Breaking News

Daily Archives: ಮೇ 26, 2025

ಮೈಸೂರು: ಅವಧೂತ ದತ್ತಪೀಠದಿಂದ ಭಾರತೀಯ ಸೇನೆಗೆ 25 ಲಕ್ಷ ರೂಪಾಯಿ ಕಾಣಿಕೆ

ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಭಾರತೀಯ ಸೇನೆಗೆ 25 ಲಕ್ಷ ರೂ.ಗಳ ಕಾಣಿಕೆಯನ್ನು ಅರ್ಪಿಸಲಾಯಿತು. ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವ ಭಾನುವಾರ ಸಂಜೆ ವೇದ ಪಾರಾಯಣಗಳ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲಕ …

Read More »

ಭಾರಿ ಮಳೆಗೆ ಕುಮಟಾ ಬಳಿ ಗುಡ್ಡ ಕುಸಿತ

ಕಾರವಾರ (ಉತ್ತರಕನ್ನಡ): ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಭಾನುವಾರ ರಾತ್ರಿ ಕುಮಟಾದ ಮುಸುಗುಪ್ಪ ಬಳಿ ಬೃಹತ್ ಬಂಡೆಗಳ ಸಹಿತ ಗುಡ್ಡ ಕುಸಿತವಾಗಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿತ್ತು. ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೇವಿಮನೆ ಘಟ್ಟ ಸೇರಿದಂತೆ ಹಲವೆಡೆ ಗುಡ್ಡ ಕುಸಿತಗೊಂಡ ಬೆನ್ನಲ್ಲೇ ಇದೀಗ ಮೂರೂರು ಭಾಗದಲ್ಲಿಯೂ ಕಟ್ಟಿಂಗ್ ಮಾಡಿದ್ದ ಧರೆಭಾಗ ಕುಸಿದು ಸಂಚಾರ ಸಂಪೂರ್ಣ ಬಂದ್​ ಆಗಿತ್ತು. “ಕುಮಟಾ ತಾಲೂಕಿನ ಮೂರೂರು-ಮುಸುಗುಪ್ಪ ರಸ್ತೆಯಲ್ಲಿ ಬಿದ್ದಂತಹ ಕಲ್ಲು ಬಂಡೆಯನ್ನು ತೆರವುಗೊಳಿಸಲು …

Read More »

‘ಕನ್ನಡೇತರ ವ್ಯಕ್ತಿಯನ್ನು ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಮಾಡಿ ಕನ್ನಡಿಗರನ್ನು ದೂರವಿಟ್ಟಿದ್ದಾರೆ’: ರಮ್ಯಾ

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್​ಡಿಎಲ್) ಸಂಸ್ಥೆಯ ಪ್ರಚಾರಕ್ಕೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಕರುನಾಡಿನ ಖ್ಯಾತ ಉತ್ಪನ್ನಕ್ಕೆ ಕನ್ನಡೇತರ ನಟಿಯನ್ನು ಬ್ರ್ಯಾಂಡ್​ ಅಂಬಾಸಿಡರ್​ ಮಾಡಿರೋದು ಬಹುತೇಕರ ಆಕ್ರೋಶಕ್ಕೂ ಕಾರಣವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೂಡಾ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಎಕ್ಸ್​ ಪೋಸ್ಟ್​​: ”ಕೆಎಸ್‌ಡಿಎಲ್ ಪುನರುಜ್ಜೀವನಗೊಳಿಸುವ ಉದ್ದೇಶವನ್ನು …

Read More »