ಚಿಕ್ಕೋಡಿ (ಬೆಳಗಾವಿ): ಎತ್ತಿನ ಗಾಡಿ ಆಯತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಹಾಗೂ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದಲ್ಲಿ ಮಂಗಳವಾರ (ಮೇ 27) ನಡೆದಿದೆ. ಗಣೇಶ್ ಸಂಜು ಕಾಂಬಳೆ (9), ದೀಪಕ್ ಸಂಜು ಕಾಂಬಳೆ (11) ಮೃತ ಅಣ್ಣ- ತಮ್ಮ. ಎತ್ತಿನಗಾಡಿಯಲ್ಲಿ ಸಂಬರಗಿಯಿಂದ ನಾಗನೂರ ಪಿಎ ಗ್ರಾಮಕ್ಕೆ ಹೋಗುತ್ತಿದ್ದಾಗ ದಾರಿಮಧ್ಯದಲ್ಲಿ ಈ ಅವಘಡ ಸಂಭವಿಸಿದೆ. ಒಟ್ಟು ನಾಲ್ಕು ಜನ …
Read More »Yearly Archives: 2025
ಸನ್ನಡತೆ ಮೇರೆಗೆ 74 ಅಪರಾಧಿಗಳಿಗೆ ರೌಡಿಶೀಟರ್ಗಳ ಪಟ್ಟಿಯಿಂದ ಬಿಡುಗಡೆ
ತುಮಕೂರು: ಸನ್ನಡತೆ ಆಧಾರದ ಮೇಲೆ 74 ರೌಡಿಶೀಟರ್ಗಳನ್ನು ರೌಡಿಶೀಟರ್ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ. ಮಂಗಳವಾರ ತುಮಕೂರು ಎಸ್ಪಿ ಕಚೇರಿ ಬಳಿಯಿರುವ ಡಿಆರ್ ಗ್ರೌಂಡ್ನಲ್ಲಿ ರೌಡಿಶೀಟರ್ಗಳ ಸಭೆ ಕರೆಯಲಾಗಿತ್ತು. ಈ ವೇಳೆ, ಎಸ್ಪಿ ಅಶೋಕ್ ಕೆ.ವಿ. ರೌಡಿಶೀಟರ್ಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ಈ ಆಧಾರದ ಮೇಲೆ ರೌಡಿಶೀಟರ್ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ; ತುಮಕೂರು ಜಿಲ್ಲೆಯಲ್ಲಿ ಒಟ್ಟು 901 ಜನ ರೌಡಿಶೀಟರ್ಗಳಿದ್ದಾರೆ. ಅವರನ್ನು ಪರಿಶೀಲನೆ ಮಾಡಿದಾಗ ಕೆಲ ರೌಡಿಶೀಟರ್ಗಳು ಕಳೆದ 10 ವರ್ಷಗಳಿಂದ ಯಾವುದೇ ಕೇಸ್ಗಳಲ್ಲಿ ಭಾಗಿಯಾಗಿರಲಿಲ್ಲ. …
Read More »ಮುಂಗಾರು ಮಳೆಗೆ ಬಾಯ್ತೆರೆದ ಗುಂಡಿಗಳು
ಬೆಳಗಾವಿ: ಮುಂಗಾರು ಮಳೆಗೆ ಕುಂದಾನಗರಿಯ ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷವೂ ನಮಗೆ ಈ ಗೋಳು ತಪ್ಪಿದ್ದಲ್ಲ. ನಮ್ಮ ಪ್ರಾಬ್ಲಂ ಕೇಳುವವರೇ ಇಲ್ಲ ಎಂದು ಆಡಳಿತಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಬೆಳಗಾವಿ ನಗರ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಾಂಧಿ ನಗರ ಸೇತುವೆ ಬಳಿಯ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯ ಸೃಷ್ಟಿಯಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಜನರು ಇಷ್ಟೆಲ್ಲಾ …
Read More »ಒಳಚರಂಡಿ ಕಳಪೆ ಕಾಮಗಾರಿಗೆ ಬೇಸತ್ತ ಜನ
ಹುಕ್ಕೇರಿ : ಒಳಚರಂಡಿ ಕಳಪೆ ಕಾಮಗಾರಿಗೆ ಬೇಸತ್ತ ಜನ ಕಳಪೆ ಮಟ್ಟದ ಒಳಚರಂಡಿ ಕಾಮಗಾರಿ ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ ಹುಕ್ಕೇರಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಪುರಸಭೆ ಅಧಿಕಾರಿಗಳು ಗುಣಮಟ್ಟ ಪರಿಶೀಲಿಸುವಂತೆ ಆಗ್ರಹ
