ಪಡಿತರ ಅಕ್ಕಿ ಸಾಗಾಟ; ಇಬ್ಬರ ಬಂಧನ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಹ್ಮದ ನಾಗಾವಿ ಹಾಗೂ ತುಕಾರಾಂ ಭಜಂತ್ರಿ ಬಂಧಿತ ಆರೋಪಿಗಳು. ಬಂಧಿತರಿಂದ 50 ಸಾವಿರ ಮೌಲ್ಯದ ಟಂಟಂ ಗೂಡ್ಸ್, 36,090 ಮೌಲ್ಯದ 1210 ಕೆಜಿ ಅಕ್ಕಿ ಹಾಗೂ ಸ್ಯಾಂಪಲ್‌ಗಾಗಿ ತೆಗೆದ 58 ರೂಪಾಯಿ ಮೌಲ್ಯದ …
Read More »Monthly Archives: ಆಗಷ್ಟ್ 2025
ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯಿಂದ ವಿವಿಧ ಶಾಲೆಗಳಲ್ಲಿ ಶೈಕ್ಷಣಿಕ ಸಾಮಗ್ರಿಗಳ ವಿತರಣೆ
ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯಿಂದ ವಿವಿಧ ಶಾಲೆಗಳಲ್ಲಿ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯಿಂದ ವಿವಿಧ ಶಾಲೆಗಳಲ್ಲಿ ಶೈಕ್ಷಣಿಕ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯು ಪ್ರತಿವರ್ಷ ಪ್ರಥಮ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಿದೆ. ಪ್ರತಿವರ್ಷದಂತೆ ಈ ಬಾರಿಯೂ ಬೆಳಗಾವಿ ತಾಲೂಕಿನ ತುರಮುರಿ, ಕಲ್ಲೇಹೋಳ, ಕೊಣೇವಾಡಿ, ಬಾಚಿ, ಬಸರಿಕಟ್ಟಿ, ಅಷ್ಟೆ, …
Read More »ಮತಗಳ್ಳತನ ಆರೋಪ: 1 ವರ್ಷ ಕತ್ತೆ ಕಾಯುತ್ತಿದ್ರಾ? ಅಂತಾ ರಾಹುಲ್, ಕಾಂಗ್ರೆಸ್ಗೆ ಜೋಶಿ ಪ್ರಶ್ನೆ
ಧಾರವಾಡ, ಆಗಸ್ಟ್ 02: ಲೋಕಸಭಾ ಚುನಾವಣೆಯ (Loksabha Election) ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ಮತಗಳ್ಳನ’ ಆಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ಆರೋಪವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಲೋಕಸಭೆ ಚುನಾವಣೆ ನಡೆದು ಒಂದು ವರ್ಷ ಕಳೆದಿದೆ. ಒಂದು ವರ್ಷದವರೆಗೆ ನೀವು ಕತ್ತೆ ಕಾಯುತ್ತಿದ್ರಾ? ಎಂದು ವಾಗ್ದಾಳಿ ಮಾಡಿದರು. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ನಿಮಗೆ …
Read More »ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ
ಬೆಂಗಳೂರು, ಆಗಸ್ಟ್ 2: ಪ್ರಥಮ ಬಾರಿಗೆ, ನಮ್ಮ ಮೆಟ್ರೋದಲ್ಲಿ (Namma Metro) ದೇಣಿಗೆಯಾದ ಮಾನವ ಯಕೃತ್ತನ್ನು (Liver) ಶಸ್ತ್ರಚಿಕಿತ್ಸೆಗಾಗಿ ಯಶಸ್ವಿಯಾಗಿ ಸಾಗಿಸಲಾಯಿತು. ಶುಕ್ರವಾರ (ಆಗಸ್ಟ್ 1) ರಾತ್ರಿ 8:38ಕ್ಕೆ ವೈದೇಹಿ ಆಸ್ಪತ್ರೆಯ ಓರ್ವ ವೈದ್ಯ ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿ ಯಕೃತ್ತನ್ನು ತೆಗೆದುಕೊಂಡು ವೈಟ್ಫಿಲ್ಡ್ ಮೆಟ್ರೋ ನಿಲ್ದಾಣಕ್ಕೆ ಅಂಬ್ಯುಲೆನ್ಸ್ನಲ್ಲಿ ಸುರಕ್ಷಿತವಾಗಿ ಬಂದರು. ವೈದ್ಯರ ತಂಡ ಮೆಟ್ರೋ ನಿಲ್ದಾಣಕ್ಕೆ ತಲುಪಿದ ತಕ್ಷಣ, ಸಹಾಯಕ ಭದ್ರತಾ ಅಧಿಕಾರಿ (ASO) ಮತ್ತು ಮೆಟ್ರೋ ಸಿಬ್ಬಂದಿ …
