Breaking News

ವರ್ಷಗಳ ವಿಳಂಬದ ಬಳಿಕ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಸಿದ್ಧ: ಆಗಸ್ಟ್​ ಮಧ್ಯದಲ್ಲಿ ಕಾರ್ಯಾರಂಭ ಸಾಧ್ಯತೆ

Spread the love

ವರ್ಷಗಳ ವಿಳಂಬದ ಬಳಿಕ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಸಿದ್ಧ: ಆಗಸ್ಟ್​ ಮಧ್ಯದಲ್ಲಿ ಕಾರ್ಯಾರಂಭ ಸಾಧ್ಯತೆ 

ಬೆಂಗಳೂರು: ಆರ್​ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ 19.15 ಕಿ.ಮೀ. ಉದ್ದದ ನಮ್ಮ ಮೆಟ್ರೋದ ಬಹು ನಿರೀಕ್ಷಿತ ಹಳದಿ ಮಾರ್ಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಮಂಗಳವಾರ ಶಾಸನಬದ್ಧ ತಪಾಸಣೆ ಪ್ರಾರಂಭಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಆಗಸ್ಟ್​ ಮಧ್ಯದಲ್ಲಿ ಸಾರ್ವಜನಿಕರಿಗೆ ತೆರದುಕೊಳ್ಳುವ ನಿರೀಕ್ಷೆಯಿದೆ.

ಹಳದಿ ಮಾರ್ಗದ ಉದ್ಘಾಟನೆ ವರ್ಷಗಳಿಂದ ವಿಳಂಬವಾಗುತ್ತಿದೆ. 2021ರಲ್ಲಿ ಪೂರ್ಣಗೊಂಡು ಕಾರ್ಯಾರಂಭಗೊಳ್ಳಬೇಕಿತ್ತು. ಆದರೆ ಗಡುವಿಗೆ ಪೂರ್ಣಗೊಳದೇ, ಇನ್ನೂ ಉದ್ಘಾಟನೆಯಾಗಿಲ್ಲ. ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (IAS) ವರದಿ ಬಂದಿದೆ. ಸಿಎಂಆರ್​ಎಸ್​ ಪರಿಶೀಲನೆ ನಡೆಯುತ್ತಿದ್ದು, ಬಿಎಂಆರ್​ಸಿಎಲ್​ ಮೆಟ್ರೋ ಮಾರ್ಗದ ಉದ್ಘಾಟನೆಯತ್ತ ಸಮೀಪಿಸುತ್ತಿದೆ.

ಅಂತಿಮ ಸುರಕ್ಷತಾ ತಪಾಸಣೆ ಪ್ರಗತಿಯಲ್ಲಿ: BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್​ ಚವ್ಹಾಣ್​​ ಮಾಹಿತಿ ನೀಡಿ, ಜುಲೈ 22 ರಂದು ಸಿಎಂಆರ್​ಎಸ್​ ತಪಾಸಣೆ ಆರಂಭಿಸಿ, ಇಂದು ಮುಕ್ತಾಯಗೊಂಡಿತು. ಮೊದಲ ದಿನ ಅಧಿಕಾರಿಗಳು ರೀಚ್​-5 ಅನ್ನು ತಪಾಸಣೆ ನಡೆಸಿದ್ದು, ಸುಮಾರು ನಾಲ್ಕನೇ ಒಂದು ಭಾಗವನ್ನು ಪೂರ್ಣಗೊಳಿಸಿದರು. ಸಿಎಂ​ಆರ್​ಎಸ್​ ತನ್ನ ವರದಿಯನ್ನು ಸಲ್ಲಿಸಿದ ನಂತರ ನಿಲ್ದಾಣದ ಕಾರ್ಯಾಚರಣೆಗಳ ಕುರಿತು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ತಪಾಸಣೆ ವೇಳೆ ಹಳಿಗಳ ಸ್ಥಿತಿ, ಎತ್ತರದ ವಿಭಾಗಗಳ ರಚನಾತ್ಮಕ ಸುರಕ್ಷತೆ, ಸಿಗ್ನಲಿಂಗ್​ ವ್ಯವಸ್ಥೆ ಹಾಗೂ ನಿಲ್ದಾಣಗಳ ಸಿದ್ಧತೆಯ ಪರಿಶೀಲನೆಗಳನ್ನು ಮಾಡಲಾಯಿತು. ತಪಾಸಣೆಯ ಕೊನೆಯ ದಿನದಂದು ಸಿಎಂಆರ್​ಎಸ್​ ಅಧಿಕಾರಿಗಳು ಬೈಯಪ್ಪನಹಳ್ಳಿ ಡಿಪೋದಲ್ಲಿರುವ ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ತಪಾಸಣೆ ನಡೆಸಿದರು ಎಂದು ಹೇಳಿದರು.

