ಬೆಳಗಾವಿ ಜಿಲ್ಲಾ ಸ್ಕೆಟಿಂಗ್ ಅಸೋಸಿಯೇಷನ್ ವತಿಯಿಂದ ಸ್ಕೆಟಿಂಗ್ ಸ್ಪರ್ಧೆ
ಬೆಳಗಾವಿ ಜಿಲ್ಲಾ ಸ್ಕೆಟಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ಸ್ಕೆಟಿಂಗ್ ಸ್ಪರ್ಧೆ ಯಶಸ್ವಿಯಾಗಿ ಪೂರ್ಣಗೊಂಡಿತು . ವಿಜೇತ ಸ್ಕೆಟರ್ಸ್‌ಗಳಿಗೆ ನಗದು ಬಹುಮಾನ ಪ್ರದಾನ ಮಾಡಲಾಯಿತು.
ಬೆಳಗಾವಿ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಮುಕ್ತ ಜಿಲ್ಲಾ ಮಟ್ಟದ ಸ್ಕೆಟಿಂಗ್ ಸ್ಪರ್ಧೆಗಳು ಶಿವಗಂಗಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಉತ್ಸಾಹದಿಂದ ನಡೆದವು. ಸಮಾಜ ಸೇವಕ ಅಶೋಕ್ ಗೊರೆ ಅವರ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು..
ಈ ಸಂದರ್ಭದಲ್ಲಿ ಸುರ್ಯಕಾಂತ್ ಹಿಂಡಲಗೇಕರ್, ಪಾಂಡುರಂಗ ಗೊರೆ, ಸ್ಕೆಟರ್‌ಗಳು ಮತ್ತು ಅವರ ಪಾಲಕರು ದೊಡ್ಡ ಪ್ರಮಾಣದಲ್ಲಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಸುಮಾರು 120 ಸ್ಕೆಟಿಂಗ್ ಕ್ರೀಡಾಪಟುಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ, ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.
ಈ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲು ಯೋಗೇಶ್ ಕುಲಕರ್ಣಿ, ವಿಶಾಲ್ ವೇಸಣೆ, ಸ್ವರೂಪ ಪಾಟೀಲ, ಅಜಿತ್ ಶಿಲೇದಾರ, ಸೋಹಮ್ ಹಿಂಡಲಗೇಕರ್, ರಾಜ್ ಕದಮ್ , ವಿನಾಯಕ ಪಾಟೀಲ, ಸಾಕ್ಷಮ್ ಜಾಧವ್, ಸಾಗರ್ ಚೌಗುಲೆ, ಋಷಿಕೇಶ್ ಪಸಾರೆ, ಸಾಗರ್ ತರಳೆಕರ ಸೇರಿದಂತೆ ಇನ್ನುಳಿದವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದರು.