ಬಳ್ಳಾರಿ: ನಾಲ್ಕನೆಯ ಹಂತದ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಎಣ್ಣೆ ಆಯ್ತು ಈಗ ಜಗಿಯುವ ತಂಬಾಕು ಖರೀದಿಗೂ ಭಾರೀ ಪ್ರಮಾಣದ ಕ್ಯೂ ನಿಂತುಕೊಂಡು ಖರೀದಿಸಿದ್ದಾರೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಜಗಿಯುವ ತಂಬಾಕು ಉತ್ಪನ್ನಗಳಾದ ವಿಮಲ್, ಗುಟ್ಕಾ ಡೀಲರ್ ಅಂಗಡಿಗಳ ಮುಂದೆ ಇಂದು ನೂರಾರು ಮಂದಿ ನಿಂತಿದ್ದರು. ಬೆಳಗ್ಗೆ 5 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಜನರು ಗುಟ್ಕಾ ಖರೀದಿಸಿದ್ದಾರೆ.

ಒಬ್ಬರಿಗೆ 2 ಪಾಕೆಟ್ ಮಾತ್ರ ವಿತರಿಸಲಾಗುತ್ತಿದ್ದು, ಒಂದು ಪಾಕೆಟ್‍ಗೆ ರೂ. 125ರಂತೆ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಗುಟ್ಕಾ ಪ್ರಿಯರು ನೇರವಾಗಿ ಹೋಲ್‍ಸೇಲ್ ಡೀಲರ್ ಬಳಿಯೇ ಹೋಗಿ ಜಗಿಯುವ ತಂಬಾಕು ಖರೀದಿಸಿದ್ದಾರೆ.
ಲಾಕ್‍ಡೌನ್ ಬಳಿಕ ಗುಟ್ಕಾ, ತಂಬಾಕು ಉತ್ಪನ್ನಗಳ ಮಾರಾಟವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಡೀಲರ್ ಗಳು ಮಾರಾಟಕ್ಕೆ ಮುಂದಾಗಿದ್ದರು. ಸದ್ಯ ನಿಗದಿತ ದರದಲ್ಲಿ ಮಾರಾಟವಾಗುತ್ತಿದ್ದರೂ ಗ್ರಾಹಕರು ಸಾಮಾಜಿಕ ಅಂತರ, ಮುಂಜಾಗ್ರತಾ ಕ್ರಮಕೈಗೊಳ್ಳದೆ ಕ್ಯೂನಲ್ಲಿ ನಿಂತಿದ್ದರು.
https://youtu.be/BIlQOf4v1Co
 Laxmi News 24×7
Laxmi News 24×7
				 
		 
						
					 
						
					 
						
					