Read More »ಶಾಲೆಯ ನೀರಿನ ಟ್ಯಾಂಕ್ಗೆ ವಿಷ ಬೆರೆಸಿದ ಕೇಸ್ ತನಿಖೆಗೆ 3 ತಂಡ ರಚನೆ
ಶಿವಮೊಗ್ಗ, ಆಗಸ್ಟ್ 02: ಮುಖ್ಯಮಂತ್ರಿ ಸಿದ್ದರಾಮಯ್ಯಯವರ ಸೂಚನೆ ಬೆನ್ನಲ್ಲೇ ಸರ್ಕಾರಿ ಶಾಲೆಯ (Shivamogga Government School) ನೀರಿನ ಟ್ಯಾಂಕ್ಗೆ ಕೀಟನಾಶಕ (Poison) ಬೆರೆಸಿದ ಪ್ರಕರಣದ ತನಿಖೆಯನ್ನು ಶಿವಮೊಗ್ಗ ಪೊಲೀಸರು ಚುರುಕುಗೊಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ತೀರ್ಥಹಳ್ಳಿ ಡಿವೈಎಸ್ಪಿ ನೇತೃತ್ವದಲ್ಲಿ 18 ಪೊಲೀಸ್ ಸಿಬ್ಬಂದಿ ಒಳಗೊಂಡಿರುವ ಮೂರು ತಂಡಗಳನ್ನು ರಚಿಸಿದ್ದಾರೆ. ಟವರ್ ಡಂಪ್, ಸಿಸಿಟಿವಿ ಪರಿಶೀಲನೆಗೆ ಐದು ಮಂದಿ ಸಿಬ್ಬಂದಿ, ಗ್ರಾಮದ ಸುತ್ತಮುತ್ತ ಮಾಹಿತಿ ಸಂಗ್ರಹಣೆಗೆ 8 ಮಂದಿ …
Read More »ಹರಳು ರೂಪದ ಯೂರಿಯಾ ಗೊಬ್ಬರಕ್ಕಿಂತ ಲಿಕ್ವಿಡ್ ರೂಪದ ನ್ಯಾನೋ ಯೂರಿಯಾ ಬಳಕೆಯತ್ತ ರೈತರು
ಹಾವೇರಿ: ಕರ್ನಾಟಕದಲ್ಲಿ ಹರಳು ರೂಪದ ಯೂರಿಯಾ ರಸಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ಇದರ ಬೇಡಿಕೆ ತಗ್ಗಿಸುವ ಉದ್ದೇಶದಿಂದ ದ್ರವ ರೂಪದ ‘ನ್ಯಾನೋ ಯೂರಿಯಾ’ ಬಳಸುವಂತೆ ಕೃಷಿ ತಜ್ಞರು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಪರಿಣಾಮ ಹಾವೇರಿ ಜಿಲ್ಲೆಯ, ಸವಣೂರು ತಾಲೂಕಿನ ಕೆಲವು ರೈತರು ಯೂರಿಯಾ ಗೊಬ್ಬರದ ಬದಲಿಗೆ ‘ನ್ಯಾನೋ ಯೂರಿಯಾ’ದ ಬಳಕೆಗೆ ಮುಂದಾಗಿದ್ದಾರೆ. ರಾಜ್ಯದೆಲ್ಲೆಡೆ ಯೂರಿಯಾಗಾಗಿ ರೈತರು ಪರದಾಡುತ್ತಿರುವ ವರದಿಗಳು ಆಗುತ್ತಿದ್ದು, ಎಲ್ಲಿಯೂ ನಿರೀಕ್ಷಿತ ಪ್ರಮಾಣದಷ್ಟು ರಸಗೊಬ್ಬರ ದೊರೆಯುತ್ತಿಲ್ಲ. ಈ ಅಭಾವ ತಗ್ಗಿಸುವ ಹಿನ್ನೆಲೆಯಲ್ಲಿ …
Read More »ಮಣ್ಣಲ್ಲಿ ಮಣ್ಣಾದ ದೊಡ್ಮನೆಯ ಹಿರಿಜೀವ
ಚಾಮರಾಜನಗರ : ಕನ್ನಡ ಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರ ಸಹೋದರಿ, ದೊಡ್ಮನೆಯ ಹಿರಿಜೀವವಾಗಿದ್ದ ನಾಗಮ್ಮ ಅವರ ಅಂತಿಮ ವಿಧಿ-ವಿಧಾನ ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಿನ ತೋಟದಲ್ಲಿ ಶನಿವಾರ ಮಧ್ಯಾಹ್ನ 2ರ ಸುಮಾರಿಗೆ ಜರುಗಿತು. ದೊಡ್ಮನೆ ಹಿರಿಕೊಂಡಿ, ರಾಜ್ ಪರಿವಾರದ ಮಕ್ಕಳನ್ನು ಎತ್ತಿ ಆಡಿಸಿ ಬೆಳೆಸಿದ್ದ ಎಲ್ಲರ ಅಕ್ಕರೆಯ ನಾಗಮ್ಮ ವಯೋಸಹಜವಾಗಿ ಶುಕ್ರವಾರ ನಿಧನರಾದರು. ಅಣ್ಣಾವ್ರು ಬಹಳ ಪ್ರೀತಿಯಿಂದ ಕಟ್ಟಿಸಿದ ಮನೆಯಲ್ಲಿ ನಾಗಮ್ಮರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ …
Read More »ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯ ಪೂರ್ಣಗೊಳಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ:ಸಂಸದ ಶೆಟ್ಟರ ಸೂಚನೆ!!
ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯ ಪೂರ್ಣಗೊಳಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ:ಸಂಸದ ಶೆಟ್ಟರ ಸೂಚನೆ!! ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯ ಪೂರ್ಣಗೊಳಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ:ಸಂಸದ ಶೆಟ್ಟರ ಸೂಚನೆ ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿಯ ಕುರಿತು ಚರ್ಚೆ ಬೆಳಗಾವಿ – ಕಿತ್ತೂರು – ಧಾರವಾಡ ನಡುವೆ ನೂತನ ರೇಲ್ವೆ ಮಾರ್ಗಕ್ಕೆ ಬೇಕಾಗುವ ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯವನ್ನು ಸಹ ಪೂರ್ಣಗೊಳಿಸುವಂತೆ …
Read More »ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ; ಸಿಎಂ ಸಿದ್ಧರಾಮಯ್ಯ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ
ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ; ಸಿಎಂ ಸಿದ್ಧರಾಮಯ್ಯ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ ಸಿಎಂ ಸಿದ್ಧರಾಮಯ್ಯ ಅಭಿಪ್ರಾಯ ಡಾ. ಬಾಬಾಸಾಹೇಬ ಅಂಬೇಡ್ಕರರು ಬರೆದ ಸಂವಿಧಾನದಂತೆ ಎಲ್ಲ ಸಮಾಜಗಳಿಗೂ ಸಮಾನತೆಯನ್ನು ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರವು ಮಾಡಿದ್ದು, ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಯೊಂದಿಗೆ …
Read More »ನಾಂದನಿ ಮಠದ ಆನೆಯನ್ನ ಅಂಬಾನಿ ಒಡೆತನದ ಉದ್ಯಾನದಿಂದ ಮುಕ್ತಗೊಳಿಸಿ ಕರ್ನಾಟಕ-ಮಹಾರಾಷ್ಟ್ರ ಜೈನ ಬಾಂಧವರಿಂದ ಭವ್ಯ ಚಳುವಳಿ; ರಾಜು ಶೆಟ್ಟಿ
ನಾಂದನಿ ಮಠದ ಆನೆಯನ್ನ ಅಂಬಾನಿ ಒಡೆತನದ ಉದ್ಯಾನದಿಂದ ಮುಕ್ತಗೊಳಿಸಿ ಕರ್ನಾಟಕ-ಮಹಾರಾಷ್ಟ್ರ ಜೈನ ಬಾಂಧವರಿಂದ ಭವ್ಯ ಚಳುವಳಿ; ರಾಜು ಶೆಟ್ಟಿ ನಾಂದನಿಮಠದ ಆನೆ ಅಂಬಾನಿ ಉದ್ಯಾನಕ್ಕೆ ರವಾನೆ ಮರಳಿ ಮಹಾದೇವಿಯನ್ನು ಕರೆ ತರಲು ಹೋರಾಟ ಭಾನುವಾರ ಜೈನ ಬಾಂಧವರಿಂದ ಚಳುವಳಿ ಆರಂಭ ಮಾಜಿ ಸಂಸದ ರಾಜು ಶೆಟ್ಟಿ ಮಾಹಿತಿ ಉದ್ಯಮಿ ಅಂಬಾನಿ ಒಡೆತನದಲ್ಲಿರುವ ವಣತಾರಾ ಉದ್ಯಾನವನಕ್ಕೆ ತೆಗೆದುಕೊಂಡು ಹೋದ ನಾಂದನಿ ಜೈನಮಠದ ಆನೆ ‘ಮಹಾದೇವಿ’ ಯನ್ನು ಮುಕ್ತಗೊಳಿಸಿ ಪುನಃ ಜೈನಮಠಕ್ಕೆ ಹಸ್ತಾಂತರಿಸುವಂತೆ …
Read More »