ಅಷ್ಟಕ್ಕೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೊಟ್ಟಿ ಬುತ್ತಿ ಜಾತ್ರೆ ಮಾಡೋದ್ಯಾಕೆ? ಈ ರೊಟ್ಟಿ ಬುತ್ತಿ ಜಾತ್ರೆ ಸ್ಟೋರಿ ಇಲ್ಲಿದೆ.ತಲೆ ಮೇಲೆ ಬುತ್ತಿ ಹೊತ್ತು ಸಾಗುತ್ತಿರುವ ಮಹಿಳೆಯರು, ತ್ರಿವರ್ಣ ಧ್ವಜದ ಬಣ್ಣಗಳನ್ನೇ ರೊಟ್ಟಿ ಬುತ್ತಿಗೆ ಹಾಕಿ ರಾಷ್ಟ್ರ ಧ್ವಜದ ಮೆರವಣಿಗೆ ಮಾದರಿಯಲ್ಲಿ ಸಾಗಿದ ಯಲ್ಲಾಲಿಂಗೇಶ್ವರ ಭಕ್ತರ ಮೆರವಣಿಗೆ. ಜಾತಿ ಧರ್ಮದ ಬೇಧಭಾವ ಬಿಟ್ಟು ಅದ್ದೂರಿ ಜಾತ್ರೆಯಲ್ಲಿ ಹತ್ತೂರ ಜನರು ಭಾಗಿಯಾಗಿದ್ದರು.
ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ. ಹೌದು, ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಯಲ್ಲಾಲಿಂಗ ದೇವರ ಜಾತ್ರೆ ನೆರವೇರಿದೆ.
ಈ ಬಾರಿ ವಿಶೇಷ ಅಂದ್ರೇ ಹತ್ತು ಸಾವಿರ ಮಹಿಳೆಯರು ಹೊತ್ತು ತರ್ತಿದ್ದ ರೊಟ್ಟಿ ಬುತ್ತಿಯನ್ನ ತ್ರಿವರ್ಣ ಧ್ವಜದ ಬಣ್ಣದಲ್ಲಿನ ಬಟ್ಟೆ ಕಟ್ಟಿಕೊಂಡು ಸಾಲಾಗಿ ಬಂದು ದೇವರಿಗೆ ಅರ್ಪಣೆ ಮಾಡಿರುವುದು. ಈ ಮೂಲಕ ಹೊಸ ಸಾಧನೆಯನ್ನೂ ಯಲ್ಲಾಲಿಂಗ ಮಹರಾಜರ ಭಕ್ತರು ಮಾಡಿದ್ದಾರೆ.