Breaking News

Daily Archives: ಜನವರಿ 9, 2026

ಬಜೆಟ್‌ವರೆಗೆ ನಾಯಕತ್ವ ಬದಲಾವಣೆ ಆಗುವುದಿಲ್ಲ: ಕೆ.ಎನ್.ರಾಜಣ್ಣ

ಬೆಂಗಳೂರು: ಬಜೆಟ್‌ವರೆಗೆ ಏನೂ‌ ಆಗುವುದಿಲ್ಲ. ಅಲ್ಲಿವರೆಗೆ ಏನೂ ಮಾತನಾಡೋಕೆ‌ ಹೋಗಬೇಡಿ. ಮಾರ್ಚ್ 31ರ ವರೆಗೆ ಕಲ್ಪನೆಗಳು ಬೇಡ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.‌ ಬೆಂಗಳೂರಲ್ಲಿಂದು ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.‌ ಬಜೆಟ್‌ವರೆಗೆ ಏನೂ‌ ಆಗದು. ಅಲ್ಲಿಯವರೆಗೆ ಏನೂ ಮಾತನಾಡೋಕೆ‌ ಹೋಗಬೇಡಿ. ಮಾರ್ಚ್ 31ರ ವರೆಗೆ ಕಲ್ಪನೆ ಬೇಡ. ಸಿದ್ದರಾಮಯ್ಯನವರು ಈಗಲೂ ಇರಬೇಕು, 2028ಕ್ಕೂ ಇರಬೇಕು ಅಂತ ಹೇಳಿದ್ದೇನೆ. ಅದರ ಬಗ್ಗೆ ಯಾಕೆ ನೀವು ಹೇಳಲ್ಲ ಎಂದರು. ಸಿಎಂ …

Read More »

ಬೆಳಗಾವಿ ಅಧಿವೇಶನದ ವೇಳೆ ಪ್ರತಿ ಗಂಟೆಗೆ 24 ಲಕ್ಷ ರೂ. ಪೋಲು; ಅಭಿವೃದ್ಧಿ ಶೂನ್ಯ ಎಂದ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ್

ಬೆಳಗಾವಿ ಅಧಿವೇಶನದ ವೇಳೆ ಪ್ರತಿ ಗಂಟೆಗೆ 24 ಲಕ್ಷ ರೂ. ಪೋಲು; ಅಭಿವೃದ್ಧಿ ಶೂನ್ಯ ಎಂದ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ್ • ಅಧಿವೇಶನಕ್ಕೆ 28 ಕೋಟಿ ರೂಪಾಯಿ ಪೋಲು! • ಗಂಟೆಗೆ 24 ಲಕ್ಷ ರೂ. ಖರ್ಚು! • ಅಭಿವೃದ್ಧಿ ಚರ್ಚೆ ಶೂನ್ಯ; ಭೀಮಪ್ಪ ಗಡಾದ್ ಕಿಡಿ! • ತೆರಿಗೆ ಹಣ ಹೋಟೆಲ್ ಮಾಲೀಕರ ಪಾಲು! ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಳೆದ ಡಿಸೆಂಬರ್ 9 ರಿಂದ 19 ರವರೆಗೆ …

Read More »

ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಚಿಕ್ಕೋಡಿಯಲ್ಲಿ ಅದ್ದೂರಿಯ ಸ್ವಾಗತ

ಚಿಕ್ಕೋಡಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ಚಿಕ್ಕೋಡಿಗೆ ಆಗಮಿಸಿದ ವೀರ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ನಿಪ್ಪಾಣಿಯಿಂದ ಆಗಮಿಸಿದ ಜ್ಯೋತಿಯನ್ನು ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ,ತಹಶೀಲ್ದಾರ ರಾಜೇಶ ಬುರ್ಲಿ,ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ,ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಸೇರಿದಂತೆ ವಿವಿಧ ಗಣ್ಯರು ಜ್ಯೋತಿಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.ವೀರಜ್ಯೋತಿಯು ಬಸ್ ನಿಲ್ದಾಣದ ಮೂಲಕ ಕೆಸಿ ರಸ್ತೆ,ಗುರವಾರ ಪೇಠ ಮೂಲಕ ಅಂಕಲಿ ಕೂಟದವರೆಗೂ ಹೋಗಿ ಸಂಪನ್ನಗೊಂಡಿತ್ತು. ಇದೇ ಸಂದರ್ಭದಲ್ಲಿ ಲಕ್ಷ್ಮಣರಾವ ಚಿಂಗಳೆ ಮಾತನಾಡಿ ಸಂಗೊಳ್ಳಿ ರಾಯಣ್ಣ ಒಂದು ಜಾತಿ,ಧರ್ಮ,ಸಂಘಟನೆಗೆ,ರಾಜ್ಯಕ್ಕೆಸೀಮಿತವಾದ …

Read More »

ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ

ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಜಿಲ್ಲಾ ಪ್ರವಾಸ ಕೈಗೊಂಡರು. ಈ ವೇಳೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಜೊತೆಗೆ ವೀರರಾಣಿ ಕಿತ್ತೂರ ಚೆನ್ನಮ್ಮರ ಅತಿ ಎತ್ತರದ ಮೂರ್ತಿ ಯನ್ನು …

Read More »

ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಶುಕ್ರವಾರದಂದು ಉದ್ಘಾಟಿಸಿದರು.