Read More »ಬೆಂಗಳೂರಿನ ಜೈ ಜವಾನ್ – ಜೈ ಹಿಂದ್ ಕಾರ್ಯಕ್ರಮಕ್ಕೆ ತೆರಳಿದ ಬೆಳಗಾವಿಯ ಮಾಜಿ ಸೈನಿಕರು,ಕಾಂಗ್ರೆಸ್ ಕಾರ್ಯಕರ್ತರು…
ಬೆಂಗಳೂರಿನ ಜೈ ಜವಾನ್ – ಜೈ ಹಿಂದ್ ಕಾರ್ಯಕ್ರಮಕ್ಕೆ ತೆರಳಿದ ಬೆಳಗಾವಿಯ ಮಾಜಿ ಸೈನಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು… ಜೈ ಜವಾನ್ – ಜೈ ಹಿಂದ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಕಾರ್ಯಕ್ರಮದ ಆಯೋಜನೆ ಬೆಳಗಾವಿಯ ಮಾಜಿ ಸೈನಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ರವಾನೆ ಬೆಂಗಳೂರಿನಲ್ಲಿ ನಡೆಯಲಿರುವ ಜೈ ಜವಾನ್ ಜೈ ಹಿಂದ್ ಕಾರ್ಯಕ್ರಮಕ್ಕಾಗಿ ಬೆಳಗಾವಿಯಿಂದ ಮಾಜಿ ಸೈನಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ …
Read More »ಹನುಮನ ಜನ್ಮಸ್ಥಳದ ದೇಗುಲದ ಪ್ರಧಾನ ಅರ್ಚಕರನ್ನು ತೆಗೆಯಬೇಡಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ: ಶ್ರೀರಾಮನ ಭಕ್ತ ಹನುಮ ಜನಿಸಿದ ಸ್ಥಳ ಎಂದೇ ಖ್ಯಾತಿಯಾಗಿರುವ ಕೊಪ್ಪಳದ ಅಂಜನಾದ್ರಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಂಡ ರಾಜ್ಯ ಸರ್ಕಾರದ ನಿರ್ಧಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಕುರಿತ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಹನುಮನ ಜನ್ಮಸ್ಥಳದ ದೇಗುಲದ ಪ್ರಧಾನ ಅರ್ಚಕರನ್ನು ತೆಗೆಯಬೇಡಿ ಎಂದು ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಕರ್ನಾಟಕ ಸರ್ಕಾರಕ್ಕೆ ನೋಟಿಸ್: ದೇವಸ್ಥಾನದ ಮುಖ್ಯ ಅರ್ಚಕ ವಿದ್ಯಾದಾಸ್ ಬಾಬಾ ಅವರು, ತಮ್ಮ ಪೂಜೆಗೆ ಸರ್ಕಾರ ಅಡ್ಡಿ …
Read More »ರೈತರು ಮುಂಗಾರು ಬೆಳೆ ಬೆಳೆಯಲು ಸಿದ್ದರಾಗಿ – ಶಾಸಕ ನಿಖಿಲ್ ಕತ್ತಿ
ಹುಕ್ಕೇರಿ : ರೈತರು ಮುಂಗಾರು ಬೆಳೆ ಬೆಳೆಯಲು ಸಿದ್ದರಾಗಿ – ಶಾಸಕ ನಿಖಿಲ್ ಕತ್ತಿ ಹುಕ್ಕೇರಿ ತಾಲೂಕಿನಲ್ಲಿ ಮಳೆ ಚನ್ನಾಗಿ ಆಗಿದ್ದರಿಂದ ರೈತರು ಜಮೀನುಗಳನ್ನು ಹದ ಮಾಡಿದ್ದರ ಹಿನ್ನಲೆಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಬಿಜ ವಿತರಣಾ ಕಾರ್ಯಕ್ರಮ ಜರುಗಿತು. ಹುಕ್ಕೇರಿ ಕೃಷಿ ಇಲಾಖೆ ಆವರಣದಲ್ಲಿ ಜರುಗಿದಚಸರಳ ಸಮಾರಂಭದಲ್ಲಿ ಶಾಸಕ ನಿಖಿಲ್ ಕತ್ತಿ ಬೀಜಗಳಿಗೆ ಪೂಜೆ ಸಲ್ಲಿಸಿ ರೈತರಿಗೆ ಸೋಯಾಬೀನ, ಗೋವಿನ ಜೋಳ ಮತ್ತು ಹೆಸರು ಕಾಳುಗಳನ್ನು ವಿತರಣೆ ಮಾಡಿದರು. ನಂತರ …
Read More »ಧಾರವಾಡದ ನವಲೂರು ಬಳಿ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆ ಮೇಲೆ ಸರಣಿ ಅಪಘಾತ, ತಪ್ಪಿದ ಅನಾಹುತ…… ಎರಡು ಕಾರ್‌ಗಳ ಮುಂಭಾಗ ಜಖಂ.
