Breaking News

Yearly Archives: 2026

ಬೆಳಗಾವಿ: ಮಹಾರಾಷ್ಟ್ರದಿಂದ ನೀರು ಬಿಡುಗಡೆ ಪ್ರಯತ್ನ

ಬೆಳಗಾವಿ: ಬೇಸಿಗೆಯಲ್ಲಿ ಜನ, ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಂಟು ಟಿಎಂಸಿ ನೀರು ಬಿಡುಗಡೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಒಂದು ಟಿಎಂಸಿ ನೀರು ಬಿಟ್ಟರೆ ಅರ್ಧ ಸಮಸ್ಯೆ ಇತ್ಯರ್ಥವಾಗಲಿದೆ. ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ನೀರು …

Read More »

ಕಬ್ಬಿನ ಬಿಲ್ ಬಾಕಿಗಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಎದುರು ರೈತ ಪ್ರತಿಭಟನೆ

ಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆವರಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 79ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳು 4,700 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. ಬೆಳಗಾವಿ ಜಿಲ್ಲೆಯ 21 ಸಕ್ಕರೆ ಕಾರ್ಖಾನೆಗಳು 1,200 ಕೋಟಿ ರೂ. ಬಿಲ್ ಬಾಕಿ …

Read More »

ಕೆಎಲ್‌ಇ ಆಸ್ಪತ್ರೆಯಲ್ಲಿ ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಕಾರ್ಯಕ್ರಮ

ಬೆಳಗಾವಿ: ವ್ಯಕ್ತಿಯ ಹಿನ್ನೆಲೆಯನ್ನು ಗುರುತಿಸದೇ ಆತನ ಜೀವ ಉಳಿಸುವಲ್ಲಿ ಬೇಸಿಕ್ ಲೈಫ್ ಸಪೋರ್ಟ್‌ನ ಕೌಶಲ್ಯಗಳು ಅತ್ಯುಪಯುಕ್ತವಾಗಿವೆ ಎಂದು ಯುಎಸ್‌ಎಂಕೆಎಲ್‌ಇ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಹೇಳಿದರು.  ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೇಸಿಕ್ ಲೈಫ್ ಸಪೋರ್ಟ್  ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ವೈದ್ಯರು  ತರಬೇತಿಯನ್ನು ಮನನ ಮಾಡಿಕೊಂಡು ಸಕಾಲದಲ್ಲಿ ಉಪಯೋಗಿಸಿಕೊಂಡು ತೊಂದರೆಗೀಡಾದ ವ್ಯಕ್ತಿಯ ಜೀವ ಉಳಿಸುವಲ್ಲಿ …

Read More »

ಗೋಕಾಕ-ಧಾರವಾಡ ಹೆದ್ದಾರಿ ಮೇಲ್ದರ್ಜೆಗೆ 86.40 ಕೋಟಿ ರೂ. ಅನುದಾನ ಬಿಡುಗಡೆ ಮನವಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 80.33 ಕಿಮೀ ಉದ್ದದ ರಸ್ತೆ ಸುಧಾರಣೆಗೆ  ಕೇಂದ್ರ ಮೂಲಸೌಕರ್ಯ ರಸ್ತೆ ನಿಧಿ ಯೋಜನೆ ಅಡಿಯಲ್ಲಿ  86.40 ಕೋಟಿ ರೂ. ಅನುದಾನ ಬಿಡುಗಡೆ ಕೇಂದ್ರ ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರಿಗೆ  ಸಂಸದ ಜಗದೀಶ  ಶೆಟ್ಟರ ಮನವಿ ಸಲ್ಲಿಸಿದರು. ದೆಹಲಿಯ ಹೊಸ ಸಂಸದ ಭವನದಲ್ಲಿ ಗುರುವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಬೆಳಗಾವಿ ಲೋಕಸಭಾ ವ್ಯಾಪ್ತಿಯಡಿ ಕೈಗೊಳ್ಳಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು. …

Read More »

ಸಾಂಬ್ರಾ ಗ್ರಾಮದಲ್ಲಿ ನೂತನ ಬೀದಿ ದೀಪಗಳು ಹಾಗೂ “ಐ ಲವ್ ಸಾಂಬ್ರಾ” ನಾಮಫಲಕ ಉದ್ಘಾಟನೆ

ಬೆಳಗಾವಿ: ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆಯಾಗಿ ಸಾಂಬ್ರಾ ಗ್ರಾಮದಲ್ಲಿ ನೂತನವಾಗಿ ಅಳವಡಿಸಲಾಗಿರುವ ಬೀದಿ ದೀಪಗಳು ಹಾಗೂ “ಐ ಲವ್ ಸಾಂಬ್ರಾ” ಎನ್ನುವ ನಾಮಫಲಕವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ಸಂಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಗ್ರಾಮಗಳ ಅಭಿವೃದ್ಧಿಯೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದರು. ಸಾಂಬ್ರಾ …

Read More »

