Breaking News

Daily Archives: ನವೆಂಬರ್ 5, 2025

ಕಬ್ಬು ಬೆಳೆಗಾರರ ಜೊತೆ ಸಚಿವರ ಸಂಧಾನ ಸಭೆ ವಿಫಲ: ಮಿನಿಸ್ಟರ್​​ ಕಾರಿಗೆ ರೈತರ ಮುತ್ತಿಗೆ

ಚಿಕ್ಕೋಡಿ, ಬೆಳಗಾವಿ: ಕಳೆದ ಏಳು ದಿನಗಳಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟ ಕೊನೆಗೊಳಿಸಲು ಸರ್ಕಾರದ ಪರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಬೆಳಗಾವಿಗೆ ಆಗಮಿಸಿ ಸಂಧಾನ ಮಾತುಕತೆ ನಡೆಸಿದರು. ನಾಳೆಯೇ ಸರ್ಕಾರ ಒಂದು ನಿರ್ಧಾರ ಪ್ರಕಟಿಸಬೇಕು ಎಂದು ರೈತರು ಪಟ್ಟು ಹಿಡಿದರು. ಆದರೆ, ಸಚಿವರು ಏಳನೇ ತಾರೀಖಿನವರೆಗೂ ಕಾಲಾವಕಾಶ ಕೇಳಿದರು. ಇದಕ್ಕೆ ಕಬ್ಬು ಬೆಳೆಗಾರರು ಒಪ್ಪದೇ ಇದ್ದಾಗ ಮಾತುಕತೆ ಮುರಿದು ಬಿತ್ತು. ಇದರಿಂದ ಆಕ್ರೋಶಗೊಂಡ ರೈತರು ಸಚಿವರ ಕಾರಿಗೆ ಮುತ್ತಿಗೆ …

Read More »

ಹುಕ್ಕೇರಿ : ಸತಿ – ಪತಿಯರಲ್ಲಿ ಸಾಮರಸ್ಯ ಕೂಡಿರಲಿ – ಯರನಾಳ ಬ್ರಹ್ಮಾನಂದ ಅಜ್ಜನವರು.

ಹುಕ್ಕೇರಿ : ಸತಿ – ಪತಿಯರಲ್ಲಿ ಸಾಮರಸ್ಯ ಕೂಡಿರಲಿ – ಯರನಾಳ ಬ್ರಹ್ಮಾನಂದ ಅಜ್ಜನವರು. ಸತಿ ಪತಿಯರು ಸಾಮರಸ್ಯದಿಂದ ಬಾಳಿದರೆ ಕುಟುಂಬದಲ್ಲಿ ಸೌಖ್ಯ ಕಾಣಬಹುದು ಎಂದು ಹುಕ್ಕೇರಿ ತಾಲೂಕಿನ ಯರನಾಳ ಕಾಳಿಕಾ ಮಠದ ಬ್ರಹ್ಮಾನಂದ ಅಜ್ಜನವರು ಹೇಳಿದರು. ಹುಕ್ಕೇರಿ ತಾಲೂಕಿನ ಯರನಾಳ ಕಾಳಿಕಾ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಕಾರಿಮಠದ ಗುರುಸಿದ್ದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಶಿವಾನುಭವ ಗೋಷ್ಟಿ ಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಬ್ರಹ್ಮಾನಂದ ಅಜ್ಜನವರು ಕುಟುಂಬದಲ್ಲಿ …

Read More »

ಕನ್ನೇರಿ ಶ್ರೀಗಳಿಗೆ ನಿರ್ಬಂಧ; ಉಮೇಶ ವಂದಾಲ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

ವಿಜಯಪುರ:ಕನ್ನೇರಿ ಶ್ರೀಗಳಿಗೆ ನಿರ್ಬಂಧ; ಉಮೇಶ ವಂದಾಲ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಆ್ಯಂಕರ್: ವಿಜಯಪುರ ನಗರದಲ್ಲಿ ಹಿಂದೂ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಕನ್ನೆರಿ ಮಠದ ಅದೃಷ್ಟ ಕಾಡಸಿದ್ದೇಶ್ವರ ಶ್ರೀಗಳ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ ಪ್ರವೇಶ ನಿರ್ಬಂಧಿಸಿ ರುವುದನ್ನು ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದವು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಸರ್ಕಾರ ಕೂಡಲೇ ಶ್ರೀಗಳ ನಿರ್ಬಂಧವನ್ನು ಹಿಂಪಡೆಯಬೇಕು, ಇಲ್ಲವಾದರೆ ಮುಂಬರುವ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡುವುದಾಗಿ …

Read More »

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

: ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿಗೆ ಚಾಲನೆ ನೀಡಿರುವ ಪ್ರಗತಿಪರ ರೈತ ಸಿದ್ರಾಮಪ್ಪ ಬಿರಾದಾರ್ ಅವರು ತಮ್ಮ ಹಸಿರು ವಜ್ರವಾದ ರೆಡ್ ಡೈಮಂಡ್ ಪೇರಲ ತೋಟದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾಗಿ , ತಾವು ಸಾವಯವ ವಿಧಾನದಲ್ಲಿ ಬೆಳೆದ ರೆಡ್ ಡೈಮಂಡ್ ತಳಿಯ ಪೇರಲ …

Read More »

7ನೇ ದಿನಕ್ಕೆ ಕಾಲಿಟ್ಟ ಕಬ್ಬು ಹೋರಾಟಗಾರರ ಪ್ರತಿಭಟನೆ

ಚಿಕ್ಕೋಡಿ (ಬೆಳಗಾವಿ): ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯು 7ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರದಿದ್ದರೆ ಕರ್ನಾಟಕ ಬಂದ್​ ಮಾಡುವ ಬಗ್ಗೆ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಕಳೆದು ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದರೂ, ಸರ್ಕಾರದ ಯಾವುದೇ ಪ್ರತಿನಿಧಿಗಳು ಸ್ಥಳಕ್ಕೆ ಬಾರದೇ ಇರುವುದರಿಂದ ರೈತರು ಮತ್ತಷ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. …

