ತ್ರಾಸ ಆಗುತ್ತದೆ ಎಂದು ಮೊಬೈಲ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.
ನಾನು ಹುಡುಗಿಗಾಗಿ ಸಾಯುತ್ತಿಲ್ಲ ಅದ್ದೂರಿ ಜೀವನ ಮಾಡಲು ಆಗದೆ ಸಾಯುತ್ತಿದ್ದೇನೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ ಜೋರಾಗಿ ಗಣಪತಿ ಹಬ್ಬ ಮಾಡಿ ಸಾಯಬೇಕು ಎಂದು ಮುಂದೂಡಿದ್ದೆ. ತಾಯಿಗೆ ತೊಂದರೆ ಕೊಡದಂತೆ ತಂದೆಗೆ ಹೇಳಿ
. ಕಪಿಲೇಶ್ವರ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೆ. ಮೂರು ವರ್ಷದ ಹಿಂದೆ ರೇಪ್ ಕೇಸ್ ಹಾಕಿ ದೇವಸ್ಥಾನದಿಂದ ನನಗೆ ಹೊರ ಹಾಕಿದರು. ಅಲ್ಲಿಂದ ನನ್ನ ಜೀವನ ಹಾಳಾಗುತ್ತ ಹೋಯಿತು.
ಇದೆಲ್ಲಾ ನಾನೇ ಬಾಯಲ್ಲಿ ಹೇಳಬೇಕಿತ್ತು ಆದರೆ ಸತ್ತಿದ್ದೇನೆ ನೀವೇ ಓದಿಕೊಳ್ಳಿ ಎಂದು ಡೆತ್ ನೋಟ್ ಬರೆದು ಸಾಯುತ್ತಿದ್ದೇನೆ‌ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಸ್ಥಳಕ್ಕೆ ಖಡೇಬಜಾರ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

Spread the love

About Laxminews 24x7

Check Also

ನ್ಯಾಯಬೆಲೆ ಅಂಗಡಿಯಲ್ಲಿ QR ಸ್ಕ್ಯಾನ್ ಮೂಲಕ ಇಂದಿರಾ ಫುಡ್ ಕಿಟ್ ವಿತರಿಸಿ: ಸಿಎಂ

Spread the loveಬೆಂಗಳೂರು: ಪ್ರತೀ ನ್ಯಾಯಬೆಲೆ ಅಂಗಡಿಯಲ್ಲಿಯೂ ಸಹ ಕ್ಯೂಆರ್(ಕ್ವಿಕ್ ರೆಸ್ಪಾನ್ಸ್) ಸ್ಕ್ಯಾನ್ ಮಾಡಬಹುದಾದ ತಂತ್ರಾಂಶವನ್ನು ಅಳವಡಿಸಿ ಅದರ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