ಗಡಿವಿವಾದವನ್ನು ಪದೇ ಪದೇ ಕೆಣಕುವ ಮಹಾರಾಷ್ಟ್ರಕ್ಕೆ ಕರ್ನಾಟಕ ಸರ್ಕಾರ ತಕ್ಕ ಉತ್ತರ ನೀಡಲಿ-ಕನ್ನಡ ಹೋರಾಟಗಾರ ಅಶೋಕ್ ಚಂದರಗಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದವನ್ನು ಮಹಾರಾಷ್ಟ್ರದಲ್ಲಿ ಪದೇ ಪದೇ ಕೆಣಕುವ ಕೆಲಸವನ್ನು ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಅದನ್ನು ಚಾಲೆಂಜ್ ಮಾಡುವ ಕೆಲಸವನ್ನು ಮಾಡದೆ ಇರುವುದು ವಿಷಾದನೀಯವೆಂದು ಕನ್ನಡ ಸಂಘಟನೆಗಳ ಅಧ್ಯಕ್ಷ ಹೋರಾಟಗಾರ ಅಶೋಕ ಚಂದರಗಿ ವಿಷಾಧ ವ್ಯಕ್ತಪಡಿಸಿದರು. ಈ ಕುರಿತು ಗುರುವಾರ ಮಾಧ್ಯಮ ಘೋಷ್ಠಿಯಲ್ಲಿ ಮಾತನಾಡಿದವರು ಈ ನಿಟ್ಟಿನಲ್ಲಿ ಮಹಾರಾಷ್ಟ್ರದವರು ಮಹಾತ್ಮ ಪುಲೆ …
Read More »Monthly Archives: ಮಾರ್ಚ್ 2025
ಎಸ್.ಎಸ್.ಎಲ್.ಸಿ ಪರೀಕ್ಷೆ -1 ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಆವರಣ ನಿರ್ಭಂಧಿತ ಪ್ರದೇಶ;144ರ ಮೇರೆಗೆ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಮಾಚ್ 21, 2025 ರಿಂದ ಎಪ್ರೀಲ್ 4 ವರೆಗೆ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ -1 ಪ್ರಯುಕ್ತ (ಹುಬ್ಬಳ್ಳಿ-ಧಾರವಾಡ ನಗರ ಹೊರತು ಪಡಿಸಿ) ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಆವರಣವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ, ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಆದೇಶಿಸಿರುವ ಅವರು, ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 106 ಪರೀಕ್ಷಾ ಕೇಂದ್ರಗಳಲ್ಲಿ ಮಾಚ್ 21, 2025 …
Read More »ಬಜೆಟ್’ನಲ್ಲಿ ಒಂದು ಕಣ್ಣಿಗೆ ಬೆಣ್ಣೆ-ಇನ್ನೊಂದು ಕಣ್ಣಿಗೆ ಸುಣ್ಣ…:ಶಶಿಕಲಾ ಜೊಲ್ಲೆ…
ವಿಧಾನ ಮಂಡಲದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ… ರಾಜ್ಯ ಸರ್ಕಾರವು ತನ್ನ ಬಜೆಟ್’ನಲ್ಲಿ ಹಲವಾರು ಮಹತ್ವದ ಕ್ಷೇತ್ರಗಳನ್ನು ಕಡೆಗಣಿಸಿ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಯೋಜನೆಗಳನ್ನು ಜಾರಿ ಮಾಡಿದೆ. ಆದ್ದರಿಂದ ಮಹತ್ವದ ಕ್ಷೇತ್ರಗಳಿಗೆ ಅನುದಾನವನ್ನು ನೀಡಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ನವಲಗುಂದ ಶಾಸಕ ಎನ್.ಎಚ್ ಕೊನರೆಡ್ಡಿ ಹೇಳಿದರು. ಇಂದು ವಿಧಾನ ಮಂಡಲದ ಅಧಿವೇಶನದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರು ಸರ್ಕಾರ ತನ್ನ ಬಜೆಟಿನಲ್ಲಿ …
Read More »ಚಾಲಕನ ನಿಯಂತ್ರಣ ತಪ್ಪಿ ಧಾರವಾಡ ಸವದತ್ತಿ ರಸ್ತೆಯಲ್ಲಿ ಮರೆವಾಡ ಬಸ್ಸ ಅಪಘಾತ…. ರಸ್ತೆ ಪಕ್ಕಕ್ಕೆ ಜಾರಿದ ಸಾರಿಗೆ ಬಸ್ಸ, ತಪ್ಪಿದ ಅನಾಹುತ.