Read More »

ಕಬ್ಬು ಬೆಳೆಗಾರರ ಬೆಂಬಲಕ್ಕೆ ಬಂದ ಕರವೇ: ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ

ಬೆಳಗಾವಿ: ಕಬ್ಬಿಗೆ 3,500 ರೂ. ದರ ನಿಗದಿಗೆ ಆಗ್ರಹಿಸಿ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್​ನಲ್ಲಿ ರೈತರು ಕಳೆದ 7 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದ್ದು, ಬೆಳಗಾವಿ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾದ್ಯಂತ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಬಹುತೇಕ ಎಲ್ಲ ತಾಲೂಕುಗಳಲ್ಲಿ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಈಗ ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಮುಂದಾಗಿದೆ. …

Read More »

ಹುಬ್ಬಳ್ಳಿಯ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್​ಗೆ ಗ್ರಹಣ:

ಹುಬ್ಬಳ್ಳಿ: ನಗರದ ಹಳೇ ಕೋರ್ಟ್ ವೃತ್ತದ ಬಳಿಯ ಸಾಯಿ ಮಂದಿರದ ಎದುರು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮಲ್ಟಿ – ಲೆವೆಲ್ ಕಾರು ಪಾರ್ಕಿಂಗ್ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿ ಆರಂಭವಾಗಿ ಏಳು ವರ್ಷ ಕಳೆದರೂ ಕೂಡ ನೆಲಮಟ್ಟ ಬಿಟ್ಟು ಮೇಲೇಳುತ್ತಿಲ್ಲ. ಇದು ಮಹಾನಗರ ಪಾಲಿಕೆಗೆ ತೀವ್ರ ತಲೆನೋವು ತಂದೊಡ್ಡಿದ್ದು, ಗುತ್ತಿಗೆ ರದ್ದು ಮಾಡಲು ಚಿಂತನೆ ನಡೆಸಿದೆ. ಅವಳಿ ನಗರದ ವಾಹನಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾದ ವಾಹನ ನಿಲುಗಡೆಗೆ ಆನುಕೂಲವಾಗುವ …

Read More »

ಕದ್ರಿ ಪಾರ್ಕ್​ಗೆ ಟೋಲ್ ಮಾದರಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ: 5 ನಿಮಿಷಕ್ಕಿಂತ ಹೆಚ್ಚು ನಿಂತರೆ ಶುಲ್ಕ ಕಟ್

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿಗೊಂಡಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು, ವಾಹನಗಳು ಓಡಾಡುತ್ತಿರುತ್ತವೆ. ಆದರೆ ಇದೀಗ ಈ ರಸ್ತೆಗೆ ಟೋಲ್ ಸಿಸ್ಟಮ್ ರೀತಿಯ ಸ್ಮಾರ್ಟ್ ಪಾರ್ಕಿಂಗ್ ಮಾಡಿ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ. ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಂಗಡಿಗಳನ್ನು ಖಾಸಗಿ ಸಂಸ್ಥೆಯೊಂದು ಟೆಂಡರ್ ಮೂಲಕ ಪಡೆದುಕೊಂಡಿದೆ. ಇದೇ ಸಂಸ್ಥೆ ಕದ್ರಿ ಪಾರ್ಕ್​ನ ಅಂಗಡಿ, ರಸ್ತೆ, ಫುಟ್​ಪಾತ್, ಪಾರ್ಕಿಂಗ್ …

Read More »

‘ರಾಹುಲ್ ಗಾಂಧಿ, ಆತನ ಖಾಂದಾನ್ ಚೋರ್’: ಹರಿಯಾಣದಲ್ಲಿ ಮತಗಳ್ಳತನ ಆರೋಪಕ್ಕೆ ಛಲವಾದಿ ಟೀಕೆ

ಚಾಮರಾಜನಗರ: “ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಕಾಂಗ್ರೆಸ್​ನವರು ಮಾತೆತ್ತಿದ್ರೆ ಗ್ಯಾರಂಟಿ ಎಂದು ದಿನ ದೂಡುತ್ತಿದ್ದಾರೆ” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಕೆರೆ ಆವರಣದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಜನಸಾಮಾನ್ಯರ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಎಸ್ಇಪಿ ಟಿಎಸ್​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೂ, ದಲಿತ ಸಚಿವರು ಯಾರೂ ಮಾತನಾಡುತ್ತಿಲ್ಲ” ಎಂದು ಕಿಡಿಕಾರಿದರು. ಈ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದಲಿತ ಸಚಿವರು …

Read More »

2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ

ಬೆಂಗಳೂರು: 2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು ಪರೀಕ್ಷೆ 2ರ ಅಂತಿಮ ವೇಳಾಪಟ್ಟಿಯನ್ನು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 2026ರ ಮಾರ್ಚ್​ 18ರಿಂದ ಏಪ್ರಿಲ್​ 2ರ ವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ 1ರ ಪರೀಕ್ಷೆಗಳು ನಡೆಯಲಿವೆ. ಪಿಯುಸಿ ಪರೀಕ್ಷೆ 1ರ ಪರೀಕ್ಷೆ 2026ರ ಮಾರ್ಚ್​ 28ರಿಂದ ಮಾರ್ಚ್​ 17ರ ವರೆಗೆ ನಡೆಯಲಿದೆ. ಪರೀಕ್ಷೆ 2ರ ಪರೀಕ್ಷೆ …

Read More »