ಘಟಪ್ರಭಾ:ಗೋಕಾಕ ಮತಕ್ಷೇತ್ರದ ಶಾಸಕರು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಮೇಶಅಣ್ಣಾ ಜಾರಕಿಹೊಳಿರವರ ಆಪ್ತ ಸಹಾಯಕರಾದ ಶ್ರೀ ಸುರೇಶ ಸನದಿ ಅವರು ಘಟಪ್ರಭಾ ಪಟ್ಟಣಕ್ಕೆ ಆಗಮಿಸಿ ಪುರಸಭೆಯ ಮಲ್ಲಾಪೂರ ಪಿಜಿ ತರಕಾರಿ ಮಾರುಕಟ್ಟೆಯಲ್ಲಿ ನೂತನ ನಿರ್ಮಾಣ ಗೊಂಡ ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಶುಕ್ರವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಎಮ್ ಎಸ್ ಪಾಟೀಲ,ಹಿರಿಯ ಮುಖಂಡರಾದ ಡಿ ಎಮ್ ದಳವಾಯಿ,ಸುದೀರ ಜೋಡಟ್ಟಿ,ರಮೇಶ ತುಕ್ಕಾನಟ್ಟಿ,ಕಲ್ಲಪ್ಪ ಕೊಂಕಣಿ,ಕೆಂಪಣ್ಣ …

Read More »

ಇನಾಮದಾರ ಸಕ್ಕರೆ ಕಾರ್ಖಾನೆ ದುರಂತ: ಮೃತ ಕಾರ್ಮಿಕರ ಸಂಖ್ಯೆ 8ಕ್ಕೆ ಏರಿಕೆ; ಓರ್ವ ಕಾರ್ಮಿಕನ ಪತ್ನಿ ತುಂಬು ಗರ್ಭಿಣಿ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇನಾಮದಾರ ಸಕ್ಕರೆ ಕಾರ್ಖಾನೆ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಕಾರ್ಮಿಕ ರಾಘವೇಂದ್ರ ಮಲ್ಲಪ್ಪ ಗಿರಿಯಾಳ್​ (36) ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಮೃತ ಕಾರ್ಮಿಕರ ಸಂಖ್ಯೆ 8ಕ್ಕೆ ಏರಿದೆ. ಕಾರ್ಖಾನೆಯ ನಂಬರ್​​ 1ರ ಕಂಪಾರ್ಟ್‌ಮೆಂಟ್​ನಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ವಾಲ್ ರಿಪೇರಿ ಮಾಡುವಾಗ ಸ್ಫೋಟವಾಗಿತ್ತು. ಬಾಯ್ಲರ್​ನಲ್ಲಿದ್ದ ಬಿಸಿ ಮಳ್ಳಿ (ಪದಾರ್ಥ) ಕಾರ್ಮಿಕರ ಮೈಮೇಲೆ ಬಿದ್ದು 8 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಕ್ಷಣ ಗಾಯಾಳುಗಳನ್ನು ಕೆಎಲ್ಇ ಆಸ್ಪತ್ರೆ …

Read More »

ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್​ಪೀರಿಯನ್ಸ್ ಅಲ್ಲ: ಡಿಕೆಶಿಗೆ ಕೇಂದ್ರ ಸಚಿವ ಹೆಚ್​ಡಿಕೆ ತಿರುಗೇಟು

ಬೆಂಗಳೂರು: ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್​ಪೀರಿಯನ್ಸ್ ಅಲ್ಲ ಎಂದು ಡಿಸಿಎಂ ಡಿಕೆಶಿ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ನಮ್ಮ ವಿಲೀನದ ಚಿಂತೆ ಪಕ್ಕಕ್ಕೆ ಇಡಿ. ನನ್ನ ಮತ್ತು ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ. ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ, ಅಲ್ಪ ಅವಧಿಗೆ ಪ್ರತಿಪಕ್ಷ …

Read More »

