ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸುವ ಪಾಲಕರೊಮ್ಮೆ ಈ ಸ್ಟೋರಿ ಓದಲೇ ಬೇಕು. ಪ್ರತಿಯೊಬ್ಬ ಪೋಷಕರು ಕಂಗಾಲಾಗುವಂತಹ ವಿಷಯವಿದು. ಹೌದು ಮಕ್ಕಳನ್ನು ಓದಲು ಕಳುಹಿಸಿದರೆ ಸಾಲದು, ಅವರ ಮೇಲೆ ಒಂದು ನಿಗಾ ಇಟ್ಟಿರಬೇಕು. ಇಲ್ಲವಾದಲ್ಲಿ ದಾರಿ ತಪ್ಪುವ ಸಾಧ್ಯತೆ ಇರುತ್ತದೆ.ಇದಕ್ಕೆ ತಾಜಾ ನಿದರ್ಶನವೇ ಈ ಒಂದು ಘಟನೆ. ರಾಯಚೂರಿನ ಈ ಸ್ಥಳ ಅಪ್ರಾಪ್ತ ಪ್ರೇಮಿಗಳ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ.
ಕಲಾವಿದರ ಬಾಳಿಗೆ ಬೆಳಕಾಗಬೇಕಿದ್ದ ರಂಗಮಂದಿರವೀಗ ಪ್ರೇಮ ಮಂದಿರವಾಗಿದೆ. ಅಪ್ರಾಪ್ತರ ಲವ್ ಅಡ್ಡ ಆಗಿ ಬದಲಾಗಿದೆ.
ಹೌದು, ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ಇದೀಗ ಅನೈತಿಕ ತಾಣವಾಗಿ ಬದಲಾಗಿದೆ. ರಂಗಮಂದಿರದ ಪಕ್ಕದಲ್ಲೇ ಸಾರ್ವಜನಿಕ ಪಾರ್ಕ್ ಇರುವುದರಿಂದ ಯಾರ ಭಯವಿಲ್ಲದೇ ಚುಂಬಿಸುತ್ತಾ, ಅಶ್ಲೀಲವಾಗಿ ವರ್ತಿಸುವುದು ಸಾಮಾನ್ಯವಾಗುತ್ತಿದೆ.

ಶಾಲಾ-ಕಾಲೇಜಿಗೆ ಬರುವ ಅಪ್ರಾಪ್ತರ ಅನೈತಿಕ ಚಟುವಟಿಕೆಗಳನ್ನು ಸಾರ್ವಜನಿಕರು ತಲೆ ತಗ್ಗಿಸಿ ಹೋಗುವಂತಾಗಿದೆ. ರಂಗಮಂದಿರದ ಆವರಣದಲ್ಲಿ ಎಲ್ಲೆಂದರಲ್ಲಿ ಕಾಂಡೋಮ್ಗಳು ಬಿದ್ದಿವೆ.
ಅಲ್ಲದೆ, ಎಣ್ಣೆ ಬಾಟಲ್ಗಳು ಮತ್ತು ಸಿಗರೇಟ್ ಪ್ಯಾಕ್ಗಳು ರಾಶಿಯೇ ಬಿದ್ದಿದ್ದು, ಇಡೀ ರಂಗಮಂದಿರ ಕೊಳಕು ಪ್ರದೇಶವಾಗಿ ಮಾರ್ಪಾಡಾಗಿದೆ. ಹಗಲಲ್ಲಿ ಪ್ರೇಮಿಗಳ ಹಾಟ್ ಸ್ಪಾಟ್ ಆಗುವ ಈ ರಂಗಮಂದಿರ ರಾತ್ರಿಯಾದ್ರೆ ಕುಡುಕರ ಅಡ್ಡೆಯಾಗುತ್ತದೆ.
ರಂಗಮಂದಿರದಿಂದ ಕೆಲವೇ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಗಲು-ರಾತ್ರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
Laxmi News 24×7