Breaking News

Daily Archives: ಅಕ್ಟೋಬರ್ 7, 2025

ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ, ಉತ್ತರ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆ

ಬೆಂಗಳೂರು, ಅಕ್ಟೋಬರ್​ 07: ಕರ್ನಾಟಕದ ವಿವಿಧೆಡೆ ನಾಳೆ ಗಾಳಿ ಸಹಿತ ಉತ್ತಮ ಮಳೆ (Rain) ಆಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ರೆಡ್​ ಅಲರ್ಟ್​ ಹಿನ್ನಲೆ ಗಡಿ ಜಿಲ್ಲೆಗಳಲ್ಲೂ ಉತ್ತಮ ಮಳೆ ನಿರೀಕ್ಷೆ ಇದೆ. ಉಳಿದ ಜಿಲ್ಲೆಗಳಲ್ಲಿ ಭಾಶಶಃ ಮೋಡ ಕವಿದ ವಾತಾವರಣ ಅಥವಾ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ …

Read More »

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು, (ಅಕ್ಟೋಬರ್ 07): ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ (Former PM HD Devegowda) ಅವರು ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ (Bengaluru) ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಸದ್ಯ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಗೆ ಹೆಚ್‌ಡಿ ದೇವೇಗೌಡರು ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದ್ದು, ನಿನ್ನೆ (ಅಕ್ಟೋಬರ್ 06) ರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಾ ಸುದರ್ಶನ್ …

Read More »

ಕೆಲವರು ಸ್ವಾರ್ಥಕ್ಕೋಸ್ಕರ ವೀರಶೈವ ಲಿಂಗಾಯತರನ್ನು ಬೇರೆ ಬೇರೆ ಮಾಡ್ತಿದ್ದಾರೆ: ಸಚಿವ ಖಂಡ್ರೆ

ಬೆಂಗಳೂರು: ಕೆಲವರು ತಮ್ಮ ಸ್ವಾರ್ಥಕ್ಕೋಸ್ಕರ ವೀರಶೈವ ಹಾಗು ಲಿಂಗಾಯತರನ್ನು ಬೇರೆ ಬೇರೆ ಮಾಡ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ. ಬೆಂಗಳೂರಲ್ಲಿಂದು ಮಾತನಾಡಿದ ಅವರು, ವೀರಶೈವರು, ಲಿಂಗಾಯತರನ್ನು ಬೇರೆ ಬೇರೆ ಮಾಡಲು ಸಾಧ್ಯವಿಲ್ಲ. ಯಾವ ಶಕ್ತಿಯಿಂದಲೂ ಬೇರೆ ಬೇರೆ ಮಾಡಲು ಸಾಧ್ಯವಿಲ್ಲ. ಪೂಜ್ಯ ಮಾತೆ ಮಹಾದೇವಿ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಅಂತ ಹೋರಾಟ ಮಾಡಿದರೆ ಮಾನ್ಯತೆ ಸಿಗಬಹುದು ಅಂತ ಹೊರಟಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯದ …

Read More »

ಎರಡು ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಪಾದಯಾತ್ರಿಗಳು ಸಾವು

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿಗೆ ಪಾದಯಾತ್ರೆ ಹೊರಟಿದ್ದವರ ಮೇಲೆ ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದಿರುವ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ನಾಲ್ಕು ಜನರಿಗೆ ಗಾಯವಾಗಿದೆ. ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಅನ್ನಪೂರ್ಣ(40), ಪ್ರಕಾಶ್(25) ಹಾಗೂ ಶರಣಪ್ಪ(19) ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇವರು ತಮ್ಮ …

Read More »

ಶಾಲಾ, ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮಾ ಪಾಲಿಸಿ ಸೃಷ್ಟಿಸಿ ಕೋಟ್ಯಂತರ ವಂಚನೆ, ಇಬ್ಬರು ಸೆರೆ

ಉಡುಪಿ: ಶಾಲಾ, ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮಾ ಪಾಲಿಸಿ ಮಾಡಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ ಎಸ್ (33) ಮತ್ತು ಶಿರಸಿಯ ಚರಣ ಬಾಬು ಮೇಸ್ತ ಬಂಧಿತರು. 2024ರ ನ.25ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಬಾಡಿ-ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶಾಲಾ ವಾಹನವೊಂದು ರಿಕ್ಷಾಗೆ ಡಿಕ್ಕಿ ಹೊಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕುಂದಾಪುರ …

Read More »

ಕುರುಬರನ್ನ ಎಸ್​​ಟಿಗೆ ಸೇರ್ಪಡೆಗೆ ಉಗ್ರಪ್ಪ ಉಗ್ರಾವತಾರ, ಎಲ್ಲಾ ಗೊಂದಲಗೆ ತೆರೆ ಎಳೆದ ಸಿಎಂ

ಬೆಂಗಳೂರು, (ಅಕ್ಟೋಬರ್ 07): ವಿಧಾನಸೌಧದಲ್ಲಿ ಇಂದು ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanti) ಕಾರ್ಯಕ್ರಮದಲ್ಲಿ ಕುರುಬ ಸಮುದಾಯವನ್ನು ಎಸ್​​ಟಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಿದರೆ ಸುಮ್ಮನ ಇರುವುದಿಲ್ಲ ಎಂದು ಕಾರ್ಯಕ್ರಮದಲ್ಲೇ ಮಾಜಿ ಸಂಸದ ವಿ.ಎಸ್. ಉಗ್ರಪ್ಪ (V.S Ugrappa) ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆಯೇ ಗುಡುಗಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ (Siddaramaiah), ಕುರುಬರನ್ನು ಪರಿಶಿಷ್ಟ ಜಾತಿ (ಎಸ್‌ಟಿ) ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಬೊಮ್ಮಾಯಿ ಸರ್ಕಾರ, ಆ ಶಿಫಾರಸ್ಸಿನ …