ರಾಷ್ಟ್ರಮಟ್ಟದ ಜೂಡೋ ಸ್ಪರ್ಧೆಯಲ್ಲಿ ಬೆಳಗಾವಿಯ ಕಾವೇರಿ ಸೂರ್ಯವಂಶಿಗೆ ಕಂಚಿನ ಪದಕ

ರಾಷ್ಟ್ರಮಟ್ಟದ ಜೂಡೋ ಸ್ಪರ್ಧೆಯಲ್ಲಿ ಬೆಳಗಾವಿಯ ಕಾವೇರಿ ಸೂರ್ಯವಂಶಿಗೆ ಕಂಚಿನ ಪದಕ ಪಂಜಾಬ್‌ನ ಲೂಧಿಯಾನದಲ್ಲಿ ನಡೆಯುತ್ತಿರುವ 69ನೇ ರಾಷ್ಟ್ರಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಬೆಳಗಾವಿ ಡಿವೈಇಎಸ್ (DYES) ಕ್ರೀಡಾ ವಸತಿ ನಿಲಯದ 12 ವರ್ಷದ ವಿದ್ಯಾರ್ಥಿನಿ ಕಾವೇರಿ ಸೂರ್ಯವಂಶಿ ಜುಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದಾಳೆ. 32 ಕೆಜಿ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕಾವೇರಿ, ಆರಂಭಿಕ ಹಂತದ ಪಂದ್ಯಗಳಲ್ಲಿ ತೆಲಂಗಾಣ ಹಾಗೂ ಜಮ್ಮು-ಕಾಶ್ಮೀರದ ಸ್ಪರ್ಧಿಗಳನ್ನು ‘ಇಪ್ಪೋನ್’ ತಂತ್ರದ ಮೂಲಕ ಸೋಲಿಸಿ ಪ್ರಾಬಲ್ಯ …

Read More »

‘ಬಿ’ ಖಾತಾ ನಿವೇಶನ, ಕಟ್ಟಡಗಳಿಗೆ ‘ಎ’ ಖಾತಾ ಭಾಗ್ಯ: ಯಾರಿಗೆಲ್ಲ ಪ್ರಯೋಜನ, ಷರತ್ತುಗಳೇನು?

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ನಿವಾಸಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.‌ ‘ಬಿ’ ಖಾತಾ ನಿವೇಶನ, ಕಟ್ಟಡ, ಫ್ಲಾಟ್​​ಗಳಿಗೆ ‘ಎ-ಖಾತಾ’ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆ ಮೂಲಕ ಅಕ್ರಮ ಸಕ್ರಮಕ್ಕೆ ಮುಂದಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ರಚಿಸಿರುವ ಬಡಾವಣೆಗಳಲ್ಲಿನ ‘ಬಿ-ಖಾತಾ’ ನಿವೇಶನ/ಕಟ್ಟಡ/ ಅಪಾರ್ಟ್‌ಮೆಂಟ್/ಫ್ಲಾಟ್‌ಗಳಿಗೆ ಜಿಬಿಎ ಮಾದರಿಯಲ್ಲೇ ಎ ಖಾತಾ ನೀಡಲು ತೀರ್ಮಾನಿಸಲಾಗಿದೆ. ಯಾರಿಗೆ ಪ್ರಯೋಜನ?: ರಾಜ್ಯದ ನಗರ …

Read More »

ಗಂಗಾವತಿ – ವಿನೂತನ ಪ್ರಯೋಗ: ಶಾಲಾ ಮಕ್ಕಳಿಂದ ಚುಕುಬುಕು ರೈಲಿನಲ್ಲಿ ಗದಗ ಜಿಲ್ಲಾ ಪ್ರವಾಸ

ಗಂಗಾವತಿ, ಕೊಪ್ಪಳ: ಶಾಲಾ ಮಕ್ಕಳ ಪ್ರವಾಸ ಎಂದರೆ ಸಹಜವಾಗಿ ಆಯಾ ಶಾಲಾ ಆಡಳಿತ ಮಂಡಳಿಯವರು ಮಕ್ಕಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಪ್ರತ್ಯೇಕ ವಾಹನಗಳನ್ನು ಇಲ್ಲವೇ ಸಾರಿಗೆ ಇಲಾಖೆ ವಾಹನಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ನಗರದ ಶಾಲೆಯೊಂದು ತನ್ನ ತನ್ನ ಸಂಸ್ಥೆಯಲ್ಲಿ ಓದುತ್ತಿರುವ ನೂರಾರು ಮಕ್ಕಳನ್ನು ರೈಲಿನಲ್ಲಿಯೇ ಕರೆದೊಯ್ದು ಗದಗ ಜಿಲ್ಲಾ ಪ್ರವಾಸ ಮಾಡಿಸಿಕೊಂಡು ಬರುವ ಮೂಲಕ ಹೊಸದೊಂದು ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದೆ. ಜಯನಗರದ ಬೈಪಾಸ್ ರಸ್ತೆಯಲ್ಲಿರುವ ಮಹಾನ್ ಕಿಡ್ಸ್ ಶಾಲೆಯ …

Read More »