ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ಮಲ್ಲಾಪುರ ಎಸ್ ಎ ಗ್ರಾಮದ ಶ್ರೀ ಲಕ್ಷ್ಮೀದೇವಿ ಮಂದಿರದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ …
Read More »Yearly Archives: 2025
ಬೆಳಗಾವಿ ನಗರದಲ್ಲಿ 2 ದಿನಗಳಕಾಲ ಆದ ನೀರಿನ ವ್ಯತ್ಯೆಯ ಸರಿಪಡಿಸಿದ ಮಹಾನಗರ ಪಾಲಿಕೆ
ಬೆಳಗಾವಿ: ಹೆಸ್ಕಾಂ ಮೇಲಿಂದ ಮೇಲೆ ಶಟ್ ಡೌನ್ ಆಗುವ ಕಾರಣದಿಂದ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯೆಯ ಉಂಟಾಗುವುದರಿಂದ ಹಿಡ್ಕಲ್ ನಿಂದ ಬೆಳಗಾವಿ ನಗರಕ್ಕೆ ಸರಬರಾಜು ಆಗುವ ಸುಮಾರು 20 ವರ್ಷಗಳ ಹಳೆಯ ಕಚ್ಚಾ ನೀರಿನ ಕೊಳವೆಯ ಮೇಲೆ ಒತ್ತಡ ಉಂಟಾಗಿ ಅಂಕಲಗಿ ಹತ್ತಿರ ಇರುವ ಸ್ಕೂರ ವಾಲ್ವ್ ಒಡೆದು ಹೋಗಿರುವುದೂರಿಂದ, ಬೆಳಗಾವಿ ನಗರಕ್ಕೆ 2 ದಿನಗಳವರೆಗೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯೆಯ ಉಂಟಾಗಿದ್ದು, ಸದರಿ ತುರ್ತು ದುರಸ್ಥಿ ಕಾರ್ಯವು 24 ಘಂಟೆಯಲ್ಲಿ …
Read More »ಮಕ್ಕಳ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚನೆ.
ಬೆಂಗಳೂರು: 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚಿಸಿದೆ. ತಂದೆ ತಾಯಿಯ ಗುರುತು ಧೃಡಪಟ್ಟ ನಂತರ ಹೆಸರು ಬದಲಾವಣೆ ಮಾಡಬಹುದಾಗಿದೆ. ಆದರೆ ಹೊಸ ಹೆಸರಿನೊಂದಿಗೆ, ಹಳೆಯ ಹೆಸರೂ ದಾಖಲೆಯಲ್ಲಿರಬೇಕು. ಇದರಿಂದ ದುರುದ್ದೇಶದ ಹೆಸರು ಬದಲಾವಣೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ. ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಅದ್ರಿತ್ ಭಟ್ ಹೆಸರನ್ನು …
Read More »ಭಾರತೀಯ ಪಾರಂಪರಿಕ ಜ್ಞಾನದ ಜೊತೆಗೆ ವಿಜ್ಞಾನ ಸಮನ್ವಯಗೊಳ್ಳಲಿ : ಪ್ರೊ. ವೆಂಕಪ್ಪಯ್ಯ ದೇಸಾಯಿ
ಹಳೆಯ ಬೇರನ್ನು ಹೊಂದಿರುವ ವಿಶಾಲವಾದ ಮರದ ಚಿಗುರು ಸೊಗಸಾಗಿರುವಂತೆ ಭಾರತೀಯ ಪುರಾತನ ಜ್ಞಾನ ಪರಂಪರೆಯೊಂದಿಗೆ ಆಧುನಿಕ ವಿಜ್ಞಾನ ಸಮನ್ವಯಗೊಂಡರೆ ಮಾಲಿನ್ಯ ರಹಿತ ಹಾಗು ಸುಸ್ಥಿರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗುತ್ತದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ನಾಗನೂರು ರುದ್ರಾಕ್ಷಿ ಮಠ, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಟ್ರಾನ್ಸ್ ಡಿಸಿಪ್ಲೆನೆರಿ ಲರ್ನಿಂಗ್ ಸಲ್ಯೂಷನ್ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಸ್ಟೀಮ್ ಹೆಚ್ ತರಬೇತಿ …
Read More »ಪೀರಣವಾಡಿಯ ಅನಧಿಕೃತ ಲೇಔಟ ತೆರುವುಗೊಳಿಸಿದ ಬುಡಾ.
ಬೆಳಗಾವಿ: ಪೀರಣವಾಡಿಯಲ್ಲಿ ತಲೆ ಎತ್ತುತ್ತಿದ್ದ ಅನಧಿಕೃತ ಲೇಔಟನ್ನು ಬುಡಾ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ತೆರುವುಗೊಳಿಸಿದರು. ಬೆಳಗಾವಿಯ ಪೀರಣವಾಡಿಯಲ್ಲಿ ಸರ್ವೆ ನಂ 38 ಮತ್ತು 113 ರಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಾಣಗೊಂಡಿತ್ತು. ಇದನ್ನರಿತ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಆಯುಕ್ತರಾದ ಶಕೀಲ್ ಅಹ್ಮದ್, ಅಧಿಕಾರಿಗಳಾದ ಬಿ.ವ್ಹಿ. ಹಿರೇಮಠ, ಎಸ್.ಸಿ. ನಾಯ್ಕ್, ಶಿವಕುಮಾರ್, ಹನೀಫ್ ಅಥನಿ, ಬಾಳಿಗಡ್ಡಿ , ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅನಧಿಕೃತ ಲೇಔಟನ್ನು ತೆರುವುಗೊಳಿಸಿದರು.
