ಯರಗಟ್ಟಿ ಪಟ್ಟಣದ ಜನತೆಗೆ ಹಾಗೂ ವಿಶೇಷವಾಗಿ ವಿಜಯ ನಗರದ ನಿವಾಸಿಗಳಿಗೆ ಇಂದು ಸಂತಸದ ದಿನ. ಸನ್ 2024-25ನೇ ಸಾಲಿನ ಅಮೃತ-2.0 ಯೋಜನೆಯಡಿಯಲ್ಲಿ, ಯರಗಟ್ಟಿ ಪಟ್ಟಣದ ವಿಜಯ ನಗರದಲ್ಲಿ ಉದ್ಯಾನವನ (Park) ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಯೋಜನೆಯ ಮುಖ್ಯಾಂಶಗಳು: ✨ ಸ್ಥಳ: ವಿಜಯ ನಗರ, ಯರಗಟ್ಟಿ ಪಟ್ಟಣ. ✨ ಯೋಜನೆ: ಅಮೃತ-2.0 ಯೋಜನೆ (ಕರ್ನಾಟಕ ಸರ್ಕಾರ). ✨ ಉದ್ದೇಶ: ಸ್ಥಳೀಯ ನಿವಾಸಿಗಳಿಗೆ, …
Read More »Yearly Archives: 2026
ದಾವಣಗೆರೆ | ಯಾರಿಗೆ ಟಿಕೆಟ್ ಕೊಟ್ಟರೂ ಬಿಜೆಪಿ ಗೆಲ್ಲಿಸ್ತೇವೆ – ಐವರು ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟು ಪ್ರದರ್ಶನ
ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಿಸುತ್ತೇವೆ ಎಂದು ಐವರು ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಬಿಜೆಪಿಯ ಎರಡು ಬಣದ ನಾಯಕರು ಒಂದಾಗಿದ್ದಾರೆ. ಐವರು ಆಕಾಂಕ್ಷಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ, ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಅಜಯ್ ಕುಮಾರ್, ಯಶವಂತರಾವ್ ಜಾದವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ ಮತ್ತು ದೇವರಮನೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಯಾಗಿದ್ದರು. ಈ ವೇಳೆ ಯಾರಿಗೆ ಟಿಕೆಟ್ ಕೊಟ್ಟರು …
Read More »ಉಪಚುನಾವಣೆ ಹೊತ್ತಲ್ಲೇ ಬಾಗಲಕೋಟೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ
ಬಾಗಲಕೋಟೆ: ಉಪಚುನಾವಣೆ ಹೊತ್ತಲ್ಲೇ ಬಾಗಲಕೋಟೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಪಕ್ಷದ ಸಹ ವಕ್ತಾರ ಸ್ಥಾನಕ್ಕೆ ಪ್ರಸನ್ನ ಔರಸಂಗ ರಾಜೀನಾಮೆ ನೀಡುತ್ತಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ನಾನು ನನ್ನ ಬಿಜೆಪಿ ಸಹ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದನ್ಯವಾದಗಳು ಎಂದು ಪ್ರಸನ್ನ ಔರಸಂಗ ಪೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ನಲ್ಲಿ ಬಿಜೆಪಿ ಸಹ ವಕ್ತಾರನಾಗಿ ಆಯ್ಕೆ ಆದಾಗಿನ ಪತ್ರ ಹಾಕಿ ರಾಜೀನಾಮೆ ನೀಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇದು …
Read More »ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ
ನವದೆಹಲಿ: 4 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, ಪಾಂಡಿಚೇರಿಯಲ್ಲಿ ಏ.9 ರಂದು ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 23 ರಂದು ಮೊದಲ ಹಂತ, ಏಪ್ರಿಲ್ 29 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಐದು ರಾಜ್ಯಗಳ ಮತ ಎಣಿಕೆ ಮೇ 4 ರಂದು ನಡೆಯಲಿದೆ. ಪಶ್ಚಿಮ ಬಂಗಾಳ ಅಸ್ಸಾಂ ಕೇರಳ ತಮಿಳುನಾಡು ಹಾಗೂ …
Read More »ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಏ.9 ರಂದು ಉಪಚುನಾವಣೆ -ಮೇ 4ಕ್ಕೆ ಫಲಿತಾಂಶ
ನವದೆಹಲಿ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ) ವಿಧಾನಸಭೆಯ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಎರಡೂ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಚುನಾವಣೆ ನಡೆದರೆ ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇಂದು ದೆಹಲಿಯಲ್ಲಿ ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚ್ಚೇರಿ ವಿಧಾನಸಭಾ ಚುನಾವಣಾ ದಿನಾಂಕದ ಜೊತೆ ಗೋವಾ, ಗುಜರಾತ್, ಮಹಾರಾಷ್ಟ್ರ, ನಾಗಾಲ್ಯಾಂಡ್, ತ್ರಿಪುರ ಉಪಚುನಾವಣಾ ದಿನಾಂಕವನ್ನು ಪ್ರಕಟಿಸಿದರು. ಕಾಂಗ್ರೆಸ್ ಶಾಸಕ …