ಆಗಸ್ಟ್​ನಲ್ಲಿ ಸೀಮಿತ ಸೇವೆಗಳೊಂದಿಗೆ ಆರಂಭ: ಅನುಮೋದನೆ ದೊರೆತರೆ, ಬಿಎಂಆರ್​ಸಿಎಲ್​ ಹಳದಿ ಮಾರ್ಗದಲ್ಲಿ ಆರಂಭದಲ್ಲಿ, ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ರೈಲು ಚಲಿಸುವಂತೆ ಮೂರು ರೈಲು ಸೆಟ್​ಗಳನ್ನು ತೆರೆಯಲು ಯೋಜಿಸಿದೆ. ಪ್ರತಿದಿನ 30-40 ಟ್ರಿಪ್​ ಆಗಲಿವೆ. ಮೊದಲ ಹಂತದಲ್ಲಿ ಪ್ರಯಾಣಿಕರ ಸಂಖ್ಯೆ ದಿನಕ್ಕೆ 25000 ಆಗುವ ನಿರೀಕ್ಷೆಯಿದೆ. ಹೆಚ್ಚಿನ ರೈಲುಗಳು, ಅಂದರೆ ಒಟ್ಟು 15 ರೈಲು ಸೆಟ್​ಗಳು ಸೇರ್ಪಡೆಗೊಂಡಂತೆ, ದೈನಂದಿನ ಪ್ರಯಾಣಿಕರ ಸಂಖ್ಯೆ 1.5ಲಕ್ಷ ಅಥವಾ ಅದಕ್ಕಿಂತ ಹೆಚ್ಚಾಗಬಹುದು. ಪೀಕ್​ ಸಮಯದಲ್ಲಿ ಜನದಟ್ಟಣೆ ತಪ್ಪಿಸಲು ಜನನಿಬಿಡ ನಿಲ್ದಾಣಗಳಲ್ಲಿ ಆಯ್ದ ಪ್ರವೇಶದ್ವಾರಗಳನ್ನು ಮಾತ್ರ ತೆರೆಯುವ ಸಾಧ್ಯತೆಯಿದೆ. ಹಂತ ಹಂತವಾಗಿ ಸೇವಾಮಟ್ಟವನ್ನು ಹೆಚ್ಚಿಸುವ ಗುರಿ ಇದೆ ಎಂದು ವಿವರಿಸಿದರು.

ಆಗಸ್ಟ್​ 10ರೊಳಗೆ ನಾಲ್ಕನೇ ರೈಲು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಆದರೆ ಕಾರ್ಯಾಚರಣೆ ಆರಂಭಿಸುವ ಮೊದಲು ಕನಿಷ್ಠ ಎರಡು ವಾರಗಳ ಕಾಲ ಅದನ್ನು ಪರಿಕ್ಷೆಗೆ ಒಳಪಡಿಸಲಾಗುವುದು. ರಾತ್ರಿ ವೇಳೆ ಪರೀಕ್ಷೆ ನಡೆಸಲಾಗುತ್ತದೆ. ಈ ಮೆಟ್ರೋ ಹಳದಿ ಮಾರ್ಗ ದಕ್ಷಿಣ ಬೆಂಗಳೂರಿನಲ್ಲಿ ಗಮನಾರ್ಹವಾಗಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಇನ್ಫೋಸಿಸ್​ ಮತ್ತು ಬಯೋಕಾನ್​ನಂತಹ ಪ್ರಮುಖ ಐಟಿ ಸಂಸ್ಥೆಗಳಿರುವ ಎಲೆಕ್ಟ್ರಾನಿಕ್​ ಸಿಟಿಗೆ ಹಾಗೂ ಬಿಟಿಎಂ ಲೇಔಟ್​, ಎಚ್​ಎಸ್​ಆರ್​ ಲೇಔಟ್​ ಮತ್ತು ಬೊಮ್ಮಸಂದ್ರದಂತಹ ವಸತಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಈ ಲೈನ್​ ನೇರ ಸಂಪರ್ಕ ನೀಡುತ್ತದೆ. ಸಿಲ್ಕ್​ ಬೋರ್ಡ್​ ಜಂಕ್ಷನ್​ಗಳಲ್ಲಿನ ನಿರ್ಣಾಯಕ ಅಡಚಣೆಗಳ ಮೇಲಿನ ಹೊರೆ ಕಡಿಮೆ ಮಾಡಲಿದೆ ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