ಬೆಳಗಾವಿಯ ಖ್ಯಾತ ಕರಾಟೆ ಪಟು ಮಧು ಪಾಟೀಲ ಆಯೋಜಿಸಿದ್ದ ಭಾರತೀಯ ಕರಾಟೆ ಸಂಸ್ಥೆಯ ವತಿಯಿಂದ ಇಂದು ಲೇಡಿಸ್ ಕ್ಲಬ್ ನಲ್ಲಿ ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆ ನಡೆಯಿತು.
ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆಯಲ್ಲಿ 40 ಕರಾಟೆ ಪಟುಗಳು ಭಾಗವಹಿಸಿದ್ದರು. ಅವರಲ್ಲಿ 10 ವಿದ್ಯಾರ್ಥಿಗಳು ಕಿತ್ತಳೆ ಬೆಲ್ಟ್ ಪಡೆದರು. ರಿಯಾ ಅಶ್ವ ಶಾ, ಶ್ರೀಧರ್, ಇಂದ್ರಜ ಕಾಳೆ, ನೇಹಾ ಪೋಟೆ, ಬ್ಲೂ ಬೆಲ್ಟ್ ಪಡೆದರು. ವಂದನಾ ಕುರುಪ್, ರಿಯಾ ವರ್ನೇಕರ್, ಸಾಯಿರಾಜ್ ದೇಸಾಯಿ, ಅಥರ್ವ ಆಪ್ಟೇಕರ್ ಅವರಿಗೆ ಅತ್ಯುನ್ನತ ಕಂದು ಬೆಲ್ಟ್ ನೀಡಲಾಯಿತು.
ಈ ಕರಾಟೆ ಪಟುಗಳಿಗೆ ಮುಖ್ಯ ತರಬೇತುದಾರ ಮಧು ಪಾಟೀಲ್, ತರಬೇತುದಾರರಾದ ಪ್ರಸಾದ್ ಪಾಟೀಲ್ ಮತ್ತು ಆಕಾಶ ಪಾಟೀಲ್ ಮಾರ್ಗದರ್ಶನ ನೀಡಿದರು.