Breaking News

ಕಣ್ಣೀರು ಯಾರೂ ಹಾಕಬಹುದು.. ಬೆವರನ್ನಲ್ಲ:ಸಿ.ಪಿ.ಯೋಗೇಶ್ವರ್‌

Spread the love

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಐದು ಬಾರಿ ಶಾಸಕನಾದರೂ ರಾಜಕೀಯವಾಗಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಜನರ ಒಳಿತಿಗಾಗಿ ಈ ಸ್ಥಿತ್ಯಂತರ ಎಂಬ ಕಾರಣಕ್ಕೆ ನನಗೆ ಬೇಸರವಿಲ್ಲ. ಎರಡು ಬಾರಿಯ ಸೋಲಿಗೆ ಕಾರಣ ತಿಳಿಯದಿರುವುದು ಬೇಸರ ತರಿಸಿದೆ ಎಂದು ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಹೇಳಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ಚನ್ನಪಟ್ಟಣವನ್ನು ಸ್ಪಿನ್‌ಬೋರ್ಡ್‌ ಮಾಡಿಕೊಂಡರು. ಆದರೆ ಅಭಿವೃದ್ಧಿಯನ್ನೇ ಮಾಡಲಿಲ್ಲ. ರಾಮನಗರ ಜಿಲ್ಲೆ ನೀರಾವರಿಗೆ ಯಾಕೆ ನೀವು ಸಿಎಂ ಆದಾಗ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಕಣ್ಣೀರು ಯಾರು ಬೇಕಾದರೂ ಬರಿಸಿಕೊಳ್ಳಬಹುದು. ಆದರೆ ಬೆವರು ಹಾಗಲ್ಲ. ನೀರಾವರಿಗಾಗಿ ನಾನು ಕಾಡುಮೇಡು ಅಲೆದಾಡಿದ್ದೇನೆ ಎಂದರು.

ನನಗೆ ಟಿಕೆಟ್‌ ಕೊಡುವ ಭರವಸೆ ನೀಡಿ ಮಾತು ತಪ್ಪಿದರು. ಇವರ ನಡವಳಿಕೆ ನೋಡಿ ಹರಕೆಯ ಕುರಿಯಾಗುತ್ತೇನೆ ಎಂದು ಆತಂಕಗೊಂಡು ಕಾಂಗ್ರೆಸ್‌ ಸೇರಿದೆ. ನಿಖೀಲ್‌ ಮಂಡ್ಯ ಅನಂತರ ರಾಮನಗರಕ್ಕೆ ಬಂದರು. ಈಗ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಬೇಕಾದಷ್ಟು ಕ್ಷೇತ್ರಗಳಿದ್ದು, ನನಗೆ ಇರುವುದು ಚನ್ನಪಟ್ಟಣ ಒಂದೇ ಎಂದರು.


Spread the love

About Laxminews 24x7

Check Also

ವಧು–ವರ ಮೆಳವಿಗಳು ಹಾಗೂ ಸಾಮೂಹಿಕ ವಿವಾಹ ಸಮಾರಂಭಗಳು ಪವಿತ್ರ ಪುಣ್ಯಕಾರ್ಯ : ಶಾಸಕ ಮಾರುತ್ತಿರಾವ್ ಮುಳೆ

Spread the love ವಧು–ವರ ಮೆಳವಿಗಳು ಹಾಗೂ ಸಾಮೂಹಿಕ ವಿವಾಹ ಸಮಾರಂಭಗಳು ಪವಿತ್ರ ಪುಣ್ಯಕಾರ್ಯ : ಶಾಸಕ ಮಾರುತ್ತಿರಾವ್ ಮುಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