ಚಾಲಕನ ನಿಯಂತ್ರಣ ತಪ್ಪಿ ಧಾರವಾಡ ಸವದತ್ತಿ ರಸ್ತೆಯಲ್ಲಿ ಮರೆವಾಡ ಬಸ್ಸ ಅಪಘಾತ…. ರಸ್ತೆ ಪಕ್ಕಕ್ಕೆ ಜಾರಿದ ಸಾರಿಗೆ ಬಸ್ಸ, ತಪ್ಪಿದ ಅನಾಹುತ. ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಸಾರಿಗೆ ಬಸ್ಸವೊಂದು ರಸ್ತೆ ಪಕ್ಕಕ್ಕೆ ಜಾರಿ ಅಪಘಾತವಾದ ಘಟನೆ ಧಾರವಾಡ ಸವದತ್ತಿ ರಸ್ತೆಯ ಹಾದಿ ಬಸವಣ್ಣ ದೇವಸ್ಥಾನ ಬಳಿ ನಡೆದಿದ್ದು, ಅನಾಹುತವೊಂದು ತಪ್ಪಿದೆ. ಧಾರವಾಡ ಸವದತ್ತಿ ಮಾರ್ಗವಾಗಿ ಧಾರವಾಡದಿಂದ ಮರೆವಾಡ ಗ್ರಾಮಕ್ಕೆ ಸಾರಿಗೆ ಬಸ್ಸ ಪ್ರಯಾಣಿಕರನ್ನು ಕರೆದುಕೊಂಡು ತೆರಳುತಿತ್ತು. ಈ ಸಂದರ್ಭದಲ್ಲಿ …
Read More »ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾದ ಸಂಸದ ಈರಣ್ಣ ಕಡಾಡಿ
ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕವನ್ನು ಆದಷ್ಟು ಬೇಗ ಘೋಷಿಸುವುದು ಬೆಳಗಾವಿ ಮಿರಜ್ ನಡುವೆ ಮೆಮೊ ರೈಲು ಸಂಚಾರ ಪ್ರಾರಂಭಿಸುವುದು ಹಾಗೂ ಮುಂಬೈ-ಹೊಸಪೇಟೆ (ರೈಲು ಸಂಖ್ಯೆ 111139/40) ಮತ್ತು ಸೊಲ್ಹಾಪುರ-ಹೊಸಪೇಟೆ (ರೈಲು ನಂ .11415/16) ವರೆಗೆ ಇರುವ ಈ ರೈಲುಗಳನ್ನು ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ವಿಸ್ತರಿಸುವಂತೆ ಮನವಿ …
Read More »ಯುದ್ಧಕಾಂಡವಾದ ಸಾಮಾನ್ಯ ಸಭೆ, ರೊಚ್ಚಿಗೆದ್ದ ಮಹಿಳಾ ಸದಸ್ಯೆ ಸಭೆಯಿಂದ ಪಲಾಯಣ.
ರಾಯಬಾಗ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸಭೆಯಲ್ಲಿ ದಿನಾಂಕ 20 ರಂದು ಕರೆದಿದ್ದ ಸಾಮಾನ್ಯ ಸಭೆ ಯುದ್ಧಕಾಂಡವಾಗಿ ಪರಿಣಮಿಸಿದೆ. ಗುರುವಾರ ಮುಂಜಾನೆ 11 ಗಂಟೆಗೆ ಪುರಸಭೆ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಪುರಸಭೆಯ ಕಚೇರಿಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. 2025-26ನೇ ಸಾಲಿನ ಸಂತೆ ಕರ ಬಹಿರಂಗ ಹರಾಜು ಮಾಡುವ ವಿಷಯವು ಅಜೆಂಡದಲ್ಲಿ ಇತ್ತು. ಇಲಾಖೆಯ ನಿಯಮದಂತೆ 4 ಜನರು ಹರಾಜಿನಲ್ಲಿ ಭಾಗವಹಿಸಬೇಕೆನ್ನುವುದು ಅಧಿಕಾರಿಗಳ ಹಾಗು ಸರ್ವ ಸದಸ್ಯರ …
Read More »ಸ್ಲಗ್ :ಹು-ಧಾ ಮ ಪಾ 1512.67 ಕೋ.ರೂ. ಗಾತ್ರದ ಬಜೆಟ್ ಮಂಡನೆ
