Breaking News

ಪ್ರಭಾಶುಗರ ಅಧ್ಯಕ್ಷರಾಗಿ ಅಶೋಕ ಪಾಟೀಲ, ಉಪಾಧ್ಯಕ್ಷರಾಗಿ ರಾಮಣ್ಣಾ ಮಹಾರಡ್ಡಿ ಪುನರಾಯ್ಕೆ

Spread the love

ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಸೋಮವಾರದಂದು ಸಕ್ಕರೆ ಕಾರ್ಖಾನೆಯ ಸಭಾಂಗಣದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ ಅವರು ಪ್ರಕಟಿಸಿದರು.

ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಶೋಕ ಪಾಟೀಲ ಹಾಗೂ ರಾಮಣ್ಣಾ ಮಹಾರಡ್ಡಿ ಮಾತನಾಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ನಿರ್ದೇಶಕ ಮಂಡಳಿ ಸದಸ್ಯರಾದ ಕೆಂಚನಗೌಡ ಶಿವನಗೌಡ ಪಾಟೀಲ, ಗಿರೀಶ ವೆಂಕಪ್ಪ ಹಳ್ಳೂರ, ಜಗದೀಶ ಕೃಷ್ಣಪ್ಪ ಬಂಡ್ರೊಳ್ಳಿ, ಬಸನಗೌಡ ಶಿವನಗೌಡ ಪಾಟೀಲ, ಭೂತಪ್ಪ ತಮ್ಮಣ್ಣ ಗೋಡೇರ, ಮಲ್ಲಿಕಾರ್ಜುನ ಭೀಮಪ್ಪ ಕಬ್ಬೂರ, ಮಹಾದೇವಪ್ಪ ರಾಜಪ್ಪ ಭೋವಿ, ಮಾಳಪ್ಪ ಉದ್ದಪ್ಪ ಜಾಗನೂರ, ಯಲ್ಲವ್ವ ಭೀಮಪ್ಪ ಸಾರಾಪೂರ, ಲಕ್ಕವ್ವಾ ಲಕ್ಷ್ಮಣ ಬೆಳಗಲಿ, ಲಕ್ಷ್ಮಣ ಯಲ್ಲಪ್ಪ ಗಣಪ್ಪಗೋಳ, ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ, ಶಿವಲಿಂಗಪ್ಪ ವೆಂಕಪ್ಪ ಪೂಜೇರಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ರಾವುತನವರ ಅವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