Breaking News

Yearly Archives: 2026

350ಕ್ಕೂ ಹೆಚ್ಚು ಯೋಧರು, ಈಗ ಮತ್ತೆ 9 ಯುವಕ-ಯುವತಿಯರು ಸೇನೆಗೆ ಆಯ್ಕೆ: ಇಲ್ಲಿ ಎ ಫಾರ್ ಅಂದ್ರೆ ಆರ್ಮಿ, ಅಪ್ಪಟ ಸೈನಿಕರ ಗ್ರಾಮ!

ಬೆಳಗಾವಿ: ಅದು ಕರ್ನಾಟಕದ ಕಟ್ಟ ಕಡೆಯ ಹಳ್ಳಿ. ಅತೀ ಹೆಚ್ಚು ಸೈನಿಕರನ್ನು ಭಾರತೀಯ ಸೇನೆಗೆ ಕೊಟ್ಟ ಹೆಗ್ಗಳಿಕೆ ಈ ಊರಿಗೆ ಸಲ್ಲುತ್ತದೆ. ಅಲ್ಲಿನ ಮಕ್ಕಳು ಎ ಫಾರ್ ಏನು ಅಂತಾ ಕೇಳಿದ್ರೆ ಆಪಲ್ ಅನ್ನೋದಿಲ್ಲ, ಬದಲಾಗಿ ಎ‌ ಫಾರ್ ಆರ್ಮಿ ಅಂತಾರೆ. ದೇಶಭಕ್ತಿ ಇಲ್ಲಿನ ಮನೆ ಮನಗಳಲ್ಲೂ ಮೇಳೈಸಿದ್ದು, ಏಕಕಾಲಕ್ಕೆ ಈ ಗ್ರಾಮದ 9 ಯುವಕ-ಯುವತಿಯರು ಸೇನೆಗೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಧಾರವಾಡದಲ್ಲಿ ಯಾರ ಮನೆ ಮೇಲೆ ಕಲ್ಲು …

Read More »

ಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ, ವೈದ್ಯ ಡಾ. ಕಾರ್ತಿಕ್ ಕೆ. ಶೆಟ್ಟಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗ ಹೊಸ ಕಳೆ ಬಂದಿದೆ. ಕಳೆದ ಕೆಲವು ದಿನಗಳಿಂದ ವೈದ್ಯರಿಲ್ಲದೆ ಸೊರಗಿದ್ದ ಆಸ್ಪತ್ರೆಗೆ ಈಗ ಸ್ಥಳೀಯರೇ ಆಗಿರುವ ಡಾ. ಕಾರ್ತಿಕ್ ಕೆ. ಶೆಟ್ಟಿ ಅವರು ವೈದ್ಯರಾಗಿ ಬಂದಿದ್ದಾರೆ. ಕಳಸದ ಖ್ಯಾತ ಉದ್ಯಮಿ ಕೃಷ್ಣ ಶೆಟ್ಟಿ ಅವರ ಪುತ್ರರಾದ ಕಾರ್ತಿಕ್, ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪೂರೈಸಿದ ಬಳಿಕ ದೊಡ್ಡ ನಗರಗಳಲ್ಲಿ ಕೈ ತುಂಬಾ ಸಂಬಳ ಬರುವ ಉದ್ಯೋಗ ಅವಕಾಶಗಳಿದ್ದರೂ ಅವೆಲ್ಲವನ್ನೂ ಬದಿಗೊತ್ತಿ …

Read More »

ನನ್ನ ಕೊನೆ ಉಸಿರಿರುವವರೆಗೂ ರಾಜ್ಯದ ಸೇವೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಇಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ನನ್ನ ಕೊನೆ ಉಸಿರಿರುವವರೆಗೂ ರಾಜ್ಯದ ಸೇವೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಟಿ.ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮೈಸೂರಿಗೆ ಬಂದಾಗಲೆಲ್ಲಾ ಜನರ ಭೇಟಿ ಮಾಡುವ ಪ್ರಯತ್ನ: ವರುಣಾ ಕ್ಷೇತ್ರವನ್ನು ಮೇಲ್ಮನೆ …

Read More »

ಯಡೂರ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಹಿನ್ನಲೆಯಲ್ಲಿ ಹರಿದು ಬಂದ ಭಕ್ತಸಾಗರ

ಯಡೂರ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಹಿನ್ನಲೆಯಲ್ಲಿ ಹರಿದು ಬಂದ ಭಕ್ತಸಾಗರ ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಶ್ರೀವೀರಭದ್ರೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತರು ಶ್ರೀವೀರಭದ್ರೇಶ್ವರ ದರ್ಶನ ಪಡೆದು ಪಾವನರಾದರು. ದಕ್ಷಿಣದ ಕಾಶೀಯಂದೆ ಪ್ರಸಿದ್ದಿಯನ್ನು ಪಡೆದಿರುವ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀವೀರಭದ್ರೇಶ್ಚರ ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ಕರ್ನಾಟಕ, ಮಹಾರಾಷ್ಟ್ರದ, ಆಂಧ್ರಪ್ರದೇಶದ ಸೇರಿದಂತೆ ವಿವಿಧ ಭಾಗಗಳಿಂದ ಬಂದಂತಹ ಭಕ್ತರು ಸಾಲಿನಲ್ಲಿ ನಿಂತು ಶಾಂತಿಯುತವಾಗಿ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ದರ್ಶನ ಪಡೆದು …