ಜಿಐಎಸ್ ಸರ್ವೆ ಕೈಕೊಳ್ಳುವ ಮೂಲಕ ಪಾಲಿಕೆಯ ಆಸ್ತಿ ತೆರಿಗೆಯನ್ನು ಹಾಗೂ ಇತರೆ ಆಂತರಿಕ ಸಂಪನ್ಮೂಲಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸುವುದು, 2025-26ನೇ ಸಾಲಿನಲ್ಲಿ 24*7 ನಿರಂತರ ಕುಡಿಯುವ ನೀರಿನ ಸರಬರಾಜು ಕಾಮಗಾರಿಯನ್ನು ಪೂರ್ಣಗೊಳಿಸಿ ಎಲ್ಲ ವಾರ್ಡಗಳಿಗೂ 24*7 ನಿರಂತರ ಕುಡಿಯುವ ನೀರನ್ನು ಪೂರೈಸುವುದು, ಪ್ರತಿ ಮನೆಯಿಂದ ಶೇ.100 ರಷ್ಟು ವಿಂಗಡಿಸಿದ ಕಸ ಸಂಗ್ರಹಿಸಿ ಶೇ. 100 ರಷ್ಟು ಸಂಸ್ಕರಣೆ ಕೈಕೊಂಡು `ಕಸಮುಕ್ತ ನಗರ’ ವನ್ನಾಗಿಸುವುದು ಇತ್ಯಾದಿ ಮಹತ್ವದ …
Read More »ರವಿವಾರ ದಿನಾಂಕ 23 ರಂದು ಬೆಳಿಗ್ಗೆ 9 ಸಂಜೆ 4: ಘಂಟೆ ವರೆಗೆ ಬೃಹತ್ ಉದ್ಯೋಗ ಮೇಳ
ಬೆಳಗಾವಿಯ ಕೌಶಲ್ಯ ಅಭಿವೃದ್ಧಿ ಉದ್ದಿಮೆ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಇನ್ನುಳಿದ ಸಂಘ ಸಂಸ್ಥೆಗಳ ಸಹಕಾರದಿಂದ ರವಿವಾರ ದಿನಾಂಕ 23 ರಂದು ಬೆಳಿಗ್ಗೆ 9 ಸಂಜೆ 4: ಘಂಟೆ ವರೆಗೆ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಇದರ ಲಾಭ ತೆಗೆದು ಕೊಳ್ಳಬೇಕೆ ಎಂದು ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಸಂಯೋಜಕ ಸಂತೋಷ ನಾವಲಗಿ ಕರೆ ನೀಡಿದರು. ಗುರುವಾರ ರಂದು ಕಾಗವಾಡದ ಶಿವಾನಂದ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ …
Read More »ಬೆಳಗಾವಿಯಲ್ಲಿ ಬಸ್ ಇಲ್ಲದೇ ಪ್ರಯಾಣಿಕರ ಪರದಾಟ
ಬೆಳಗಾವಿಯಲ್ಲಿ ಬಸ್ ಇಲ್ಲದೇ ಪ್ರಯಾಣಿಕರ ಪರದಾಟ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಸಾರಿಗೆ ಸಿಬ್ಬಂದಿಗಳ ಜತೆಗೆ ವಾಗ್ವಾದಕ್ಕೀಳಿದ ಪ್ರಯಾಣಿಕರು ಬೆಳಗಾವಿ ಟು ಗೋಕಾಕ ಮಾರ್ಗಕ್ಕೆ ಬಸ್ ಬಿಡುವಂತೆ ಪ್ರಯಾಣಿಕರ ಆಗ್ರಹ ಸಂಜೆ 06ಗಂಟೆಯಿಂದ ಈವರೆಗೂ ಬಸ್ ಬಿಡ್ತಿಲ್ಲ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ಗೋಕಾಕ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೆ ಹೋಗುವ 50ಕ್ಕೂ ಅಧಿಕ ಪ್ರಯಾಣಿಕರ ಪರದಾಟ
Read More »ಘಟಪ್ರಭಾ ಎಡದಂಡೆ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಘಟಪ್ರಭಾ ಎಡದಂಡೆ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಘಟಪ್ರಭಾ ಎಡದಂಡೆ, ಬಲದಂಡ, ನದಿಗೆ ಹುಕ್ಕೇರಿ ಕೊಟವಾಗಿ ಯಾತ ನೀರಾವರಿ ಎಡದಂಡೆ ಕಾಲುವೆ ನೀರು ಹರಿಸಲೇಬೇಕಾದ ಅನಿವಾರ್ಯ ಇದೆ. ಕೋಳವೆ ಬಾಂವಿ ಬೋರುಗಳು ಬತ್ತಿ ಹೋಗಿವೆ ಹಾಗೂ ದನಕರುಗಳಿಗೆ ಜಾನುವಾರುಗಳಿಗೆ ತುಂಬಾ ನೀರಿನ ಕೊರತೆ ಇರುವುದರಿಂದ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದ್ದಾರೆ. …
Read More »