ಬೆಳಗಾವಿ: ಅಖಂಡ ಜಿಲ್ಲೆ ಸೇರಿ ಈ ಬಾರಿ ಒಟ್ಟು 10,175 ವಿದ್ಯಾರ್ಥಿಗಳು ಫೇಲಾಗಿದ್ದಾರೆ!
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 4,742 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಅಂದರೆ; 2,490 ಮಕ್ಕಳು ಅನುತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಿಂದ 1,352 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಫೇಲಾಗಿದ್ದಾರೆ.
ಅದೇ ರೀತಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 5,433 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 3,606, ವಾಣಿಜ್ಯ ವಿಭಾಗದಲ್ಲಿ 927 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಮಕ್ಕಳು ಫೇಲಾಗಿದ್ದಾರೆ.
‘ಕಬ್ಬಿಣದ ಕಡಲೆ’ ಎಂದು ಹೇಳುವ ವಿಜ್ಞಾನ ವಿಭಾಗದಲ್ಲೇ ಫೇಲಾದವರು ಕಡಿಮೆ. ‘ಸುಲಿದ ಬಾಳೆ ಹಣ್ಣು’ ಎಂದು ಪರಿಗಣಿಸುವ ಕಲಾ ವಿಭಾಗದಲ್ಲೇ ಅತಿ ಹೆಚ್ಚು ಮಕ್ಕಳು ಫೇಲಾಗಿದ್ದು ಅಚ್ಚರಿಕೆ ಕಾರಣವಾಗಿದೆ.