Breaking News

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಲಿವ್-ಲವ್‌-ಲಫ್ ಫೌಂಡೇಶನ್ನಿಂದ ) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಜಾರಿ

Spread the love

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಲಿವ್-ಲವ್‌-ಲಫ್ ಫೌಂಡೇಶನ್ನಿಂದ ) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಜಾರಿ
ಬೆಂಗಳೂರು: ವೃತ್ತಿಪರರದ ಮಾನಸಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಲಿವ್-ಲವ್‌-ಲಫ್ ಫೌಂಡೇಶನ್ (ಎಲ್ಎಲ್ಎಲ್) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಎಂಬ ಕಾರ್ಯಕ್ರಮ ಪ್ರಾರಂಬಿಸುತ್ತಿದೆ.
ಇದೊಂದು ಸಮಗ್ರ ಹಾಗೂ ಸಂಶೋಧನಾಧಾರಿತ ಉಪಕ್ರಮವಾಗಿದ್ದು, ದೇಶಾದ್ಯಂತ ಮಾನಸಿಕ ಆರೋಗ್ಯ ಕಾಪಾಡುವಂತಹ ವಾತಾವರಣ ನಿರ್ಮಿಸುವ ಗುರಿ ಹೊಂದಿದೆ.
ಈ ಕುರಿತು ಮಾತನಾಡಿದ ಲಿವ್‌-ಲವ್‌-ಲಾಫ್ ಫೌಂಡೇಶನ್‌ನ ಸಿಇಒ ಅನಿಶಾ ಪಡುಕೋಣೆ, ಮೆಕಿನ್ಸೆ ಹೆಲ್ತ್ ಇನ್‌ಸ್ಟಿಟ್ಯೂಟ್ ನಡೆಸಿದ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಭಾರತೀಯ ಉದ್ಯೋಗಿಗಳು ಕೆಲಸದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೇ. 51ರಷ್ಟು ಜನರು ಈ ಒತ್ತಡದಿಂದ ತಮ್ಮಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವೃತ್ತಿಪರರ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ.
ಎಲ್ಲಾ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ನೌಕರರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ತಿಳಿಯಲು ಅನಾಮಧೇಯ, ಡೇಟ-ಚಾಲಿತ ಒಳನೋಟ ಸಜ್ಜುಗೊಳಿಸುತ್ತಿದ್ದೇವೆ. ಜೊತೆಗೆ, ಪ್ರತಿ ಕಂಪನಿಯು ಮೌಲ್ಯಮಾಪನದ ಆಧಾರದ ಮೇಲೆ ಕಸ್ಟಮೈಸ್ ಮಾಡಿದ ವರದಿಯನ್ನು, ನಿರ್ಬಂಧಿತ ಪ್ರವೇಶದೊಂದಿಗೆ, ಪಡೆಯುತ್ತದೆ. ವರದಿಯು ನಾಯಕತ್ವದ ಬದ್ಧತೆ, ಕೆಲಸದ ಹೊರೆಯ ಸುಸ್ಥಿರತೆ, ಆತಂಕ, ಖಿನ್ನತೆ ಮತ್ತು ಯಾತನೆಯ ಲಕ್ಷಣಗಳಂತಹ ವಿಷಯಗಳನ್ನು ಹೈಲೈಟ್ ಮಾಡುತ್ತದೆ. ಎಲ್ಎಲ್ಎಲ್, ನಾಯಕತ್ವ ತಂಡದೊಂದಿಗೆ ವರದಿಗಳನ್ನು ಚರ್ಚಿಸುತ್ತದೆ ಮತ್ತು ಡೇಟವನ್ನು ಸ್ಪಷ್ಟ, ಕಾರ್ಯಸಾಧ್ಯ ಆದ್ಯತೆಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
ಮೌಲ್ಯಮಾಪನದ ಜೊತೆಗೆ ಲೈವ್‌ಲವ್‌ಲಾಫ್, ಕಂಪನಿಗಳಿಗೆ ಪ್ರಾಯೋಗಿಕ, ಸಂಸ್ಥೆ-ನಿರ್ದಿಷ್ಟ ಶಿಫಾರಸುಗಳೊಂದಿಗೆ ಸೂಕ್ತವಾದ ಮಾರ್ಗಸೂಚಿಯನ್ನು ಒದಗಿಸುತ್ತದೆ, ಇನ್ನೂ ಹಲವು ಉಪಕ್ರಮವನ್ನು ಜಾರಿ ಮಾಡಲಾಗುತ್ತದೆ ಎಂದು ಹೇಳಿದರು.

Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