Read More »

ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶ

ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶ ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಸರ್ಕಾರ ಕೂಡಲೇ ಕೈ ಬಿಡಲು ಒತ್ತಾಯ ಮ್ಯಾಗ್ನೆಟ್ ಶಾಲೆಯಿಂದ ಬಡವರು ಶಿಕ್ಷಣದ ಹಕ್ಕಿನಿಂದ ವಂಚಿತ ಕೂಡಲೇ ಸರ್ಕಾರ ಈ ನಿರ್ಣಯ ಕೈ ಬಿಡಲಿ ಇಲ್ಲದಿದ್ದರೇ, ಉಗ್ರ ಹೋರಾಟ ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶ ಕನ್ನಡ ಶಾಲೆಗಳ ವಿಲೀನಿಕರಣಕ್ಕೆ ಮುಂದಾದ ಕರ್ನಾಟಕ ಸರ್ಕಾರ ನೀತಿಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶವನ್ನು …

Read More »

ಶ್ರೀಶೈಲ್ ಜಗದ್ಗುರುಗಳ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವೆ :ಎಂಎಲ್ಸಿ ಪ್ರಕಾಶ ಹುಕ್ಕೇರಿ

ಚಿಕ್ಕೋಡಿ: ಶ್ರೀಶೈಲ್ ಜಗದ್ಗುರು ಡಾ!ಚನ್ನಸಿಧ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿಯವರಿಂದ ಯಡೂರ ಕ್ಷೇತ್ರ ಹಾಗೂ ಶ್ರೀವೀರಭದ್ರೇಶ್ವರ ದೇವಸ್ಥಾನ,ಶ್ರೀಮಠವು ಸಾಕಷ್ಟು ಅಭಿವೃದ್ಧಿ ಹೊಂದಿದೆ.ನಾನು ಹಾಗೂ ಶಾಸಕ ಗಣೇಶ ಹುಕ್ಕೇರಿ ಸೇರಿಕೊಂಡು ಯಡೂರ ಕ್ಷೇತ್ರ ದೇವಸ್ಥಾನದ ಅಭಿವೃದ್ಧಿಗೆ ಶ್ರೀಶೈಲ್ ಜಗದ್ಗುರಗಳಿಗೆ ಕೈಜೋಡಿಸುತ್ತೇವೆ ಎಂದು ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಡೂರ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಾರ್ಚ ತಿಂಗಳಲ್ಲಿ ಯಡೂರ ಕ್ಷೇತ್ರದಲ್ಲಿ ನಡೆಯುವ ಕೃಷ್ಣಾರತಿ,ಕುಂಭಾಷೇಕ,ಲಕ್ಷದೀಪೋತ್ಸವ …

Read More »

ನಂದಗಡ ಕಾರ್ಯಕ್ರಮ: ಸಿದ್ಧತೆ ಪರಿಶೀಲಿಸಿದ ಚನ್ನರಾಜ ಹಟ್ಟಿಹೊಳಿ

ನಂದಗಡ ಕಾರ್ಯಕ್ರಮ: ಸಿದ್ಧತೆ ಪರಿಶೀಲಿಸಿದ ಚನ್ನರಾಜ ಹಟ್ಟಿಹೊಳಿ ಬಂದವರಿಗೆಲ್ಲ ಭೋಜನದ ವ್ಯವಸ್ಥೆ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಂದಗಡ : ನಂದಗಡದಲ್ಲಿ ಸೋಮವಾರ ನಡೆಯಲಿರುವ ವೀರಭೂಮಿ ಲೋಕಾರ್ಪಣೆ ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಪರಿಶೀಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಧ್ಯಾಹ್ನ 12 ಗಂಟೆಗೆ ವೀರಭೂಮಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕನಕ ಗುರುಪೀಠದ ಡಾ.ನಿರಂಜನಾನಂದ ಪುರಿ ಮಹಾಸ್ವಾಮಿಗಳು …

Read More »

ಸಕ್ಕರೆ ಸಾಗಣೆಯಲ್ಲಿ ವಂಚಿಸಿದ್ದ ಆರೋಪಿಗಳ ಬಂಧನ; 11.50 ಲಕ್ಷ ಮೌಲ್ಯದ ವಸ್ತು ವಶ ನಿರಾಣಿ ಕಾರ್ಖಾನೆ ಸಕ್ಕರೆ ಮಾರಾಟ ಮಾಡಿ ವಂಚನೆ