ಐಐಐಟಿಯಲ್ಲಿ ಜರುಗಿದ ಪ್ರದರ್ಶನದಲ್ಲಿ ಉತ್ತಮ ಸಾಧನೆ ಮಾಡಿದ ಎಸ್‌ಜಿಬಿಐಟಿ ವಿದ್ಯಾರ್ಥಿಗಳು

ಬೆಳಗಾವಿ: ಧಾರವಾಡದ ಐಐಐಟಿಯಲ್ಲಿ ಈಚೆಗೆ ಜರುಗಿದ ನೈನ್ 2.0 ಪದವಿ ಮತ್ತು ಯೋಜನಾ ಪ್ರದರ್ಶನದಲ್ಲಿ ನಗರದ  ಎಸ್‌ಜಿಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿ ಪ್ರದರ್ಶಿಸಿದ್ದ ಯೋಜನೆಗಳಿಗೆ ತಲಾ 2 ಲಕ್ಷ ರೂ. ಅನುದಾನದೊಂದಿಗೆ ಮೊದಲ ಮತ್ತು ದ್ವಿತೀಯ ಅತ್ಯುತ್ತಮ ಯೋಜನಾ ಪ್ರಶಸ್ತಿ ಲಭಿಸಿದೆ. ಈ ಪ್ರದರ್ಶನದಲ್ಲಿ ಎಸ್‌ಜಿಬಿಐಟಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಒಟ್ಟು 10 ಯೋಜನೆಗಳು ಮೌಲ್ಯಮಾಪನ ಸಮಿತಿ ಮತ್ತು ವಿದ್ಯಾರ್ಥಿಗಳಿಂದ ಹೆಚ್ಚಿನ ಮೆಚ್ಚುಗೆ ಪಡೆದವು. ಅದರಲ್ಲಿ ‘ಲಘು ಸಂಚಾರಕ್ಕಾಗಿ ಪ್ಲಾಸ್ಟಿಕ್ ಮತ್ತು ಮರಳನ್ನು …

Read More »

ಕಟ್ಟೀಮನಿ ಕಥೆ ಹೇಳೋಣ ಸ್ಪರ್ಧೆ ಸಂಪನ್ನ

ಬೆಳಗಾವಿ: ಹೇಳುವ, ಕೇಳುವ ಮತ್ತು ಬರೆಯುವ ಪರಂಪರೆಯಲ್ಲಿ ಆಧುನಿಕ ಕಾಲದ ಯುವ ಜನಾಂಗ ಸೇರಬೇಕು. ಸಂವಹನದ ಹೊಸ ಹೊಸ ಸಾಧ್ಯತೆಗಳನ್ನು ಮತ್ತು ಮಾರ್ಗಗಳನ್ನು ಕಂಡುಹಿಡಿಯುವ ಪ್ರಯತ್ನ ಮಾಡಬೇಕಿದೆ ಎಂದು ರಂಗತಜ್ಞ ಡಾ.ರಾಮಕೃಷ್ಣ ಮರಾಠೆ ಹೇಳಿದರು. ನಗರದ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಶುಕ್ರವಾರ ಪದವಿ ಮತ್ತು ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಟ್ಟೀಮನಿ ಕಥೆ ಹೇಳೋಣ ಎನ್ನುವ ಸ್ಪರ್ಧೆಯ ಅಂತಿಮ ಹಂತ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು …

Read More »

ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ – ಮಲತಂದೆ‌ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಹಣದಾಸೆಗೆ ಬಿದ್ದು‌ 15 ವರ್ಷದ ಮಗಳನ್ನು ತಾಯಿ ಹಾಗೂ ಮಲತಂದೆ ಸೇರಿ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ ಚಂದ್ರಾ ಲೇಔಟ್ ಪೊಲೀಸ್‌  ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಈ ಕರಾಳ ಕೃತ್ಯ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ, ಆಕೆಯ ಮಲತಂದೆ ಹಾಗೂ ಮತ್ತೋರ್ವ ಮಹಿಳೆ ವಾಣಿ ಎಂಬಾಕೆಯನ್ನ ಬಂಧಿಸಿದ್ದಾರೆ. ಬಂಧಿತ ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ …

Read More »

ಬೆಳಗಾವಿಯಲ್ಲಿ ಡಿಜೆ, ಲೌಡ್‌ಸ್ಪೀಕರ್ ಬಳಕೆಗೆ ಬ್ರೇಕ್: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಬೆಳಗಾವಿ ಜಿಲ್ಲೆಯಲ್ಲಿ ಇನ್ನು ಮುಂದೆ ಡಿಜೆ ಮತ್ತು ಮಿತಿಮೀರಿದ ಶಬ್ದದ ಸಾಧನಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಶಾಂತಿ, ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ ಹಬ್ಬ, ಮೆರವಣಿಗೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅತಿಯಾದ ಶಬ್ದವನ್ನು ಹೊರಸೂಸುವ ಡಿಜೆ ವ್ಯವಸ್ಥೆಗಳು ಮತ್ತು ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ತಕ್ಷಣದಿಂದ …

Read More »

ಪಿಕೆಪಿಎಸ್ ದಲ್ಲಿ ಸೇವೆ ಸಲ್ಲಿಸಿದ ಬಸಪ್ಪಾ ಶಿದ್ನಾಳ ನಿಧನ

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಹಿರಿಯರು ಶಿದ್ನಾಳ ಮನೆತನದ ಬಸಪ್ಪಾ ಬಾಳಪ್ಪ ಶಿದ್ನಾಳ ಶುಕ್ರವಾರ ನಿಧನರಾದರು. ಮೃತರು ಗ್ರಾಮದ ಮಡಿವಾಳೇಶ್ವರ ಪಿಕೆಪಿಎಸ್ ದಲ್ಲಿ 3ದಶಕಗಳ ಕಾಲ ಅವಿರತ ಸೇವೆ ಸಲ್ಲಿಸಿ ಗ್ರಾಮದ ರೈತರಿಗೆ ಉತ್ತಮ ಸೇವೆ ನೀಡಿ ಜನಮಾನಸದಲ್ಲಿ ಉಳಿದಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು ಗ್ರಾಮದ ಎಲ್ಲ ಕಾರ್ಯಗಳಲ್ಲಿ ತೊಡಗಿಕೊಂಡು ಮರಡಿ ಬಸವೇಶ್ವರ ದೇವಸ್ಥಾನದ ಟ್ರಸ್ಟಿಗಳಾಗಿ ಸೇವೆ ಸಲ್ಲಿಸಿದ ಇವರು ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಒರ್ವ ಮಗಳು …

Read More »