ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ದೇಶವು ಮೋದಿ, ಸರ್ಕಾರ ಹಾಗೂ ಸೈನಿಕರ ಜೊತೆಗೆ ನಿಲ್ಲಬೇಕು. ನಾವ್ಯಾರು ಇಲ್ಲಿ ಬೇರೆ ಬೇರೆ ರೀತಿ ಮಾತನಾಡಲು ಆಗಲ್ಲ ಎಂದು ಹೇಳಿದರು. ಅಂದು ಇಂದಿರಾ ಗಾಂಧಿಗೆ ಇಡೀ ದೇಶದ ಬೆಂಬಲ ಸಿಕ್ಕಿತ್ತು: 1971ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಬಗ್ಗುಬಡಿದಾಗ ಇಡೀ ದೇಶ ಹಾಗೂ ವಿರೋಧ ಪಕ್ಷದವರು ಅವರ ಜೊತೆಗಿದ್ದು ಬೆಂಬಲ ಕೊಟ್ಟರು ಎಂಬುದನ್ನು …
Read More »Yearly Archives: 2025
ಪಾಕಿಸ್ತಾನಕ್ಕೆ ಜೈ ಎಂದವರನ್ನು ಗುಂಡಿಕ್ಕಿ ಕೊಲ್ಲಬೇಕು’ : ಎಂಎಲ್ಸಿ ಹೆಚ್ ವಿಶ್ವನಾಥ್ –
ಮೈಸೂರು : ಪಾಕಿಸ್ತಾನಕ್ಕೆ ಜೈ ಎಂದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಕಾರ್ಮಿಕ ದಿನಾಚರಣೆ, ಎಲ್ಲಾ ಕಾರ್ಮಿಕರಿಗೂ ಶುಭಾಶಯ ಎಂದರು. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ದೇಶವು ಮೋದಿ, ಸರ್ಕಾರ ಹಾಗೂ ಸೈನಿಕರ ಜೊತೆಗೆ ನಿಲ್ಲಬೇಕು. ನಾವ್ಯಾರು ಇಲ್ಲಿ ಬೇರೆ …
Read More »ಪಕ್ಕದ ಮನೆಯವನ ಕಿರುಕುಳದಿಂದ ನೊಂದು ಬಾಲಕಿ ಆತ್ಮಹತ್ಯೆ
ಪಕ್ಕದ ಮನೆಯವನ ಕಿರುಕುಳದಿಂದ ನೊಂದು ಬಾಲಕಿ ಆತ್ಮಹತ್ಯೆ ಬಳ್ಳಾರಿ: ಪಕ್ಕದ ಮನೆಯಾತನ ಮಾನಸಿಕ, ದೈಹಿಕ ಕಿರುಕುಳದಿಂದ ನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ತನ್ನ ಪಕ್ಕದ ಮನೆಯ ವ್ಯಕ್ತಿ ಸುರೇಶ ಎಂಬವನ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಭಂಗ ಮಾಡಿ, ಕಿರುಕುಳ ನೀಡಿದ್ದಾನೆ, ಅವನನ್ನು ಬಿಡಬೇಡಿ ಎಂದು ಅಪ್ರಾಪ್ತೆ ತಿಳಿಸಿದ್ದಾಳೆ. ಈ ಕುರಿತು ಬಾಲಕಿಯ ತಂದೆ ಮಾತನಾಡಿದ್ದು, “ನಾನು ಮದುವೆಗೆ ಹೋಗಿದ್ದೆ, …
Read More »ಎಸ್ಎಸ್ಎಲ್ಸಿ ಫಲಿತಾಂಶ ನಾಳೆ ಪ್ರಕಟ:
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ -1ರ ಫಲಿತಾಂಶ ಶುಕ್ರವಾರ ಘೋಷಣೆಯಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಾಳೆ ಬೆಳಗ್ಗೆ 11.30 ಗಂಟೆ ಸುಮಾರು ಸುದ್ಧಿಗೋಷ್ಟಿಯಲ್ಲಿ ಫಲಿತಾಂಶದ ವಿವರಗಳನ್ನು ಪ್ರಕಟಿಸಲಿದ್ದಾರೆ. ಕಳೆದ ಮಾರ್ಚ್ 21ರಿಂದ ಏಪ್ರಿಲ್ 4ನೇ ತಾರೀಖಿನವರೆಗೆ ನಡೆದ ಹತ್ತನೇ ತರಗತಿ ಪರೀಕ್ಷೆಯ ಎಲ್ಲಾ ಉತ್ತರಪತ್ರಿಕೆಗಳ ಮೌಲ್ಯಮಾಪನವು ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ನಾಳೆ ಪ್ರಕಟಿಸಲು ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಶಿಕ್ಷಣ …
Read More »ಏಳುಕೋಟಿ ಮೈಲಾರಲಿಂಗೇಶ್ವರ ಭಕ್ತರೊಬ್ಬರು ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾದರಿ ರೈತನ ಹಾವೇರಿ ತಾಲೂಕು ಬಸಾಪುರದಲ್ಲಿದ್ದಾರೆ.
