Breaking News

ಮಧ್ಯರಾತ್ರಿ ಪಂಪ್ ಸೆಟ್ ಕಳ್ಳತನಕ್ಕೆ ಬಂದಿದ್ದ ತಂಡ, ಓರ್ವ ಸೆರೆ, ಇಬ್ಬರು ಪರಾರಿ

Spread the love

ಮುದ್ದೇಬಿಹಾಳ : ರೈತರ ಪಂಪಸೆಟ್ ಕಳ್ಳತನ ಮಾಡುತ್ತಿದ್ದ ತಂಡದ ಓರ್ವ ಸದಸ್ಯನನ್ನು ಮಧ್ಯರಾತ್ರಿ ರೈತರೆ ಹಿಡಿದು, ಕಟ್ಟಿಹಾಕಿ ಬೆಳಿಗ್ಗೆ ಪೊಲೀಸರಿಗೊಪ್ಪಿಸಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಹುಲಗಬಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಅಡವಿ ಹುಲಗಬಾಳ ಕೆರೆ, ಜಮೀನುಗಳಲ್ಲಿನ ಕೊಳವೆ ಭಾವಿ, ತೆರೆದ ಭಾವಿ ಮುಂತಾದವುಗಳಿಗೆ ರೈತರು ತಮ್ಮ ಹೊಲಕ್ಕೆ ನೀರು ಪಡೆದುಕೊಳ್ಳಲು ಪಂಪಸೆಟ್ ಅಳವಡಿಸಿದ್ದಾರೆ.

ಮೇಲಿಂದ ಮೇಲೆ ಪಂಪಸೆಟ್ ಕಳ್ಳತನವಾಗುತ್ತಿದ್ದವು. ಆದರೆ ಕಳ್ಳರು ಸಿಕ್ಕಿಬಿದ್ದಿರಲಿಲ್ಲ. ಶುಕ್ರವಾರ ಮಧ್ಯರಾತ್ರಿ ರೈತನೊಬ್ಬ ಆರೋಗ್ಯ ಸಮಸ್ಯೆಯಿಂದಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವಾಗ ಸೇತುವೆ ಹತ್ತಿರ ಯಾರೋ ಓಡಾಡಿದಂತಾಗಿದೆ. ಈ ವೇಳೆ ಕೆಲ ರೈತರನ್ನು ಕರೆದು ಹುಡುಕಾಡಿದಾಗ ಒಬ್ಬ ಸೇತುವೆ ಕೆಳಗೆ ಅಡಗಿ ಕುಳಿತಿರುವುದನ್ನು ಕಂಡು ಹೋಗಿ ಹಿಡಿದಿದ್ದಾರೆ. ಇನ್ನಿಬ್ಬರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಯುವಕನನ್ನು ಅಲ್ಲೇ ಇದ್ದ ಕಂಬಕ್ಕೆ ಕಟ್ಟಿಹಾಕಿ ಇನ್ನಿಬ್ಬರಿಗಾಗಿ ಹುಡುಕಾಡುವಷ್ಟರಲ್ಲಿ ಬೆಳಗಾಗಿತ್ತು.

 

Pumpset: ಮಧ್ಯರಾತ್ರಿ ಪಂಪ್ ಸೆಟ್ ಕಳ್ಳತನಕ್ಕೆ ಬಂದಿದ್ದ ತಂಡ, ಓರ್ವ ಸೆರೆ, ಇಬ್ಬರು ಪರಾರಿ

ಸಿಕ್ಕ ಒಬ್ಬ ಯುವಕನನ್ನು ಪೊಲೀಸರಿಗೆ ಒಪ್ಪಿಸಲು 112ಗೆ ಕರೆ ಮಾಡಿದ್ದಾರೆ.ಯುವಕನನ್ನು ಪೊಲೀಸರಿಗೆ ಒಪ್ಪಿಸುವುದಕ್ಕೂ ಮುನ್ನ ಗ್ರಾಮವ್ಯಾಪ್ತಿಯ ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸೈ ಅವರನ್ನು ಸ್ಥಳಕ್ಕೆ ಕರೆಸುವಂತೆ ರೈತರು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಗೊಂದಲ ನಿರ್ಮಾಣಗೂಂಡು 112 ಸಿಬ್ಬಂದಿ ಹಾಗೂ ರೈತರ ಮಧ್ಯೆ ವಾಗ್ವಾದ ನಡೆಯಿತು. ಈ ಸಂದರ್ಭ ರೈತರು ಮಾತನಾಡಿ ಬಹಳ ದಿನಗಳಿಂದ ರೈತರ ಪಂಪಸೆಟ್ಗಳು ರಾತ್ರೋರಾತ್ರಿ ಕಳ್ಳತನ ಆಗುತ್ತಿದ್ದವು , ಗೋನಾಳ ಗ್ರಾಮದ ಪಂಪಸೆಟ್ ದುರಸ್ತಿ ಮಾಡುವ ವ್ಯಕ್ತಿಯ ಮನೆ ಮುಂದೆ ರಿಪೇರಿಗಾಗಿ ಇಟ್ಟಿದ್ದ ಪಂಪಸೆಟ್ ಗಳು ಕಳ್ಳತನವಾಗಿದ್ದವು.


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