Read More »ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಬಲಿದಾನ ಎಂದಿಗೂ ಅಮರ; ಸಿ.ಎ.ಪಿ.ಎಫ್ ಡೆಪ್ಯೂಟಿ ಕಮಾಂಡೆಂಟ್ ಮನೀಷ್ ಕುಮಾರ್
ಬೆಳಗಾವಿ: ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರು ಎಂದಿಗೂ ಅಮರ. ಅವರ ಕುಟುಂಬಸ್ಥರೊಂದಿಗೆ ತಾವು ಸದಾ ಜೊತೆಯಾಗಿದ್ದೇವೆ ಎಂದು ಸಿ.ಎ.ಪಿ.ಎಫ್ ಡೆಪ್ಯೂಟಿ ಕಮಾಂಡೆಂಟ್ ಮನೀಷ್ ಕುಮಾರ್ ತಿಳಿಸಿದರು. ಇಂದು ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಎಕ್ಸ್ ಸಿ.ಎ.ಪಿ.ಎಫ್ ವೆಲಫರ ಅಸೋಸಿಯೇಷನನ ವತಿಯಿಂದ ಬೆಳಗಾವಿಯಲ್ಲಿ ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾರ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಸೈನಿಕರ ಸಂಘಟನೆಯ ಅಧ್ಯಕ್ಷರಾದ ಡಾ. ರವಿ ಪಾಟೀಲ್, ಸಾಮಾಜೀಕ ಕಾರ್ಯಕರ್ತ ಸುಭಾಷ್ ಪಾಟೀಲ್, ಮುರುಘೇಂದ್ರಗೌಡ …
Read More »ಗರಗ ಜಾತ್ರೆಯ ಪ್ರಯುಕ್ತ ಫೆ.14-18 ವರೆಗೆ ಮಧ್ಯ ಮಾರಾಟ, ಸಾಗಟಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ದಿವ್ಯಪ್ರಭು
ಧಾರವಾಡ: ಇದೇ ಫೆ.14 ರಿಂದ 18ವರೆಗೆ ಜರುಗಲಿರುವ ಗರಗ ಜಾತ್ರೆಯ ಪ್ರಯುಕ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಅಬಕಾರಿ ಕಾಯ್ದೆ, 1965 ರ ಕಲಂ 21(1)ರ ಪ್ರದತ್ತವಾದ ಅಧಿಕಾರದ ಮೇರೆಗೆ, ಗರಗ ಸೇರಿ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಮಧ್ಯ ಮಾರಾಟ ಜೆತೆಗೆ ಸಾಗಟಕ್ಕೆ ನಿರ್ಬಂಧ ಹಾಕಿ ಜಿಲ್ಲಾಧಿಕಾರಿ ದಿವ್ಯಪ್ರಭುರವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಇಂದು ಪ್ರಕಟಣೆ …
Read More »ಕುಂಕುಮಾರ್ಚನೆಯು ಧರ್ಮ ಪಾಲನೆಯ ಒಂದು ಭಾಗ:ಅಲ್ಕಾತಾಯಿ ಇನಾಮದಾರ
ಚಿಕ್ಕೋಡಿ: ಧರ್ಮ ಅಂದರೆ ಕರ್ತವ್ಯ. ಧರ್ಮದ ಪರಂಪರೆಯನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕು ಹಾಗೂ ಕುಂಕುಮಾರ್ಚಣೆಯು ಧರ್ಮ ಪಾಲನೆಯ ಒಂದು ಭಾಗವಾಗಿದೆ ಎಂದು ರಾಷ್ಟ್ರೀಯ ಸೇವಿಕಾ ಸಮಿತಿಯ ಸಹ ಕಾರ್ಯವಾಹಿಕಿ ಅಲ್ಕಾತಾಯಿ ಇನಾಮದಾರ ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದ ಆವರಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ ಕುಂಕುಮಾರ್ಚನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು ತಾಯಂದಿರ ಒಳ್ಳೆಯ ಸಂಸ್ಕಾರದಿಂದ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಸದೃಢವಾಗಿ ಬೆಳೆಯಲು …
Read More »ಶಿಂದೋಳಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ಮೃಣಾಲ ಹೆಬ್ಬಾಳಕರ್.
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು ಈ ಹಿಂದೆ ಗ್ರಾಮದ ಒಳಾಂಗಣ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಸಚಿವೆ ಲಕ್ಷ್ಮೀ …
Read More »ಪ್ರೊ. ಮಾಧವ ಗಾಡ್ಗೀಳ್ ಆತ್ಮಕಥೆ ಏರುಘಟ್ಟದ ನಡಿಗೆ ಬಿಡುಗಡೆ ; ಈಶ್ವರ ಖಂಡ್ರೆ
ಬೆಂಗಳೂರು : ಅದ್ಭುತ ಜೀವವೈವಿಧ್ಯತೆಯ ತಾಣ ಹಾಗೂ ಹಲವು ಪ್ರಮುಖ ನದಿಗಳ ಮೂಲವಾದ ಪಶ್ಚಿಮಘಟ್ಟಗಳ ಮಹತ್ವದ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ಚಿತ್ರಕಲಾ ಪರಿಷತ್ತಿನಲ್ಲಿಂದು ಪ್ರೊ. ಮಾಧವ ಗಾಡ್ಗೀಳ್ ಅವರ ಆತ್ಮಕತೆ A Walk up the Hill ನ ಕನ್ನಡ ಕೃತಿ ‘ಏರುಘಟ್ಟದ ನಡಿಗೆ’ ಬಿಡುಗಡೆ ಮಾಡಿ ಮಾತನಾಡಿದ ಅವರು, …
Read More »