ಹಾವೇರಿ: ಏಳುಕೋಟಿ ಮೈಲಾರಲಿಂಗೇಶ್ವರ ಭಕ್ತರೊಬ್ಬರು ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾದರಿ ರೈತನ ಹಾವೇರಿ ತಾಲೂಕು ಬಸಾಪುರದಲ್ಲಿದ್ದಾರೆ. ಹೌದು, ಬಸಾಪುರದ ನಾಗಪ್ಪ ಮುದ್ದಿ ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾವು ಬೆಳೆಗಾರ. ವರ್ಷದಿಂದ ವರ್ಷಕ್ಕೆ ಇವರ ತೋಟದಲ್ಲಿ ಅತ್ಯಧಿಕ ಪ್ರಮಾಣದ ಮಾವಿನ ಇಳುವರಿ ಸಿಗುತ್ತಿದೆ. ಸಂಪೂರ್ಣ ಸಾವಯವವಾಗಿ ಮಾವು ಬೆಳೆಯುವ ನಾಗಪ್ಪ ಮುದ್ದಿ ಅವರಿಗೆ ಮಾವಿನ ತೋಟಕ್ಕೆ ವರ್ತಕರು ವರ್ಷದ ಗುತ್ತಿಗೆ ಪಡೆಯಲು ಮುಗಿಬೀಳುತ್ತಾರೆ. ಸಂಪೂರ್ಣವಾಗಿ ಸಾವಯವವಾಗಿರುವ ಮಾವಿನ ತೋಟಕ್ಕೆ ವರ್ಷದಿಂದ ವರ್ಷಕ್ಕೆ ಅತ್ಯಧಿಕ …
Read More »ಸಂಪರ್ಕ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಸಂಪರ್ಕ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೋಜಗa, ಕೋವಾಡ್, ಹಿಂಡಲಗಾ, ಮಣ್ಣೂರ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರಸ್ತೆಯ ಗುಣಮಟ್ಟ ಕಾಪಾಡಲು ಗುತ್ತಿಗೆದಾರರಿಗೆ ಸಚಿವರು ಸೂಚಿಸಿದರು. …
Read More »ಸಮೃದ್ಧ ಅಂಗವಿಕಲರ ಸಂಸ್ಥೆಗೆ ಆಹಾರ ಸಾಮಗ್ರಿಗಳ ವಿತರಣೆ
ಸಮೃದ್ಧ ಅಂಗವಿಕಲರ ಸಂಸ್ಥೆಗೆ ಆಹಾರ ಸಾಮಗ್ರಿಗಳ ವಿತರಣೆ ಕಾರ್ಮಿಕರ ದಿನಾಚರಣೆಯ ಎಕ್ಸ್ಪರ್ಟ್ ವಾಲ್ ಅಂಡ್ ಇಕ್ವಿಪ್ಮೆಂಟ್ ಕಂಪನಿಯಿಂದ ಸಾಮಾಜೀಕ ಉಪಕ್ರಮ ಸಮೃದ್ಧ ಅಂಗವಿಕಲರ ಸಂಸ್ಥೆಗೆ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಎಕ್ಸ್ಪರ್ಟ್ ವಾಲ್ ಅಂಡ್ ಇಕ್ವಿಪ್ಮೆಂಟ್ ಕಂಪನಿ ಉದ್ಯಮಬಾಗ ಬೆಳಗಾವಿಯ ನಿರ್ದೇಶಕರು ಮತ್ತು ಸಂಸ್ಥಾಪಕರು ವಿನಾಯಕ್ ಹಾಗೂ ಕಾರ್ಮಿಕರು ಸೇರಿ ಸಂಸ್ಥೆಗೆ ಅವಶ್ಯಕ ಆಹಾರ ಸಾಮಗ್ರಿಗಳನ್ನು ಒದಗಿಸಿ ಸಂಸ್ಥೆಯ ಉದ್ದೇಶವನ್ನು ಕೇಳಿ ಸಂಸ್ಥೆಯ ಅಭಿವೃದ್ಧಿಗೆ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ. ನಿಮ್ಮೊಂದಿಗೆ ನಾವು …
Read More »ಹೋಮ ಪೂಜೆಯಲ್ಲಿ ಪಾಲ್ಗೊಂಡು ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ – ಗೋಕಾವಿ ನೆಲದಶಕ್ತಿ ದೇವತೆಯಾದ ಮಹಾಲಕ್ಷ್ಮೀ ದೇವರ ಜಾತ್ರೆಯ ಅಂಗವಾಗಿ ದೇವರ ಬಿಂಬ, ಶಿಖರ, ಕಲಶ, ರಥ, ಗಂಗಾ ಜಲ, ಮೃತ್ತಿಕಗಳ ವೈಭವದ ಮೆರವಣಿಗೆಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿನ್ನೆ ಬುಧವಾರದಂದು ಚಾಲನೆ ನೀಡಿದರು. ನಗರದ ಗುರುವಾರ ಪೇಟೆಯಲ್ಲಿರುವ ಮಹಾಲಕ್ಷ್ಮೀ ಅಮ್ಮನವರ ದೇವಸ್ಥಾನದಿಂದ ಮಹಾಲಕ್ಷ್ಮೀ ದೇವಸ್ಥಾನದವರೆಗೆ ವಿವಿಧ ವಾದ್ಯ ವೃಂದಗಳೊಂದಿಗೆ ಅಪಾರ ಭಕ್ತ ಸಮೂಹದ ಮಧ್ಯ ಮಹಾಲಕ್ಷ್ಮೀ, ಗಣಪತಿ, ಆಂಜನೇಯ, ನಾಗದೇವ, ನವಾಗ್ರಹದೇವರ ಮೂರ್ತಿ ಪ್ರತಿಷ್ಠಾಪನೆ …
Read More »ಬಿಜೆಪಿಗರನ್ನು ನೋಡಿ ದೇಶ ಭಕ್ತಿ ಕಲಿಯುವ ಅವಶ್ಯಕತೆ ಕಾಂಗ್ರೆಸ್ಸಿಗಿಲ್ಲ…
ಬಿಜೆಪಿಗರನ್ನು ನೋಡಿ ದೇಶ ಭಕ್ತಿ ಕಲಿಯುವ ಅವಶ್ಯಕತೆ ಕಾಂಗ್ರೆಸ್ಸಿಗಿಲ್ಲ… ಬಿಜೆಪಿಗರು ಸ್ವಾತಂತ್ರ್ಯ ಹೋರಾಟಗಾರರಲ್ಲ; ಸಚಿವ ಶಿವರಾಜ್ ತಂಗಡಗಿ ದೇಶ ಭಕ್ತಿಯನ್ನು ಬಿಜೆಪಿಗರನ್ನ ನೋಡಿ ಕಲಿಯುವ ಯಾವ ಅವಶ್ಯಕತೆನೂ ಕಾಂಗ್ರೆಸ್’ಗೆ ಇಲ್ಲ. ಬಿಜೆಪಿಗರು ಸ್ವಾತಂತ್ರ್ಯ ಹೋರಾಟಗಾರರಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರ ಪಾತ್ರನೂ ಇಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ಇಂದು ಬಾಗಲಕೋಟೆಯಲ್ಲಿ ಅವರು ಮಾತನಾಡಿದರು. ಪಾಕ್ ವಿರುದ್ಧ ಯುದ್ಧ ಘೋಷಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ದೇಶ ವಿರೋಧಿಗಳಲ್ಲ, …
Read More »ಜಾತಿಗಣತಿ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನೆಲೆಯಲ್ಲಿ ಆಗಬೇಕು: ಈಶ್ವರಖಂಡ್ರೆ
ಜಾತಿಗಣತಿ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನೆಲೆಯಲ್ಲಿ ಆಗಬೇಕು: ಈಶ್ವರಖಂಡ್ರೆ ಬೀದರ್ : ಕೇಂದ್ರ ಸರ್ಕಾರ ಜಾತಿ ಗಣತಿಗಷ್ಟೇ ಸೀಮಿತವಾಗದೆ, ಯಾವುದೇ ಜಾತಿ ಜನಾಂಗಕ್ಕೆ ಅನ್ಯಾಯವಾಗದ ರೀತಿಯಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಸಮೀಕ್ಷೆಯನ್ನೂ ನಡೆಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡುವ ಘೋಷಣೆ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆ …
Read More »