Breaking News

ಪಂಚ ಗ್ಯಾರಂಟಿಯಿಂದ ಬಡ ಕುಟುಂಬಕ್ಕೆ ನೆರವು: ಷಣ್ಮುಖ ಶಿವಳ್ಳಿ

Spread the love

ಟ್ಟಗೇರಿ (ಗುಡಗೇರಿ): ‘ನಮ್ಮ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಪಂಚ ಗ್ಯಾರಂಟಿಯನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ. ಇದರಿಂದ ಬಡವರಿಗೆ ನೆರವಾಗುತ್ತದೆ’ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹೇಳಿದರು.

ಕುಂದಗೋಳ ತಾಲ್ಲೂಕಿನ ಮಂಡಿಗನಾಳ, ರಟ್ಟಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಅವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿಯಿಂದ ಬಡ ಕುಟುಂಬಕ್ಕೆ ನೆರವು: ಷಣ್ಮುಖ ಶಿವಳ್ಳಿ

‘ಬಿಜೆಪಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ನೀಡಿದ ಭರವಸೆಗಳು ಇನ್ನು ಭರವಸೆಯಾಗೆ ಉಳಿದಿದೆ. ಕೇವಲ ದೇಶವಿದೇಶಗಳಲ್ಲಿ ಮೋದಿ ಅವರು ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠವನ್ನು ಮತದಾರರು ಕಲಿಸಲಿದ್ದಾರೆ’ ಎಂದು ಹೇಳಿದರು.

ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ‘ಭಾಗ್ಯಲಕ್ಷ್ಮಿ ಸೇರಿದಂತೆ ಅನೇಕ ಯೋಜನೆಯಿಂದ ಮಹಿಳೆಯರಿಗೆ ಸಹಾಯವಾಗಿದೆ’ ಎಂದು ಹೇಳಿದರು.

ಈ ಸಂಧರ್ಭದಲ್ಲಿ ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ವೆಂಕನಗೌಡ ದ್ಯಾ. ಹಿರೇಗೌಡ್ರ (ಪೊಲೀಸ ಪಾಟೀಲ್), ಮುಖಂಡರಾದ ದಯಾನಂದ ಕುಂದೂರ, ವಿಜಯಕುಮಾರ ಹಾಲಿ, ಭೀರಪ್ಪ ಕುರುಬರ, ನೀಲಪ್ಪ ಗುಡೇನಕಟ್ಟಿ, ನೀಲಪ್ಪ ಆಡಿನ, ರಮೇಶ ಸೂರಣಗಿ , ರಾಘವೇಂದ್ರ ನೆರ್ತಿ, ಮಾಲತೇಶ ತಳ್ಳಳ್ಳಿ, ರಾಜು ಪಾಟೀಲ, ಸಲೀಮ ಕಡ್ಲಿ, ಗುರು ಚಲವಾದಿ, ವಿನಯ ಕತ್ತಿ, ದಿನೇಶ ಮುದ್ದಪ್ಪನವರ ಇನ್ನೂ ಅನೇಕ ಕಾರ್ಯಕರ್ತರಿದ್ದರು.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