ಧಾರವಾಡದ ನವಲೂರು ಬಳಿ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆ ಮೇಲೆ ಸರಣಿ ಅಪಘಾತ, ತಪ್ಪಿದ ಅನಾಹುತ…… ಎರಡು ಕಾರ್‌ಗಳ ಮುಂಭಾಗ ಜಖಂ. ಮುಂದೆ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿಕೊಂಡು ಹೊರಟ್ಟಿದವನ ತಪ್ಪಿಸಲು ಹೋಗಿ ಗೂಡ್ಸ್ ವಾಹನ ಚಾಲಕ ಏಕಾಎಕಿ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ನಡೆದ ಘಟನೆ ಧಾರವಾಡದ ನವಲೂರು ಬಳಿಯ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆಯ ಮೇಲೆ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದ ಹೆಚ್ ಡಿ ಬಿಆರ್‌ಟಿಎಸ್ ರಸ್ತೆಯಲ್ಲಿ …
Read More »ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಹುಬ್ಬಳ್ಳಿ: ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ ಹುಬ್ಬಳ್ಳಿ : ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಮನ್ ಬೇಪಾರಿ ಎಂಬ ಮನೆ ಕಳ್ಳತನ ಆರೋಪಿಯನ್ನು ಬಂಧನ ಮಾಡಿದ್ದು. ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ 6.10 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನ್ ಬಂಧಿತ ಆರೋಪಿಯಿಂದ ವಶಕ್ಕೆ ಪಡೆದ ಈ ಕುರಿತು ಆರೋಪಿ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಲಾಗಿದೆ.
Read More »ಹೋದಿಗೆರೆಯಲ್ಲಿರುವ ಛತ್ರಪತಿ ಶಹಾಜೀ ಮಹಾರಾಜರ ಸಮಾಧಿಯನ್ನು ಅಭಿವೃದ್ಧಿಪಡಿಸಿ…
ಹೋದಿಗೆರೆಯಲ್ಲಿರುವ ಛತ್ರಪತಿ ಶಹಾಜೀ ಮಹಾರಾಜರ ಸಮಾಧಿಯನ್ನು ಅಭಿವೃದ್ಧಿಪಡಿಸಿ… ಕರ್ನಾಟಕ ಮರಾಠಾ ಸಮಾಜದಿಂದ ಎಂ.ಎಲ್.ಸಿ ಎಂ.ಜಿ. ಮುಳೆ ಅವರಿಗೆ ಮನವಿ ಕರ್ನಾಟಕ ಮರಾಠಾ ಸಮಾಜದ ಪ್ರಮುಖ ನಾಯಕರು ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮುಳೆ ಅವರು ಭೇಟಿಯಾಗಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜರ ತಂದೆಯವರಾದ ಶಹಾಜೀ ಮಹಾರಾಜರ ಸಮಾಧಿ ಅಭಿವೃದ್ಧಿಯ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಬೆಳಗಾವಿಯ ಸಾಹಿತಿಗಳು ಮತ್ತು ಇತಿಹಾಸ ಸಂಶೋಧಕರಾದ ಡಾ. …
Read More »