Read More »

ಮೈಸೂರಲ್ಲಿ ಕಾರು ಅಡ್ಡಗಟ್ಟಿ ಹಾಡಹಗಲೇ ವ್ಯಕ್ತಿಯ ಭೀಕರ ಕೊಲೆ

ಮೈಸೂರು: ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ವಸ್ತು ಪ್ರದರ್ಶನ ಆವರಣದ ಮುಂದಿನ ರಸ್ತೆಯಲ್ಲಿ ಇಂದು ಬೆಳಗ್ಗೆ ಸುಮಾರು 11.20 ಗಂಟೆಗೆ ನಡೆದಿದೆ. ವೆಂಕಟೇಶ್ ಆಲಿಯಾಸ್ ಗಿಲಿಗಿಲಿ ನಾರಾಯಣ (45) ಕೊಲೆಯಾದ ವ್ಯಕ್ತಿ. ಕಾರಿನ ಗ್ಲಾಸ್ ಓಪನ್ ಮಾಡಿಕೊಂಡು ವೆಂಕಟೇಶ್ ತೆರಳುವಾಗ ಆಟೋ ಮತ್ತು ಬೈಕ್​ನಲ್ಲಿ ಬಂದ ಕಿಡಿಗೇಡಿಗಳು, ಕಾರದ ಪುಡಿ ಎರಚಿ ದಾಳಿ ಮಾಡಿದ್ದಾರೆ. ಕೃತ್ಯ ಎಸಗುವಾಗ ನಾಲ್ಕು ಮಂದಿ ಇದ್ದರು ಎಂದು …

Read More »

ಶೆಡ್ ನಲ್ಲಿ ಹೊತ್ತಿಕೊಂಡ ಬೆಂಕಿ: 7 ಕಾರ್ಮಿಕರಿಗೆ ಗಂಭೀರ ಗಾಯ

 ಶೆಡ್ ನಲ್ಲಿ ಹೊತ್ತಿಕೊಂಡ ಬೆಂಕಿ: 7 ಕಾರ್ಮಿಕರಿಗೆ ಗಂಭೀರ ಗಾಯ ಶೆಡ್ ವೊಂದರಲ್ಲಿ ಗ್ಯಾಸ್ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿದ್ದು, 7 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದ ಕಾಡುಮನೆ ಸರ್ಕಲ್ ಬಳಿ ಘಟನೆ ನಡೆದಿದೆ. ಶೆಡ್ ನಲ್ಲಿ ವಾಸವಾಗಿದ್ದ 7 ಕಾರ್ಮಿಕರಿಗೆ ಗಂಭೀರವಾದ ಸುಟ್ಟಗಾಯಗಳಾಗಿವೆ.ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ …

Read More »

ಮಕ್ಕಳು ಆಟವಾಡುವಾಗ ಎಷ್ಟೇ ಎಚ್ಚರಿಕೆಯಿಂದಿದ್ದರೂ ಕಡಿಮೆಯೇ. ಇಲ್ಲೋರ್ವ ಬಾಲಕ ಜೋಕಾಲಿ

ಮಕ್ಕಳು ಆಟವಾಡುವಾಗ ಎಷ್ಟೇ ಎಚ್ಚರಿಕೆಯಿಂದಿದ್ದರೂ ಕಡಿಮೆಯೇ. ಇಲ್ಲೋರ್ವ ಬಾಲಕ ಜೋಕಾಲಿ ಆಡುತ್ತಿದ್ದಾಗ ಜೋಕಾಲಿಗೆ ಕಟ್ಟಿದ್ದ ಸೀರೆ ಕತ್ತಿಗೆ ಸುತ್ತಿಕೊಂಡು ಬಾಲಕ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಇಲ್ಲಿನ ಕೋನಬೇವು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಹುಲ್ ಬಾವಿಹಳ್ಳಿ ಮೃತ ಬಾಲಕ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ತೆಲಗಿ ನಿವಾಸಿಯಾಗಿದ್ದ ಬಾಲಕ ರಾಹುಲ್ ಅಜ್ಜಿಯ ಮನೆಗೆ ಬಂದಿದ್ದ. ಈ ವೇಳೆ ಜೋಕಾಲಿ ಆಡಲು ಹೋಗಿ ದುರಂತಕ್ಕೀಡಾಗಿದ್ದಾನೆ.

Read More »

ಪತ್ನಿ ದೈಹಿಕ ಸಂಪರ್ಕಹೊಂದಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಪತ್ನಿ ದೈಹಿಕ ಸಂಪರ್ಕಹೊಂದಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಈ ಘಟನೆ ನಡೆದಿದೆ. ಮಾರಮ್ಮ ಪತಿಯಿಂದ ಕೊಲೆಯಾದ ಮಹಿಳೆ. ಸಂಗಪ್ಪ ಪತ್ನಿಯನ್ನೇ ಕೊಲೆಗೈದ ಪತಿ.ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನೇ ಕೊಲೆಗೈದಿದ್ದಾನೆ. ಪತ್ನಿ ಹತ್ಯೆ ಬಳಿಕ ಸಂಗಪ್ಪ ಪೊಲೀಸ್ ಠಾಣೆಗೆ ಬಂಧು ಶರಣಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »