ಶಿವಮೊಗ್ಗ: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟವನ್ನು ಬಿ.ವೈ ವಿಜಯೇಂದ್ರ ಕಳೆದುಕೊಳ್ಳಲಿದ್ದಾರೆ ಎಂಬುದಾಗಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಲೋಕಸಭಾ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ.
ಇದು ಇಡೀ ರಾಜ್ಯದಲ್ಲೇ ಚರ್ಚೆಯಾಗಲಿದೆ. ನನ್ನ ಪುತ್ರನನ್ನು ಎಂಎಲ್ಸಿ ಮಾಡ್ತೀವಿ ಅಂದಿದ್ದರು, ನನ್ನ ರಾಜ್ಯಪಾಲರನ್ನಾಗಿ ಮಾಡ್ತೀವಿ ಅಂದಿದ್ದರು. ಆದ್ರೇ ನನಗೆ ಯಾವುದು ಬೇಡ ಎಂದರು.
ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾದ ಬಳಿಕ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರ ಹುದ್ದೆ ಕಳೆದುಕೊಳ್ಳುತ್ತಾರೆ. ಇದರಲ್ಲಿ ಎರಡು ಮಾತಿಲ್ಲ ಎಂಬುದಾಗಿ ಭವಿಷ್ಯ ನುಡಿದರು.
Laxmi News 24×7