Read More »ವಿವಾಹಿತೆ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ
ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆಯಾಗಿರುವ ಘಟನೆ ಯಲಹಂಕದಲ್ಲಿ ನಡೆದಿದ್ದು, ಪತಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಶೃತಿ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿವಾಹಿತೆ. ಪತಿ ಪವನ್ ಕಲ್ಯಾಣ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪವನ್ ಕಲ್ಯಾಣ್ ಕುಟುಂಬದವರಿಂದ ನಿರಂತರ ವರದಕ್ಷಿಣೆ ಕಿರುಕುಳ ಆರೋಪವನ್ನು ಶೃತಿ ಕುಟುಂಬಸ್ಥರು ಹೊರಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಿನ್ನೆಲೆ ಶೃತಿ ಹಾಗೂ ಪತಿ ಕುಟುಂಬಸ್ಥರ ನಡುವೆ ಕಲಹ …
Read More »ಅಕ್ರಮ ಸಿಲಿಂಡರ್ ದಾಸ್ತಾನು 4 ಕೇಸ್ ದಾಖಲು
ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ನಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ ಎದುರಾಗಿದೆ. ಅಕ್ರಮ ಸಿಲಿಂಡರ್ ದಾಸ್ತಾನು, ಬ್ಲಾಕ್‌ನಲ್ಲಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಹಾವಳಿ ಹೆಚ್ಚಾಗುತ್ತಿದೆ. ಬೆಂಗಳೂರಲ್ಲಿ ಅಕ್ರಮ ಸಿಲಿಂಡರ್ ದಾಸ್ತಾನು ಮಾಡಿದ್ದಕ್ಕೆ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೀಣ್ಯ, RMC ಯಾರ್ಡ್, ಕೆಂಗೇರಿ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗಾಟಗಾರರು ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಮಾಡಿದ್ದರು. ಬೆಂಗಳೂರಲ್ಲಿ ಎಲ್‌ಪಿಜಿ ಅಭಾವದಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಹಲವೆಡೆ …
Read More »3.23 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಪೂಜೆ ನೆರವೇರಿಸಿ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುವೆಂಪು ನಗರದ ಕೆ.ಎಲ್.ಇ ಇಂಟರ್ನ್ಯಾಷನಲ್ ಸ್ಕೂಲ್ ನ ಮುಖ್ಯ ರಸ್ತೆ ಹಾಗೂ ಜಯನಗರದ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಸುಮಾರು 3.23 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಗಳು ನಿರ್ಮಾಣಗೊಳ್ಳಲಿವೆ. ನಿಗದಿತ ಸಮಯದಲ್ಲಿ, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು …
Read More »ನವೀಕೃತ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಉದ್ಗಾಟಿಸಿದ :ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಥಳೀಯ ಶಾಸಕ ಡಾ.ಅವಿನಾಶ ಜಾಧವ ಅವರೊಂದಿಗೆ ಅರಣ್ಯ ಇಲಾಖೆಯಿಂದ ಚಿಂಚೋಳಿ ಬಳಿಯ ಪೋಲಕಪಲ್ಲಿಯಲ್ಲಿ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಸಾಲು ಮರದ ತಿಮ್ಮಕ್ಕ ವೃಕ್ಷವನ ಇಂದು (ಶನಿವಾರ) ಉದ್ಘಾಟಿಸಿದರು. ನಂತರ ಅಧಿಕಾರಿಗಳೊಂದಿಗೆ ವನದಲ್ಲಿ ಒಂದು ಸುತ್ತು ಹಾಕಿ ವಿವಿಧ ಸಸ್ಯ ರಾಶಿಗಳನ್ನು ವೀಕ್ಷಿಸಿದರು. ಲೋಟಸ್ ಎಕೋ ಪಾಂಡ್ ಬಳಿ ಪೋಟೋ ಗೆ ಪೋಸ್ ನೀಡಿದರು. ಇದೇ …
Read More »ಎರಡು ದಿನಗಳ ಉಚಿತ ಶ್ರವಣ ಪರೀಕ್ಷಾ ಶಿಬಿರ
ಬೆಳಗಾವಿ: ಯುಗಾದಿ ಹಬ್ಬದ ಅಂಗವಾಗಿ ವಿಶ್ವ ಸ್ಪೀಚ್ ಆ್ಯಂಡ್ ಹಿಯರಿಂಗ್ ಎಯ್ಡ್ ಸೆಂಟರ್ ವತಿಯಿಂದ ಮಾ.15 ಮತ್ತು 16ರಂದು ಬೆಳಗ್ಗೆ 10.30ರಿಂದ ಸಂಜೆ 6.30ರ ವರೆಗೆ ನಗರದ ಛತ್ರಪತಿ ಶಿವಾಜಿ ರಸ್ತೆಯಲ್ಲಿರುವ ರೇಡಿಯೋ ಕಾಂಪ್ಲೆಕ್ಸ್‌ದಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಎಲ್ಲ ವಯೋಮಾನದವರಿಗೂ ಉಚಿತವಾಗಿ ಕಿವಿ ಕೇಳುವಿಕೆ (ಶ್ರವಣ) ಪರೀಕ್ಷೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಶ್ರವಣ ಸಮಸ್ಯೆಗಳು ಕಂಡು ಬರುತ್ತಿದೆ. ಮಕ್ಕಳಿಂದ ವಯೋವೃದ್ಧರ ತನಕ ಕಡಿಮೆ …
Read More »
Laxmi News 24×7