ಸಕ್ಕರೆ ಸಾಗಣೆಯಲ್ಲಿ ವಂಚಿಸಿದ್ದ ಆರೋಪಿಗಳ ಬಂಧನ; 11.50 ಲಕ್ಷ ಮೌಲ್ಯದ ವಸ್ತು ವಶ ನಿರಾಣಿ ಕಾರ್ಖಾನೆ ಸಕ್ಕರೆ ಮಾರಾಟ ಮಾಡಿ ವಂಚನೆ ಮುಧೋಳ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಯಶಸ್ಸು ಬಾಗಲಕೋಟೆ ಜಿಲ್ಲೆಯ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಗುಜರಾತ್‌ನ ಅಹಮದಾಬಾದ್‌ಗೆ ಸಾಗಿಸಬೇಕಿದ್ದ ಸಕ್ಕರೆಯನ್ನು ಹಾದಿ ಮಧ್ಯದಲ್ಲೇ ಮಾರಾಟ ಮಾಡಿ ವಂಚಿಸಿದ್ದ ಪ್ರಕರಣವನ್ನು ಮುಧೋಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ 9 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ …

Read More »

ಐನಾಪುರದ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಟಗರು ಕಾದಾಟ ನೆರವೇರಿತು ಇದರಲ್ಲಿ ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಅಜ್ಜಪ್ಪ ಸನದಿ ಇವರ ಟಗರು ಪ್ರಥಮ ಸ್ಥಾನ ಪಡೆದುಕೊಂಡಿತು.

ಐನಾಪುರದ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಟಗರು ಕಾದಾಟ ನೆರವೇರಿತು ಇದರಲ್ಲಿ ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಅಜ್ಜಪ್ಪ ಸನದಿ ಇವರ ಟಗರು ಪ್ರಥಮ ಸ್ಥಾನ ಪಡೆದುಕೊಂಡಿತು. ಶನಿವಾರ ಸಂಜೆ ಐನಾಪುರದಲ್ಲಿ ಟಗರು ಕಾದಾಟದ ದ್ವಿತೀಯ ಸ್ಥಾನ ಸಿದ್ದಪ್ಪ ತೆಲಿ, ಅಜ್ಜಪ್ಪಾ ನೀಲಜಗಿ, ಈ ಸ್ಪರ್ಧೆಗಳು ಲಕ್ಷ್ಮೀದೇವಿ ಬ್ಯಾಕೋಡ ಮುಖಾಂತರ ಆರು ಟಗರುಗಳು ಕಾದಾಟದಲ್ಲಿ ಸ್ಪರ್ಧಿಸಿದವು. ಸಮಾರಂಭದ ಭಾವನ ಸಾನಿಧ್ಯ ಶ್ರೀ ಅಭಿನವ ಶ್ರೀ ನಾಗಲಿಂಗ ಮಹಾಸ್ವಾಮಿಜಿ ಶ್ರೀ …

Read More »

ಶಹಾಪುರದಲ್ಲಿ ಶ್ರೀ ದುರ್ಗಾದೇವಿ- ಶ್ರೀ ಮಾತಂಗಿದೇವಿ ಜಾತ್ರಾ ಮಹೋತ್ಸವದ ಸಂಭ್ರಮ: ಪಲ್ಲಕ್ಕಿ ಮೆರವಣಿಗೆಗೆ ಭಕ್ತರ ಸಾಗ

ಶಹಾಪುರದಲ್ಲಿ ಶ್ರೀ ದುರ್ಗಾದೇವಿ- ಶ್ರೀ ಮಾತಂಗಿದೇವಿ ಜಾತ್ರಾ ಮಹೋತ್ಸವದ ಸಂಭ್ರಮ: ಪಲ್ಲಕ್ಕಿ ಮೆರವಣಿಗೆಗೆ ಭಕ್ತರ ಸಾಗರ ಬೆಳಗಾವಿ ನಗರದ ಶಹಾಪುರದ ಗಾಡೆ ಮಾರ್ಗದಲ್ಲಿರುವ ಸಿದ್ಧಾರ್ಥ ಕಾಲನಿಯಲ್ಲಿ ಶ್ರೀ ದುರ್ಗಾದೇವಿ ಮಾತಂಗಿ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಆರಂಭಗೊಂಡಿದೆ. ಜಾತ್ರೆಯ ಅಂಗವಾಗಿ ಶನಿವಾರದಂದು ದೇವಿಯ ಭವ್ಯ ಪಲ್ಲಕ್ಕಿ ಮೆರವಣಿಗೆಯು ಸಡಗರದಿಂದ ಜರುಗಿತು. ನೂರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಂಡಾರ ಹಾರಿಸುವ ಮೂಲಕ ಭಕ್ತಿ ಸಮರ್ಪಿಸಿದರು. …

Read More »