Breaking News

ಬುಡಾ ಮತ್ತು ಪಾಲಿಕೆ ವಿರುದ್ದ ಪ್ರತಿಭಟನೆ ನಡೆಸಿದ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು

Spread the love

ಮೂಲಭೂತ ಸೌಕರ್ಯಕ್ಕಾಗಿ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು

ಬೆಳೆಗಾವಿಯ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು ಬುಡಾ ಮತ್ತು ಪಾಲಿಕೆ ವಿರುದ್ದ ಪ್ರತಿಭಟನೆ ನಡೆಸಿದರು , ಮಹಾನಗರ ಪಾಲಿಕೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು

1982 ರಲ್ಲಿ ಬಸವನಕುಡಚಿ ದೇವರಾಜ ಅರಸ ಕಾಲೋನಿ ಬುಡಾದಿಂದ ನಿರ್ಮಾಣವಾಗಿದೆ, 40 ವರ್ಷಗಳಿಂದ ದೇವರಾಜ ಅರಸ ಕಾಲೋನಿಯು ಯಾವದೇ ಅಭಿವೃದ್ದಿಯಾಗದೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ , ರಸ್ತೆಗಳು ಸರಿಯಾಗಿಲ್ಲ , ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ , ನೀರಿನ ಸಮಸ್ಯೆ ವಿದೆ , ಈ ಬಗ್ಗೆ ಶಾಸಕರು ಸಂಸದರು ಪಾಲಿಕೆಗೆ ಮನವಿ ಸಲ್ಲಿಸಿದರು ಯಾವದೇ ರೀತಿಯ ಪ್ರಯೋಜನೆ ವಾಗಿಲ್ಲ , ಇನ್ನೂ 15 ದಿನದ ಒಳಗೆ ಎಲ್ಲವೂ ಸರಿಹೋಗದೆ ಇದ್ದರೆ ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡುವುದಾಗಿ ದೇವರಾಜ ಅರಸ ವೆಲ್ಪೇರ್ ಸೊಸೈಟಿಯ ಸದ್ಯಸರು ಹೇಳಿದರು


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