ಬೆಂಗಳೂರು: ಇಂದು ವಿಧಾನಸಭೆಯ ಅಧಿವೇಶನದಲ್ಲಿ ಕೆರೆಗೋಡು ಧ್ವಜ ದಂಗಲ್ ವಿಚಾರ ಪ್ರಸ್ತಾಪವಾಗಿದ್ದು, ಈ ವೇಳೆ ಸ್ಪೀಕರ್ ಯು. ಟಿ ಖಾದರ್ ಅವರು ಸರ್ಕಾರಕ್ಕೆ ನೀಡಿದ ಸಲಹೆ ಚರ್ಚಾ ವಸ್ತುವಾಗಿದೆ.
ರಾಷ್ಟ್ರ ಧ್ವಜಕ್ಕೆ ಅವಮಾನ ಆಗಿದ್ದರೆ, ಅವಮಾನ ಮಾಡಿದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
ಈ ನಿಟ್ಟಿನಲ್ಲಿ ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕಿ ಎಂದು ಸರ್ಕಾರಕ್ಕೆ
ಸ್ಪೀಕರ್ ಖಾದರ್ ಸಲಹೆ ನೀಡಿದರು.
ಕೆರಗೋಡು ಧ್ವಜ ದಂಗಲ್ ಪ್ರಕರಣ ರಾಜಕೀಯಗೊಂಡು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಂಡ್ಯದಲ್ಲಿ ಕೇಸರಿ ಶಾಲು ಹೊದ್ದು ಪ್ರತಿಭಟನೆಯನ್ನೂ ಮಾಡಿದ್ದರು. ಈಗ ಇದೇ ಪ್ರಕರಣವು ಸದಸನದಲ್ಲಿಯೂ ಸದ್ದು ಮಾಡಿದ್ದು, ಸ್ಪೀಕರ್ ಖಡಕ್ ಆಗಿ ಮಾತನಾಡಿ ಗಮನ ಸೆಳೆದರು.