ಕೊಪ್ಪಳ, (ಅಕ್ಟೋಬರ್ 18): ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ಎಸ್ (RSS) ಕಾರ್ಯಚಟುವಟಿಕೆಗಳಿಗೆ ನಿರ್ಬಂಧಿಸುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಡುವೆ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ಬಿಜೆಪಿ ನಾಯಕರು ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸಚಿವ ಶಿವರಾಜ್ ತಂಗಡಗಿ (Shivaraj Tangadagi) RSS ಒಪ್ಪುವವರು ದೇಶಪ್ರೇಮಿಗಳಲ್ಲ, ದೇಶ ವಿರೋಧಿಗಳು ಎಂದು …
Read More »Daily Archives: ಅಕ್ಟೋಬರ್ 19, 2025
10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ
ಬೆಂಗಳೂರು, ಅಕ್ಟೋಬರ್ 19: ಅದು ತಮಿಳುನಾಡಿನ ಕಿಲಾಡಿ ಗ್ಯಾಂಗ್. ಜನರಿಗೆ ಮಂಕುಬೂದಿ ಎರಚೋದೆ ಅವರ ಕಾಯಕ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ ಹೆಚ್ಚಿನ ನಕಲಿ ನೋಟು (Fake Notes) ನೀಡಿ ಮಾರಿಸುವದು ಕರಗತವಾಗಿತ್ತು. ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದಿದ್ದ ಆ ಗ್ಯಾಂಗ್ ಬೆಂಗಳೂರಿನಲ್ಲಿ ಮೊದಲ ವಂಚನೆ ಪ್ರಯತ್ನದಲ್ಲೇ ಖಾಕಿ ಬಲೆಗೆ (Arrest) ಬಿದ್ದಿದೆ.ಬಂಧಿತ ಶೇಕ್ ಮೊಹಮ್ಮದ್, ಮಿರಾನ್ ಮೊಹಿದ್ದೀನ್, ರಾಜೇಶ್ವರನ್ ತಮಿಳುನಾಡಿನ ತಿರುನೆಲ್ವೇಲಿ ಮೂಲದವರು. ಇಷ್ಟು ದಿನ ತಮಿಳುನಾಡು, ಆಂಧ್ರ ಭಾಗದಲ್ಲಿ ಜನರಿಗೆ ಮಂಕುಬೂದಿ ಎರಚಿ ವಂಚನೆ …
Read More »ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ನಾಳೆಯಿಂದಲೇ ಕಬ್ಬು ನುರಿಸಲು ಅನುಮತಿ ನೀಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು : ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಅ. 20 ರಿಂದಲೇ ಕಬ್ಬು ಕ್ರಷಿಂಗ್ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ಆದೇಶ ಮಾಡಲಾಗಿದೆ. ಈ ಮೊದಲು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಜೂನ್ 22ರಿಂದ ಹಾಗೂ ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಗದಗ, ಯಾದಗಿರಿ, ದಾವಣಗೆರೆ, ಉತ್ತರ ಕನ್ನಡ, …
Read More »ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಹಾವೇರಿ : ಆರ್ಟಿಸಿ ದುರಸ್ತಿ ಮಾಡಿಕೊಡಲು 12 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಶಿರಸ್ತೇದಾರ ತಮ್ಮಣ್ಣ ಕಾಂಬಳೆ, ದ್ವಿತೀಯ ದರ್ಜೆ ಸಹಾಯಕರುಗಳಾದ ಗೂಳಪ್ಪ ಮನಗೂಳಿ ಹಾಗೂ ಶಿವಾನಂದ ಬಡಿಗೇರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಬೊಮ್ಮನಹಳ್ಳಿ ಗ್ರಾಮದ ಶಂಕ್ರಪ್ಪ ಗುಮಗುಂಡಿ ಎಂಬುವರ ಆರ್ಟಿಸಿ ದುರಸ್ತಿ ಮಾಡಿಕೊಡಲು ಆರೋಪಿಗಳು ಲಂಚ ಪಡೆಯುತ್ತಿದ್ದ ವೇಳೆ …
Read More »ಪತ್ನಿಯನ್ನು ಹತ್ಯೆ ಮಾಡಿ ವಾಟರ್ ಹೀಟರ್ನಿಂದ ಕರೆಂಟ್ ಹೊಡೆದು ಸಾವು ಎಂದು ಬಿಂಬಿಸಿದ್ದ ಪತಿ ಅರೆಸ್ಟ್
ಬೆಂಗಳೂರು: ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಪತ್ನಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಬಳಿಕ ಕೃತ್ಯ ಮರೆ ಮಾಚಲು ವಾಟರ್ ಹೀಟರ್ನಿಂದ ಕರೆಂಟ್ ಹೊಡೆದು ಮೃತಪಟ್ಟಿರುವುದಾಗಿ ಕಥೆ ಕಟ್ಟಿದ ಪತಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಹತ್ಯೆಗೊಳಗಾದ ರೇಷ್ಮಾ (32). ಹತ್ಯೆ ಮಾಡಿದ ಆರೋಪದಡಿ ಪತಿ ಪ್ರಶಾಂತ್ ಕಮ್ಮಾರ್ (25) ಎಂಬಾತನನ್ನು ಬಂಧಿಸಲಾಗಿದೆ. ರೇಷ್ಮಾ ಸಹೋದರಿ ರೇಣುಕಾ ಎಂಬುವರು ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ …
Read More »ಕಂದಕಕ್ಕೆ ಉರುಳಿದ ಸಾರಿಗೆ ಬಸ್; 49 ಪ್ರಯಾಣಿಕರಿಗೆ ಗಾಯ
ಕಾರವಾರ(ಉತ್ತರ ಕನ್ನಡ): ಸಾರಿಗೆ ಸಂಸ್ಥೆಯ ಬಸ್ವೊಂದು ಕಂದಕಕ್ಕೆ ಉರುಳಿ ಬಿದ್ದು ಮೂರು ಬಾರಿ ಪಲ್ಟಿಯಾದ ಪರಿಣಾಮ ಚಾಲಕ, ನಿರ್ವಾಹಕ ಸೇರಿ 49 ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ರಾತ್ರಿ ಅಂಕೋಲಾ ತಾಲೂಕಿನ ವಡ್ಡಿ ಘಾಟ್ ತಿರುವಿನಲ್ಲಿ ಸಂಭವಿಸಿದೆ. ಕುಮಟಾ-ಶಿರಸಿ ರಸ್ತೆ ಕಾಮಗಾರಿಯ ನಿಮಿತ್ತ ಸಂಚಾರ ಬಂದ್ ಮಾಡಲಾಗಿದ್ದು, ಶಿರಸಿಗೆ ಪ್ರಯಾಣಿಸುವ ಬಸ್ ಮಾರ್ಗವನ್ನು ವಡ್ಡಿ ಮೂಲಕ ಸಂಚರಿಸುವಂತೆ ಬದಲಿಸಲಾಗಿತ್ತು. ರಾಜ್ಯ ಹೆದ್ದಾರಿಯಾದ ಇದರ ಘಟ್ಟದ ಪ್ರದೇಶದಲ್ಲಿ ಭಾರಿ …
Read More »ಗುತ್ತಿಗೆದಾರರ ನೋವು ಅರ್ಥವಾಗುತ್ತದೆ, ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ: ಡಿಸಿಎಂ
ಬೆಂಗಳೂರು: “ಗುತ್ತಿಗೆದಾರರ ನೋವು ನಮಗೆ ಅರ್ಥವಾಗುತ್ತದೆ, ಆದರೆ ಯಾರೂ ಸಹ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಉಪ ಮುಖ್ಯಮಂತ್ರಿಗಳು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. “ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬಜೆಟ್ ಮಿತಿಯನ್ನು ಮೀರಿ ಹೆಚ್ಚು ಕೆಲಸಗಳನ್ನು ಕೊಟ್ಟಿದ್ದರು. ಇದರಿಂದ ಸಮಸ್ಯೆ ಹೆಚ್ಚಾಗಿದೆ. ನಾನು ನನ್ನ ಕೈಲಾದಷ್ಟು ಬಿಲ್ ಪಾವತಿಸಿದ್ದೇನೆ. …
Read More »33 ಸಾವಿರ ಕೋಟಿ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಹೋರಾಟ ಖಂಡಿತ: ಆರ್.ಮಂಜುನಾಥ್
ಬೆಂಗಳೂರು: ”33 ಸಾವಿರ ಕೋಟಿ ಬಾಕಿ ಬಿಲ್ ಬಿಡುಗಡೆ ಮಾಡಿಲ್ಲವೆಂದರೆ ಹೋರಾಟ ಮಾಡುವುದು ಖಂಡಿತ” ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ಸ್ಪಷ್ಟಪಡಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಗಿನ ಸಭೆ ಬಳಿಕ ಶನಿವಾರ ಸಂಜೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಡಿಸೆಂಬರ್ ಒಳಗೆ ಬಿಲ್ ಕ್ಲೀಯರ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಿಎಂ ಜೊತೆಗೆ ಸಭೆ ಮಾಡಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಬಾಕಿ ಬಿಲ್ ಪೇಮೆಂಟ್ ಆಗದಿದ್ದರೆ ರಾಜ್ಯಪಾಲರ ಮೊರೆ ಹೋಗುತ್ತೇವೆ. ನಾವು …
Read More »ಬೆಳಗಾವಿ ಜಿಲ್ಲೆಯ ಏಳು ನಿರ್ದೇಶಕ ಸ್ಥಾನಕ್ಕೆ ಇಂದು ಮತದಾನ
ಬೆಳಗಾವಿ ಜಿಲ್ಲೆಯ ಏಳು ನಿರ್ದೇಶಕ ಸ್ಥಾನಕ್ಕೆ ಇಂದು ಮತದಾನ ತೀವ್ರ ಕುತೂಹಲ ಕೆರಳಿಸಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಚುನಾವಣಾ ಅಖಾಡದಲ್ಲಿ ಘಟಾನುಘಟುಗಳ ಜಿದ್ದಾಜಿದ್ದು ಬೆಳಗಾವಿ ಜಿಲ್ಲೆಯ ಏಳು ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರೋ ಮತದಾನ ಒಟ್ಟು 698 ಮತಗಳಲ್ಲಿ 676 ಅರ್ಹ ಮತದಾರರಿಗೆ ಮತ ಚಲಾವಣೆ ಹಕ್ಕು ಅನರ್ಹಗೊಳಿಸಿದ್ದ 22 ಮತದಾರರಲ್ಲಿ 16 ಜನರಿಗೆ ಮತದಾನಕ್ಕೆ ಅವಕಾಶ ಧಾರವಾಡ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿದ್ದ ಈ 16 ಜನರಿಗೆ …
Read More »