ರಾಮದುರ್ಗ : ನಗರದ ಯುನಿಯನ್ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರು ಹೈರಾಣು ಆಗಿ ತರಾಟೆಗೆ ತಗೆದುಕೊಂಡ ಘಟನೆ ಜರುಗಿದೆ, ಸರ್ಕಾರದ ಗೃಹಲಕ್ಷ್ಮಿ , ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ಅನ್ನಭಾಗ್ಯ ಹಣ ಇತರ ಯೋಜನೆಗಳನ್ನು ಬ್ಯಾಂಕ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಈ ಕುರಿತು ರಾಮದುರ್ಗದ ತಾಲೂಕಿನ ಮಹಿಳೆಯರು ತಮ್ಮ ಖಾತೆಗೆ ಹಣ ಜಮಾವಣೆ ಕುರಿತು ಖಾತರಿ ಪಡಿಸಲು,
ಎನ್ ಸಿ ಪಿ ನಂಬರ ಚೇಕ್ ಮಾಡಲು ಮತ್ತು ಪಾಸ್ ಬುಕ್ ತಿದ್ದುಪಡಿ ಸರಿಪಡಿಸಿ ಸಲು ಮತ್ತು ವಿಚಾರಣೆಗೆ ನಗರದ ಯುನಿಯನ್ ಬ್ಯಾಂಕಿಗೆ ನೂರಾರು ಜನ ಮಹಿಳೆಯರು ಸಾಲುಗಟ್ಟಿ ದಿನಪೂರ್ತಿ ನಿಂತರು ಸಿಬ್ಬಂದಿಗಳು ಮಾತ್ರ ಗ್ರಾಹಕರಿಗೆ ಸೂಕ್ತ ಮಾರ್ಗದರ್ಶನ ನಿಡದೆ ಇರುವದರಿಂದ ರೊಚ್ಚಿಗೆದ್ದ ಮಹಿಳೆಯರು ಬ್ಯಾಂಕ ಕಾವಲುಗಾರನಿಗೆ ತರಾಟೆ ತಗೆದುಕೊಂಡರು, ಇಷ್ಟಾದರೂ ಯಾವೊಬ್ಬ ಸಿಬ್ಬಂದಿ ಬರಲೆಇಲ್ಲಾ ಈ ಕುರಿತು ಸರ್ಕಾರಕ್ಕೆ ಹಿಡಿ ಶಾಪ ಹಾಕಿ ಮಹಿಳೆಯರು ಮನೆಗೆ ತೆರಳಿದರು.
ಈ ಕುರಿತು ವಿಧಾನ ಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಬ್ಯಾಂಕ್ ಅಧಿಕಾರಿಗಳೊಡನೆ ಚರ್ಚಿಸಿ ಮಹಿಳೆಯರಿಗೆ ಆಗುವ ತೊಂದರೆ ಸರಿ ಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.