ಬೆಳಗಾವಿ : ದಿನ ಕಳೆದಂತೆ ಬೆಳಗಾವಿ ಲೋಕಸಭಾ ಅಖಾಡ ರಂಗು ಪಡೆಯುತ್ತಿದ್ದು ನಾಯಕರ ಆರೋಪ, ಹಾಗೂ ಪ್ರತ್ಯಾರೋಪಗಳು ಜೋರಾಗಿವೆ. ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಅಬ್ಬರದ ಪ್ರಚಾರ ನಡೆಸಿದ್ದಾರೆ.
ರಾಜಕೀಯ ಬದ್ಧ ಎದರುರಾಳಿಗಳಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಬ್ಬರೂ ನಾಯಕು ಅಖಾಡಕ್ಕೆ ಇಳಿದ ಕಾರಣ ಲೋಕಸಭಾ ಕಣ ಮತ್ತಷ್ಟು ರಂಗು ಪಡೆದಿದೆ. ಈಗಾಗಲೇ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆಯ ಅನೇಕ ಕ್ಷೇತ್ರದಲ್ಲಿ ತಮ್ಮ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ.
ಇನ್ನೂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅಖಾಡಕ್ಕೆ ಇಳಿದಿದ್ದು ಜಗದೀಶ್ ಶೆಟ್ಟರ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಜಾರಕಿಹೊಳಿ ಸಹೋದರರ ಕ್ಷೇತ್ರವೂ ಬರುತ್ತವೆ. ಗೋಕಾಕ್ ಮತ್ತು ಅರಭಾವಿ ಲೋಕಸಭಾ ಕ್ಷೇತ್ರವೂ ಅಭ್ಯರ್ಥಿ ಗೆಲುವುಗೆ ಪ್ರಮುಖ ಪಾತ್ರವಹಿಸುತ್ತವೆ.
ಸಧ್ಯ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಅಖಾಡ ಮತ್ತಷ್ಟು ರಂಗು ಪಡೆಯುತ್ತಿದ್ದು ಮಂತ್ರಿ ಮಕ್ಕಳ ವಿರುದ್ಧ ಬಿಜೆಪಿ ಸಮರ ಸಾರಿಸೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಕೂಡಾ ಮಾಡು ಇಲ್ಲವೆ ಮಡು ಎಂಬ ಪ್ರಯತ್ನ ಮುಂದುವರಿಸಿದ್ದು ಮತದಾರರ ಆಶಿರ್ವಾದ ಯಾರಿಗೆ ದೊತೆಯಲಿದೆ ಎಂಬುದನ್ನು ಫಲಿತಾಂಶ ನಿರ್ಧರಿಸಲಿದೆ.